ಫೈನಲ್’ನಲ್ಲಿ ಮುಗ್ಗರಿಸಿದ ಭಾರತ-ನನಸಾಗಲಿಲ್ಲ ಟ್ರೋಫಿ ಕನಸು.. 6ನೇ ಬಾರಿ ವಿಶ್ವಕಿರೀಟ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

India vs Australia, World Cup 2023 Final: ಮಹಾ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್, ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 240 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು.

Written by - Bhavishya Shetty | Last Updated : Nov 19, 2023, 09:21 PM IST
    • ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ 2023ರ ಅಂತಿಮ ಪಂದ್ಯ
    • ಮಹಾ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್
    • ಟೀಂ ಇಂಡಿಯಾದಲ್ಲಿ ಈ ಬಾರಿ ವೈಫಲ್ಯ ಕಂಡುಬಂದಿದ್ದು ಸುಳ್ಳಲ್ಲ
ಫೈನಲ್’ನಲ್ಲಿ ಮುಗ್ಗರಿಸಿದ ಭಾರತ-ನನಸಾಗಲಿಲ್ಲ ಟ್ರೋಫಿ ಕನಸು.. 6ನೇ ಬಾರಿ ವಿಶ್ವಕಿರೀಟ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ title=
World Cup 2023 Final

India vs Australia, World Cup 2023 Final: ಅಹಮದಾಬಾದ್‌’ನ ಪ್ರತಿಷ್ಠಿತ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ 2023ರ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ 6ನೇ ಬಾರಿ ಟ್ರೋಫಿ ಎತ್ತಿಹಿಡಿದಿದೆ.

ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡ ಪ್ಯಾಲಿಸ್ತೀನ್ ಬೆಂಬಲಿಗ

ಮಹಾ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್, ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 240 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು.

ಟೀಂ ಇಂಡಿಯಾದಲ್ಲಿ ಈ ಬಾರಿ ವೈಫಲ್ಯ ಕಂಡುಬಂದಿದ್ದು ಸುಳ್ಳಲ್ಲ. ಇದುವರೆಗೆ ಮಿಂಚಿದ್ದ ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರು ಮಂಕಾಗಿದ್ದು ವೈಫಲ್ಯವೇ ಎನ್ನಬಹುದು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಕೂಡ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ವಿಫಲರಾದರು.

ಇದನ್ನೂ ಓದಿ: “ನನ್ನನ್ನು ಕರೆದಿಲ್ಲ… ವಿಶ್ವಕಪ್ ಫೈನಲ್ ಪಂದ್ಯ ನಾನು ನೋಡಲ್ಲ”- ಕ್ರಿಕೆಟ್ ದಿಗ್ಗಜ ಕಪಿಲ್ ದೇವ್

ಭಾರತ ಪರ ಬ್ಯಾಟ್ ಬೀಸಿದ ಆರಂಭಿಕ ಮತ್ತು ನಾಯಕ ರೋಹಿತ್ ಶರ್ಮಾ 31 ಎಸೆತಕ್ಕೆ 47 ರನ್ ಸಿಡಿಸಿ ಉತ್ತಮ ಆರಂಭ ನೀಡಿದ್ದರು. ಇನ್ನು ಶುಭ್ಮನ್ ಗಿಲ್ 7 ಎಸೆತಕ್ಕೆ 4 ರನ್, ವಿರಾಟ್ ಕೊಹ್ಲಿ 63 ಎಸೆತಕ್ಕೆ 54 ರನ್, ಕೆ ಎಲ್ ರಾಹುಲ್ 107 ಎಸೆತಕ್ಕೆ 66 ರನ್, ರವೀಂದ್ರ ಜಡೇಜಾ 22 ಎಸೆತಕ್ಕೆ 9 ರನ್, ಸೂರ್ಯಕುಮಾರ್ 28 ಎಸೆತಕ್ಕೆ 18 ರನ್, ಮೊಹಮ್ಮದ್ ಶಮಿ 10 ಎಸೆತಕ್ಕೆ 6 ರನ್, ಜಸ್ಪ್ರೀತ್ ಬುಮ್ರ 3 ಎಸೆತಕ್ಕೆ 1 ರನ್, ಕುಲ್ದೀಪ್ ಯಾದವ್ 10 ಎಸೆತಕ್ಕೆ 10 ರನ್, ಮೊಹಮ್ಮದ್ ಸಿರಾಜ್ 8 ಎಸೆತದಲ್ಲಿ 9 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News