ಸೌರವ್ ಗಂಗೂಲಿ ನಾಯಕತ್ವ ಗುಣದ ಬಗ್ಗೆ ವಿವಿಎಸ್ ಲಕ್ಷ್ಮಣ್ ಹೇಳಿದ್ದಿಷ್ಟು!

ಬಿಸಿಸಿಐ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸೌರವ್ ಗಂಗೂಲಿ ಬಗ್ಗೆ ಮಾಜಿ ಸಹ ಆಟಗಾರ ವಿವಿಎಸ್ ಲಕ್ಷ್ಮಣ್ ಅವರು ಕೆಲವು ಅದ್ಬುತ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ವಿಶೇಷವಾಗಿ ಸ್ವಾಭಾವಿಕವಾಗಿ ಬಂದಿರುವ ಗಂಗೂಲಿ ನಾಯಕತ್ವ ಗುಣದ ಬಗ್ಗೆ ಕೊಂಡಾಡಿದ್ದಾರೆ.

Last Updated : Oct 27, 2019, 01:39 PM IST
ಸೌರವ್ ಗಂಗೂಲಿ ನಾಯಕತ್ವ ಗುಣದ ಬಗ್ಗೆ ವಿವಿಎಸ್ ಲಕ್ಷ್ಮಣ್ ಹೇಳಿದ್ದಿಷ್ಟು! title=
Photo courtesy: Twitter

ನವದೆಹಲಿ: ಬಿಸಿಸಿಐ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸೌರವ್ ಗಂಗೂಲಿ ಬಗ್ಗೆ ಮಾಜಿ ಸಹ ಆಟಗಾರ ವಿವಿಎಸ್ ಲಕ್ಷ್ಮಣ್ ಅವರು ಕೆಲವು ಅದ್ಬುತ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ವಿಶೇಷವಾಗಿ ಸ್ವಾಭಾವಿಕವಾಗಿ ಬಂದಿರುವ ಗಂಗೂಲಿ ನಾಯಕತ್ವ ಗುಣದ ಬಗ್ಗೆ ಕೊಂಡಾಡಿದ್ದಾರೆ.

ಬ್ಯಾಟಿಂಗ್ ಸಲಹೆಗಾರರಾಗಿ ಬಂಗಾಳ ತಂಡವನ್ನು ಸೇರಿಕೊಂಡಿದ್ದ ಲಕ್ಷ್ಮಣ್ ಮಾತನಾಡಿ 'ನಾನು ಇಲ್ಲಿಗೆ ಬ್ಯಾಟಿಂಗ್ ಸಲಹೆಗಾರನಾಗಿ ಬಂದಿದ್ದೇ ಮತ್ತು ಸೌರವ್ ಆ ಸಮಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು. ನಾನು ಅವರ ಕೋಣೆಗೆ ಪ್ರವೇಶಿಸಿದಾಗ, ಅವರ ಸಣ್ಣ ಕೋಣೆ ನನಗೆ ಆಘಾತವನ್ನುಂಟು ಮಾಡಿತು. ಅವರು ಭಾರತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ. ಇದು ನನಗೆ ಆಶ್ಚರ್ಯ ಮತ್ತು ಸ್ಫೂರ್ತಿ ನೀಡಿತು. ವಿಶ್ವ ಕ್ರಿಕೆಟ್‌ನ ದಂತಕಥೆ ಎಂಬುದನ್ನು, ಕೋಲ್ಕತ್ತಾದ ರಾಜಕುಮಾರ ಮತ್ತು ನೀಲಿ ಕಣ್ಣಿನ ಹುಡುಗ ಎನ್ನುವುದನ್ನು ಅವರು ಮರೆತು ಜಂಟಿ ಕಾರ್ಯದರ್ಶಿ ಪಾತ್ರವನ್ನು ನಿರ್ವಹಿಸುತ್ತಿದ್ದರು' ಎಂದು ಲಕ್ಷ್ಮಣ್ ಹೇಳಿದರು.

ಲಾರ್ಡ್ಸ್ ಗೆ ಪಾದಾರ್ಪಣೆ ಮಾಡಿದಾಗಿನಿಂದ, ಸೌರವ್ ಹಿಂತಿರುಗಿ ನೋಡಲಿಲ್ಲ. ಅವರೊಬ್ಬ ವಿಶೇಷ ಕ್ರಿಕೆಟಿಗ, ಆದರೆ ನನಗೆ ಸೌರವ್ ನಾಯಕನಾಗಿ ಬಹಳ ವಿಶೇಷ, ಅವರು ಭಾರತೀಯ ಕ್ರಿಕೆಟ್ ತಂಡದ ಅದೃಷ್ಟವನ್ನು ಪುನರುಜ್ಜೀವನಗೊಳಿಸಿದ ರೀತಿ ತಂಡಕ್ಕೆ ಭದ್ರತೆಯನ್ನು ನೀಡಿತು. ಅಂದಿನಿಂದ ಇಂದಿನವರೆಗೂ ಭಾರತೀಯ ಕ್ರಿಕೆಟ್ ಹಿಂತಿರುಗಿ ನೋಡಲಿಲ್ಲ. ಒಬ್ಬ ನಾಯಕನು ಉದಾಹರಣೆಯಿಂದ ಮುನ್ನಡೆಸಿದಾಗ ಸ್ಪೂರ್ತಿದಾಯಕನಾಗುತ್ತಾನೆ, 'ಎಂದು ಲಕ್ಷ್ಮಣ್ ಹೇಳಿದರು.

ಮುಂಬೈಯಲ್ಲಿ ಬುಧವಾರ 39 ನೇ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಗಂಗೂಲಿಯನ್ನು ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬಂಗಾಳ (ಸಿಎಬಿ) ಸನ್ಮಾನಿಸಿದ್ದರಿಂದ ಲಕ್ಷ್ಮಣ್ ಮತ್ತು ಗಂಗೂಲಿಯ ಮೊದಲ ನಾಯಕ ಮೊಹಮ್ಮದ್ ಅಜರುದ್ದೀನ್ ವಿಶೇಷ ಆಹ್ವಾನಿತರಾಗಿದ್ದರು. 

Trending News