ಎರಡನೇ ಟೆಸ್ಟ್ ಪಂದ್ಯದ ಮುನ್ನಾದಿನದ ಸುದ್ದಿಗೋಷ್ಠಿಗೆ ವಿರಾಟ್ ಗೈರು ಆಗಿದ್ದೇಕೆ?

ಜನವರಿ 2 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮುನ್ನಾದಿನದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಗೈರು ಹಾಜರಾಗಿದ್ದರು.ಇನ್ನೊಂದೆಡೆಗೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ  ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ಈಗ ಕೊಹ್ಲಿ ಗೈರಾಗಿರುವುದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. 

Written by - Zee Kannada News Desk | Last Updated : Jan 2, 2022, 05:15 PM IST
  • ಜನವರಿ 2 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮುನ್ನಾದಿನದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಗೈರು ಹಾಜರಾಗಿದ್ದರು.
  • ಇನ್ನೊಂದೆಡೆಗೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ಈಗ ಕೊಹ್ಲಿ ಗೈರಾಗಿರುವುದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ಮುನ್ನಾದಿನದ ಸುದ್ದಿಗೋಷ್ಠಿಗೆ ವಿರಾಟ್ ಗೈರು ಆಗಿದ್ದೇಕೆ?  title=

ನವದೆಹಲಿ: ಜನವರಿ 2 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮುನ್ನಾದಿನದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಗೈರು ಹಾಜರಾಗಿದ್ದರು.ಇನ್ನೊಂದೆಡೆಗೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ  ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ಈಗ ಕೊಹ್ಲಿ ಗೈರಾಗಿರುವುದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. 

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಡಿಕೆಶಿ ನಡಿಗೆ ತಾಲೀಮು!: ಸುಳ್ಳಿನಜಾತ್ರೆ ಎಂದು ಬಿಜೆಪಿ ವ್ಯಂಗ್ಯ

ಆದರೆ ನಿಜವಾದ ಸಂಗತಿ ಏನೆಂದರೆ ವಿರಾಟ್ ಅವರು ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮೊದಲು ವಿವಾದಾತ್ಮಕ ಮಾಧ್ಯಮ ಸಂವಾದದ ನಂತರ ಯಾವುದೇ ಸುದ್ದಿಗೊಷ್ಟಿಗೆ ಹಾಜರಾಗಿಲ್ಲ.ಮಾಧ್ಯಮಗಳೊಂದಿಗಿನ ಆ ಸಂವಾದದ ನಂತರ ವಿರಾಟ್ ಅವರನ್ನು ಪತ್ರಿಕಾಗೋಷ್ಠಿಗಳಿಂದ ದೂರ ಇಡಲಾಗಿದೆ ಎಂದು ನಂಬಲಾಗಿತ್ತು.

ಇದನ್ನೂ ಓದಿ: ಎಸ್ಪಿ ಅಧಿಕಾರಕ್ಕೆ ಬಂದಲ್ಲಿ 300 ಯೂನಿಟ್ ವಿದ್ಯುತ್ ಉಚಿತ- ಅಖಿಲೇಶ್ ಯಾದವ್

ಆದಾಗ್ಯೂ, ಭಾನುವಾರ, ಅಂತಹ ಎಲ್ಲಾ ವದಂತಿಗಳಿಗೆ ದ್ರಾವಿಡ್ ತೆರೆ ಎಳೆದಿದ್ದಾರೆ, ವಿರಾಟ್ ಪಿಸಿಗಳಿಗೆ ಹಾಜರಾಗದಿರಲು ನಿಜವಾದ ಕಾರಣವೆಂದರೆ ಮೂರನೇ ಟೆಸ್ಟ್‌ನ ಮುನ್ನಾದಿನದಂದು ಮಾಧ್ಯಮ ವ್ಯವಸ್ಥಾಪಕರು ಅವರನ್ನು ದೊಡ್ಡ ಪ್ರತಿಕಾಗೊಷ್ಟಿಗೆ ಸಿದ್ಧವಾಗುತ್ತಿದ್ದಾರೆ.ಅದು ವಿರಾಟ್ ಕೊಹ್ಲಿ ಅವರ 100 ನೇ ಟೆಸ್ಟ್ ಕೂಡ ಆಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಹೊಸ ವರ್ಷದಂದು ಶೇ 50 ರಷ್ಟು ಕೊರೊನಾ ಪ್ರಕರಣಗಳು ಹೆಚ್ಚಳ

'ಸುದ್ದಿಗೋಷ್ಠಿಯಲ್ಲಿ ಯಾರು ಹಾಜರಾಗುತ್ತಾರೆ ಎಂಬುದನ್ನು ನಾನು ನಿರ್ಧರಿಸುವುದಿಲ್ಲ.ಮಾಧ್ಯಮ ವ್ಯವಸ್ಥಾಪಕರು ನಿರ್ಧರಿಸಿದ್ದಾರೆ ಮತ್ತು ವಿರಾಟ್ ಕೇಪ್ ಟೌನ್ ಟೆಸ್ಟ್‌ ಸುದ್ದಿಗೋಷ್ಠಿಗೆ ಹಾಜರಾಗಲಿದ್ದಾರೆ ಎಂದು ಅವರು ನನಗೆ ಹೇಳಿದ್ದು ನೆನಪಿದೆ, ಅದು ಅವರ 100 ನೇ ಟೆಸ್ಟ್.ಆ ದಿನ ಪತ್ರಕರ್ತರೊಂದಿಗೆ ಮಾತನಾಡಲು ಒಳ್ಳೆಯ ಸಮಯ ಸಿಗುತ್ತದೆ." ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News