ಕೊನೆಗೂ ನಿರೀಕ್ಷೆಗೆ ಬಿತ್ತು ತೆರೆ : IPL ಸೇರಲಿವೆ ಮತ್ತೆರಡು ತಂಡ, ಈ ದಿನ ನಡೆಯಲಿದೆ ಹರಾಜು ಪ್ರಕ್ರಿಯೆ

ತಂಡಗಳು ಬಿಡ್ಡಿಂಗ್ ಬಗ್ಗೆ ಮಾಹಿತಿ ಪಡೆಯಲು ಸೆಪ್ಟೆಂಬರ್ 21 ಕೊನೆಯ ದಿನವಾಗಿದೆ. ಆದರೆ ಬಿಡ್‌ಗಳನ್ನು ಅಕ್ಟೋಬರ್ 5 ರವರೆಗೆ ಆಯ್ಕೆ ಮಾಡಬಹುದು.   ಮೂಲಗಳ ಪ್ರಕಾರ ಬಿಡ್ಡಿಂಗ್ ಅಕ್ಟೋಬರ್ 17 ರಂದು ನಡೆಯಲಿದೆ ಎನ್ನಲಾಗಿದೆ. 

Written by - Ranjitha R K | Last Updated : Sep 14, 2021, 05:59 PM IST
  • ಐಪಿಎಲ್ ಹೆಚ್ಚು ರೋಚಕವಾಗಿರುತ್ತದೆ
  • 2 ಹೊಸ ತಂಡಗಳ ತಯಾರಿ
  • ಹರಾಜು ದಿನಾಂಕ ನಿಗದಿ
ಕೊನೆಗೂ ನಿರೀಕ್ಷೆಗೆ ಬಿತ್ತು ತೆರೆ : IPL ಸೇರಲಿವೆ ಮತ್ತೆರಡು ತಂಡ,  ಈ ದಿನ ನಡೆಯಲಿದೆ ಹರಾಜು ಪ್ರಕ್ರಿಯೆ title=
IPL ಸೇರಲಿವೆ ಮತ್ತೆರಡು ತಂಡ (photo zee news)

ನವದೆಹಲಿ : ಮುಂದಿನ ವರ್ಷದಿಂದ, ಐಪಿಎಲ್ (IPL) ಇನ್ನಷ್ಟು ಕುತೂಹಲಕಾರಿಯಾಗಲಿದೆ. ಏಕೆಂದರೆ 2022 ರಲ್ಲಿ ಭಾರತದ ಈ ಮೆಗಾ ಟಿ 20 ಲೀಗ್‌ನಲ್ಲಿ 2 ಹೊಸ ತಂಡಗಳು ಆಡಲಿವೆ. ಹೊಸ ಫ್ರಾಂಚೈಸ್ ಪಡೆಯಲು ಹರಾಜು (Auction) ಯಾವಾಗ ಎಂದು ತಿಳಿಯಲು  ಅಭಿಮಾನಿಗಳು ಕಾತುರರಾಗಿದ್ದಾರೆ. ಈಗ  ದಿನಾಂಕ ಕೂಡ ಬಹಿರಂಗವಾಗಿದೆ.

ಹರಾಜು ಪ್ರಕ್ರಿಯೆಯ ದಿನ ಘೋಷಣೆ : 
ಐಪಿಎಲ್ 2022 (IPL 2022) ಅನ್ನು 8 ತಂಡಗಳ ಬದಲಿಗೆ 10 ತಂಡಗಳೊಂದಿಗೆ ಆಡಲಾಗುತ್ತದೆ. ಎರಡೂ ಹೊಸ ತಂಡಗಳ ಹರಾಜು (Auction) ಅಕ್ಟೋಬರ್ 17 ರಂದು ನಡೆಯಲಿದೆ. ಗಮನಿಸಬೇಕಾದ ಸಂಗತಿಯೆಂದರೆ, ಅಕ್ಟೋಬರ್ 17 ರಿಂದ ಯುಎಇ (UAE)ಮತ್ತು ಒಮಾನ್‌ನಲ್ಲಿ T20 World Cup ಕೂಡ ಆರಂಭವಾಗುತ್ತಿದೆ. ಮತ್ತು ಬಹುಶಃ ಬಿಡ್ಡಿಂಗ್ ದುಬೈ ಅಥವಾ ಮಸ್ಕತ್ ನಲ್ಲಿರಬಹುದು ಎಂದು ಅಂದಾಜಿಸಲಾಗಿದೆ. 

ಇದನ್ನೂ ಓದಿ : ಮೂರು ಮಾದರಿ ಕ್ರಿಕೆಟ್ ನಲ್ಲಿ ಕೊಹ್ಲಿಯೇ ನಾಯಕ-ಬಿಸಿಸಿಐ ಸ್ಪಷ್ಟನೆ

ಅಕ್ಟೋಬರ್ 17 ರಂದು ಬಿಡ್ಡಿಂಗ್ :
ತಂಡಗಳು ಬಿಡ್ಡಿಂಗ್ ಬಗ್ಗೆ ಮಾಹಿತಿ ಪಡೆಯಲು ಸೆಪ್ಟೆಂಬರ್ 21 ಕೊನೆಯ ದಿನವಾಗಿದೆ. ಆದರೆ ಬಿಡ್‌ಗಳನ್ನು ಅಕ್ಟೋಬರ್ 5 ರವರೆಗೆ ಆಯ್ಕೆ ಮಾಡಬಹುದು.   ಮೂಲಗಳ ಪ್ರಕಾರ ಬಿಡ್ಡಿಂಗ್ ಅಕ್ಟೋಬರ್ 17 ರಂದು ನಡೆಯಲಿದೆ ಎನ್ನಲಾಗಿದೆ. 

2 ಹೊಸ ತಂಡಗಳ ತಯಾರಿ :
2022 ರಿಂದ ಪಂದ್ಯಾವಳಿಯಲ್ಲಿ ಭಾಗವಹಿಸಲು ಪ್ರಸ್ತಾಪಿಸಲಾದ ಎರಡು ಹೊಸ ತಂಡಗಳಲ್ಲಿ ಒಂದರ ಮಾಲೀಕತ್ವ ಮತ್ತು ಕಾರ್ಯಾಚರಣೆಯ ಹಕ್ಕುಗಳನ್ನು ಪಡೆಯಲು ಐಪಿಎಲ್ ಆಡಳಿತ (IPL Governing Council) ಮಂಡಳಿ ಆಗಸ್ಟ್ 31 ರಂದು ಬಿಡ್‌ಗಳನ್ನು ಆಹ್ವಾನಿಸಿತು.

ಇದನ್ನೂ ಓದಿ : Virat Kohli Luxurious Watch: ವಿಶ್ವದ ಈ ಅಪರೂಪದ ಗಡಿಯಾರದ ಮಾಲೀಕ ವಿರಾಟ್ ಕೊಹ್ಲಿ, ಬೆಲೆ ಎಷ್ಟು ಗೊತ್ತಾ?

ಮೂಲ ಬೆಲೆ 2000 ಕೋಟಿ ರೂ :
"ಯಾವುದೇ ಕಂಪನಿಯು 75 ಕೋಟಿ ಪಾವತಿಸಿ ಬಿಡ್ಡಿಂಗ್ ದಾಖಲೆಗಳನ್ನು ಖರೀದಿಸಬಹುದು. ಮೊದಲು, ಎರಡು ಹೊಸ ತಂಡಗಳ ಮೂಲ ಬೆಲೆಯನ್ನು 1700 ಕೋಟಿ ಎಂದು ಪರಿಗಣಿಸಲಾಗುತ್ತಿತ್ತು, ಆದರೆ ಈಗ ಮೂಲ ಬೆಲೆಯನ್ನು 2000 ಕೋಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಬಿಡ್ಡಿಂಗ್‌ ನಿಯಮಗಳು :
3000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ವಹಿವಾಟು ಹೊಂದಿರುವ ಕಂಪನಿಗಳಿಗೆ (Company)ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಹೇಳಲಾಗಿದೆ. "3 ಕ್ಕಿಂತ ಹೆಚ್ಚು ಕಂಪನಿಗಳಿಗೆ ಒಂದು ಗ್ರೂಪ್ ಮಾಡಲು ಅವಕಾಶ ಇಲ್ಲ ಎನ್ನಲಾಗಿದೆ. ಆದರೆ 3 ಕಂಪನಿಗಳು ಒಗ್ಗೂಡಿ ಒಂದು ತಂಡಕ್ಕೆ ಬಿಡ್ ಮಾಡಲು ಬಯಸಿದರೆ, ಅವಕಾಶ ನೀಡಲಾಗುವುದು ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News