close

News WrapGet Handpicked Stories from our editors directly to your mailbox

ವಿಶ್ವಕಪ್‌ನಿಂದ ವಿಜಯ್ ಶಂಕರ್ ಔಟ್, ಮಾಯಾಂಕ್ ಅಗರವಾಲ್‌ಗೆ ಸ್ಥಾನ ಸಾಧ್ಯತೆ!

ನೆಟ್ ಪ್ರಾಕ್ಟೀಸ್ ವೇಳೆ ಜಸ್ಪ್ರೀತ್ ಬುಮ್ರಾ ಹಾಕಿದ ಯಾರ್ಕರ್ ನಿಂದ ವಿಜಯ್ ಕಾಲಿಗೆ ಪೆಟ್ಟಾಗಿದ್ದು, ಸದ್ಯಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ ಅವರನ್ನು ತವರಿಗೆ ಕಳಿಸುವುದಾಗಿ ಬಿಸಿಸಿಐ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

Updated: Jul 1, 2019 , 04:40 PM IST
ವಿಶ್ವಕಪ್‌ನಿಂದ ವಿಜಯ್ ಶಂಕರ್ ಔಟ್, ಮಾಯಾಂಕ್ ಅಗರವಾಲ್‌ಗೆ ಸ್ಥಾನ ಸಾಧ್ಯತೆ!

ನವದೆಹಲಿ: ಕಾಲ್ಬೆರಳಿನ ಗಾಯಕ್ಕೀಡಾಗಿರುವ ಭಾರತದ ಆಲ್ ರೌಂಡರ್ ವಿಜಯ್ ಶಂಕರ್ ಅವರು ಐಸಿಸಿ ವಿಶ್ವಕಪ್ 2019ರಿಂದ ಹೊರಗುಳಿದಿದ್ದಾರೆ. ವಿಜಯ್ ಸ್ಥಾನಕ್ಕೆ ಟೀಮ್ ಇಂಡಿಯಾದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಗೆ ಸ್ಥಾನ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ನೆಟ್ ಪ್ರಾಕ್ಟೀಸ್ ವೇಳೆ ಜಸ್ಪ್ರೀತ್ ಬುಮ್ರಾ ಹಾಕಿದ ಯಾರ್ಕರ್ ನಿಂದ ವಿಜಯ್ ಕಾಲಿಗೆ ಪೆಟ್ಟಾಗಿದ್ದು, ಸದ್ಯಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ ಅವರನ್ನು ತವರಿಗೆ ಕಳಿಸುವುದಾಗಿ ಬಿಸಿಸಿಐ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಈ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗಲಿದ್ದು, ಭಾರತದ 15 ಜನರ ತಂಡದಲ್ಲಿ ಸೇರಿಕೊಳ್ಳಲಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ್ದ ಮಯಾಂಕ್, ಏಕದಿನ ಮಾದರಿಯಲ್ಲಿ ಇನ್ನೂ ಭಾರತ ಪ್ರತಿನಿಧಿಸಿಲ್ಲ. ಮುಂದಿನ ಎರಡು ಪಂದ್ಯಗಳಲ್ಲಿ ರಿಷಭ್ ಪಂತ್ ವಿಫಲವಾದರೆ, ಕೆ.ಎಲ್. ರಾಹುಲ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲು ಬಿಸಿಸಿಐ ಚಿಂತನೆ ನಡೆಸಿದೆ.