IND vs ENG: ಭಾರತ-ಇಂಗ್ಲೆಂಡ್ ಟೆಸ್ಟ್’ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು? ಟಾಪ್ 5 ಬೌಲರ್ಗಳ ಪಟ್ಟಿ ಇಲ್ಲಿದೆ

IND vs ENG Test Series: ಭಾರತ ಮತ್ತು ಇಂಗ್ಲೆಂಡ್ ನಡುವೆ ಇದುವರೆಗೆ ನಡೆದ ಟೆಸ್ಟ್ ಪಂದ್ಯಗಳಲ್ಲಿ ಐದು ಬೌಲರ್‌’ಗಳು ಅದ್ಭುತವಾಗಿ ಆಟವಾಡಿದ್ದಾರೆ. ಅಂದಹಾಗೆ, ಇದುವರೆಗೆ ನಡೆದ ಟೆಸ್ಟ್ ಪಂದ್ಯಗಳಲ್ಲಿ ಯಾವ ಬೌಲರ್ ಹೆಚ್ಚು ವಿಕೆಟ್ ಪಡೆದಿದ್ದಾರೆ ಎಂಬುದನ್ನು ನೋಡೋಣ

Written by - Bhavishya Shetty | Last Updated : Jan 20, 2024, 11:58 AM IST
    • ಭಾರತ ಮತ್ತು ಇಂಗ್ಲೆಂಡ್ ನಡುವೆ ಉನ್ನತ ಮಟ್ಟದ ಟೆಸ್ಟ್ ಸರಣಿ
    • ಐದು ಪಂದ್ಯಗಳ ಟೆಸ್ಟ್ ಸರಣಿಯು ಜನವರಿ 25 ರಿಂದ ಪ್ರಾರಂಭ
    • ಟೆಸ್ಟ್ ಪಂದ್ಯಗಳಲ್ಲಿ ಯಾವ ಬೌಲರ್ ಹೆಚ್ಚು ವಿಕೆಟ್ ಪಡೆದಿದ್ದಾರೆ?
IND vs ENG: ಭಾರತ-ಇಂಗ್ಲೆಂಡ್ ಟೆಸ್ಟ್’ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು? ಟಾಪ್ 5 ಬೌಲರ್ಗಳ ಪಟ್ಟಿ ಇಲ್ಲಿದೆ title=
India-England Test

IND vs ENG Test Series: ಭಾರತ ಮತ್ತು ಇಂಗ್ಲೆಂಡ್ ನಡುವೆ ಉನ್ನತ ಮಟ್ಟದ ಟೆಸ್ಟ್ ಸರಣಿಯು ಪ್ರಾರಂಭವಾದಾಗ, ಬ್ಯಾಟ್ ಮತ್ತು ಬಾಲ್‌’ನೊಂದಿಗೆ ಬಹಳ ರೋಚಕ ಯುದ್ಧ ನಡೆಯುವುದು ಸಾಮಾನ್ಯ. ಇದೀಗ ಐದು ಪಂದ್ಯಗಳ ಟೆಸ್ಟ್ ಸರಣಿಯು ಜನವರಿ 25 ರಿಂದ ಪ್ರಾರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಭಾರತ ತಂಡವು ಹೈದರಾಬಾದ್‌’ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಇದುವರೆಗೆ ನಡೆದ ಟೆಸ್ಟ್ ಪಂದ್ಯಗಳಲ್ಲಿ ಐದು ಬೌಲರ್‌’ಗಳು ಅದ್ಭುತವಾಗಿ ಆಟವಾಡಿದ್ದಾರೆ. ಅಂದಹಾಗೆ, ಇದುವರೆಗೆ ನಡೆದ ಟೆಸ್ಟ್ ಪಂದ್ಯಗಳಲ್ಲಿ ಯಾವ ಬೌಲರ್ ಹೆಚ್ಚು ವಿಕೆಟ್ ಪಡೆದಿದ್ದಾರೆ ಎಂಬುದನ್ನು ನೋಡೋಣ.

ಇದನ್ನೂ ಓದಿ: ರಾಮ ಮಂದಿರ- ಬಾಬ್ರಿ ವಿವಾದದ ಕುರಿತು ಮಹತ್ವದ ತೀರ್ಪು ನೀಡಿದ ಆ 5 ನ್ಯಾಯಾಧೀಶರು ಯಾರು ಗೊತ್ತಾ?

ಇಂಗ್ಲೆಂಡ್‌’ನ ಸ್ಟಾರ್ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌’ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಜೇಮ್ಸ್ ಆಂಡರ್ಸನ್ ಇದುವರೆಗೆ ಭಾರತದ ವಿರುದ್ಧ 35 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 24.89 ರ ಬೌಲಿಂಗ್ ಸರಾಸರಿಯಲ್ಲಿ 139 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ 6 ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌’ನಲ್ಲಿ ಒಟ್ಟು 690 ವಿಕೆಟ್ ಪಡೆದಿದ್ದಾರೆ.

ಭಾರತದ ಮಾಜಿ ಲೆಗ್ ಸ್ಪಿನ್ನರ್ ಭಾಗವತ್ ಚಂದ್ರಶೇಖರ್ ಇಂಗ್ಲೆಂಡ್ ವಿರುದ್ಧ 23 ಟೆಸ್ಟ್ ಪಂದ್ಯಗಳಲ್ಲಿ 27.27 ಸರಾಸರಿಯಲ್ಲಿ 95 ವಿಕೆಟ್ ಪಡೆದಿದ್ದಾರೆ. ಅತ್ಯುತ್ತಮ ಬೌಲಿಂಗ್ ಪ್ರದರ್ಶನವೆಂದರೆ 107 ರನ್‌’ಗಳಿಗೆ 9 ವಿಕೆಟ್ ಪಡೆದಿರುವುದು. ಇನ್ನು ಇವರು ಭಾರತ ಪರ 58 ಟೆಸ್ಟ್ ಪಂದ್ಯಗಳಲ್ಲಿ 242 ವಿಕೆಟ್ ಪಡೆದಿದ್ದಾರೆ.

ಭಾರತದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಇಂಗ್ಲೆಂಡ್ ವಿರುದ್ಧ 19 ಟೆಸ್ಟ್ ಪಂದ್ಯಗಳಲ್ಲಿ 30.59 ಸರಾಸರಿಯಲ್ಲಿ 92 ವಿಕೆಟ್ ಪಡೆದಿದ್ದಾರೆ. 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌’ನಲ್ಲಿ ಅನಿಲ್ ಕುಂಬ್ಳೆ 35 ಬಾರಿ ಐದು ವಿಕೆಟ್ ಪಡೆದಿದ್ದು, 8 ಬಾರಿ ಪಂದ್ಯವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ.

ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧ 19 ಟೆಸ್ಟ್ ಪಂದ್ಯಗಳಲ್ಲಿ 28.59 ಸರಾಸರಿಯಲ್ಲಿ 88 ವಿಕೆಟ್ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ ಭಾರತ ಪರ 95 ಟೆಸ್ಟ್ ಪಂದ್ಯಗಳಲ್ಲಿ 490 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರವಿಚಂದ್ರನ್ ಅಶ್ವಿನ್ 34 ಬಾರಿ ಐದು ವಿಕೆಟ್ ಪಡೆದಿದ್ದಾರೆ ಮತ್ತು 8 ಬಾರಿ ಪಂದ್ಯವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: Rohit Sharma: ಟಿ20 ವಿಶ್ವಕಪ್’ಗೆ ಈ 10 ಆಟಗಾರರು ಪಕ್ಕಾ ಆಗಿದ್ದಾರೆ ಎಂದ ರೋಹಿತ್ ಶರ್ಮಾ!

ಬಿಷನ್ ಸಿಂಗ್ ಬೇಡಿ ಇಂಗ್ಲೆಂಡ್ ವಿರುದ್ಧ 22 ಟೆಸ್ಟ್ ಪಂದ್ಯಗಳಲ್ಲಿ 29.87 ಸರಾಸರಿಯಲ್ಲಿ 85 ವಿಕೆಟ್ ಪಡೆದಿದ್ದಾರೆ. ಭಾರತ ಪರ 67 ಟೆಸ್ಟ್ ಪಂದ್ಯಗಳಲ್ಲಿ 266 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ, ಬಿಷನ್ ಸಿಂಗ್ ಬೇಡಿ 14 ಬಾರಿ ಐದು ವಿಕೆಟ್ ಪಡೆದಿದ್ದಾರೆ ಮತ್ತು ಒಮ್ಮೆ ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News