ಲಂಡನ್ ಕಾಲೇಜಿನಲ್ಲಿ ಪದವಿ ಪಡೆದ ಪುತ್ರಿ: ಖುಷಿ, ಹೆಮ್ಮೆಯಿಂದ ಕುಣಿದಾಡಿದ ಟೀಂ ಇಂಡಿಯಾ ಮಾಜಿ ನಾಯಕ!

Sourav Ganguly daughter Sana Ganguly: ಲಂಡನ್‌’ನ ಪ್ರತಿಷ್ಠಿತ ಯುನಿವರ್ಸಿಟಿ ಕಾಲೇಜಿನಿಂದ ಸನಾ ಗಂಗೂಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಈ ಕ್ಷಣದ ಫೋಟೋಗಳನ್ನು ಸ್ವತಃ ಗಂಗೂಲಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

Written by - Bhavishya Shetty | Last Updated : Sep 9, 2023, 11:16 AM IST
    • ಸೌರವ್ ಗಂಗೂಲಿ ಅವರ ಮಗಳು ಹೆಸರು ಸನಾ ಗಂಗೂಲಿ.
    • ಇಂಗ್ಲೆಂಡ್‌’ನ ಲಂಡನ್ ಕಾಲೇಜಿನಿಂದ ಪದವಿಯನ್ನು ಇದೀಗ ಪೂರ್ಣಗೊಳಿಸಿದ್ದಾರೆ.
    • ಈ ಸಂತಸದ ಕ್ಷಣದಲ್ಲಿ ಭಾಗಿಯಾದ ಗಂಗೂಲಿ ವಿಶೇಷ ಪೋಸ್ಟ್ ಶೇರ್ ಮಾಡಿದ್ದಾರೆ.
ಲಂಡನ್ ಕಾಲೇಜಿನಲ್ಲಿ ಪದವಿ ಪಡೆದ ಪುತ್ರಿ: ಖುಷಿ, ಹೆಮ್ಮೆಯಿಂದ ಕುಣಿದಾಡಿದ ಟೀಂ ಇಂಡಿಯಾ ಮಾಜಿ ನಾಯಕ! title=
Sourav Ganguly daughter Sana Ganguly

Sourav Ganguly daughter Sana Ganguly: ಸೌರವ್ ಗಂಗೂಲಿ ಭಾರತದ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿದ್ದಾರೆ. ಟೀಂ ಇಂಡಿಯಾ ಪರ ಹಲವು ಪಂದ್ಯಗಳನ್ನಾಡಿರುವ ಗಂಗೂಲಿ, ತನ್ನ ಸ್ವಂತ ಬಲದಿಂದಲೇ ಅದೆಷ್ಟೋ ಬಾರಿ ಗೆಲುವು ತಂದುಕೊಂಡಿದ್ದಾರೆ. ಇನ್ನು ಸದ್ಯ ಸೌರವ್ ಐಪಿಎಲ್ ತಂಡ ದೆಹಲಿ ಕ್ಯಾಪಿಟಲ್ಸ್ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ: ಭಾರೀ ಇಳಿಕೆ ಕಂಡ ಚಿನ್ನದ ಬೆಲೆ: ಸಾರ್ವಕಾಲಿಕ ಕುಸಿತದ ಬಳಿಕ 10 ಗ್ರಾಂ ಬಂಗಾರದ ದರ ಎಷ್ಟಾಗಿದೆ?

ಇನ್ನು ಈ ವರದಿಯಲ್ಲಿ ನಾವಿಂದು ಗಂಗೂಲಿ ಅಲ್ಲ, ಅವರ ಪುತ್ರಿಯ ಬಗ್ಗೆ ಮಾತನಾಡಲಿದ್ದೇವೆ. ಸೌರವ್ ಗಂಗೂಲಿ ಅವರ ಮಗಳು ಹೆಸರು ಸನಾ ಗಂಗೂಲಿ.  ಇಂಗ್ಲೆಂಡ್‌’ನ ಲಂಡನ್ ಕಾಲೇಜಿನಿಂದ ಪದವಿಯನ್ನು ಇದೀಗ ಪೂರ್ಣಗೊಳಿಸಿದ್ದಾರೆ. ಈ ಸಂತಸದ ಕ್ಷಣದಲ್ಲಿ ಭಾಗಿಯಾದ ಗಂಗೂಲಿ ವಿಶೇಷ ಪೋಸ್ಟ್ ಒಂದನ್ನು ಬರೆದು ಶೇರ್ ಮಾಡಿದ್ದಾರೆ.

ಲಂಡನ್‌’ನ ಪ್ರತಿಷ್ಠಿತ ಯುನಿವರ್ಸಿಟಿ ಕಾಲೇಜಿನಿಂದ ಸನಾ ಗಂಗೂಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಈ ಕ್ಷಣದ ಫೋಟೋಗಳನ್ನು ಸ್ವತಃ ಗಂಗೂಲಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ಮಗಳ ಗ್ರ್ಯಾಜುಯೇಷನ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಒಳ್ಳೆಯದಾಗಲಿ ಮಗಳೇ…” ಎಂದಿದ್ದಾರೆ.

ಪುತ್ರಿಯ ಗ್ರ್ಯಾಜುಯೇಷನ್‌ ಕಾರ್ಯಕ್ರಮವನ್ನು ನೋಡುವ ಸಲುವಾಗಿ ಸೌರವ್‌ ಗಂಗೂಲಿ ಹಾಗೂ ಅವರ ಪತ್ನಿ ಡೋನಾ ಗಂಗೂಲಿ ಲಂಡನ್‌’ಗೆ ಭೇಟಿ ನೀಡಿದ್ದರು.

ಸನಾ ಓದು ಮತ್ತು ಬರವಣಿಗೆಯಲ್ಲಿ ಬಾಲ್ಯದಿಂದ ಚುರುಕಾಗಿದ್ದರು. ಇದಕ್ಕೆ ಪುರಾವೆ ಎಂಬಂತೆ 12ನೇ ತರಗತಿಯಲ್ಲಿ ಶೇ 98 ರಷ್ಟು ಅಂಕ ಪಡೆದಿದ್ದರು ಸನಾ. 12 ನೇ ತರಗತಿಯಲ್ಲಿ ಉತ್ತೀರ್ಣರಾದ  ಬಳಿಕ ಸನಾ ಲಂಡನ್‌’ಗೆ ಹಾರಿದ್ದರು. ಅಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಲಂಡನ್‌ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರವೇಶ ಪಡೆದರು. ಈ ಸಮಯದಲ್ಲಿ, ಸನಾ ಅನೇಕ ಕಂಪನಿಗಳಲ್ಲಿ ಕೆಲಸ ಕೂಡ ಮಾಡಿದ್ದು, ಅವರ ಕ್ಷೇತ್ರದಲ್ಲಿ ಅನುಭವವನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಈಕೆ ಭಾರತದ ಅತ್ಯಂತ ಶ್ರೀಮಂತ ಬಾಲನಟಿ: 17ರ ಹರೆಯದಲ್ಲೇ 10 ಕೋಟಿ ಸಂಭಾವನೆ ಪಡೆಯುತ್ತಾಳೆ ಈ ಬಾಲೆ

ಸನಾ ಗಂಗೂಲಿ ಅವರು 2020 ರಿಂದ 2022 ರ ವರೆಗೆ ಭಾರತದ ಉನ್ನತ ಕಂಪನಿಯಾದ ICICI ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌’ನಲ್ಲಿ ಇಂಟರ್ನ್‌ಶಿಪ್ ಮಾಡಿದ್ದಾರೆ. ಇದಲ್ಲದೆ, ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ PwC ಯಲ್ಲಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. PWC ಯಲ್ಲಿ ಇಂಟರ್ನ್‌ಶಿಪ್ ಮಾಡುವ ಸಂದರ್ಭದಲ್ಲಿ ಸುಮಾರು 30 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News