World Cup 2023, Rohit Sharma: ಲೀಗ್ ಹಂತದ ಪಂದ್ಯಗಳಲ್ಲಿ ಟೀಂ ಇಂಡಿಯಾದ ಅಬ್ಬರದ ಮುಂದೆ ಯಾವೊಂದು ತಂಡವೂ ಕೂಡ ದೃಢವಾಗಿ ನಿಲ್ಲಲು ಸಾಧ್ಯವಾಗಿಲ್ಲ. ಒಟ್ಟಾರೆಯಾಗಿ ಈ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಪಡೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಈ ಎಲ್ಲಾ ಗೆಲುವುಗಳ ಹಿಂದೆ ಒಬ್ಬ ಆಟಗಾರ ಕೊಡುಗೆ ಇಲ್ಲ. ಬದಲಾಗಿ, ಪ್ರತಿಯೊಬ್ಬ ಆಟಗಾರನೂ ಸಹ ತಮ್ಮ ಅತ್ಯುನ್ನತ ಪ್ರದರ್ಶನ ನೀಡಿದ್ದಾರೆ.
ಇದನ್ನೂ ಓದಿ: ಸೆಮಿ ಫೈನಲ್ ನಲ್ಲಿ ಟಾಸ್ ಗೆಲುವು ಎಷ್ಟು ಮುಖ್ಯ ? ಟೀಂ ಇಂಡಿಯಾ ನಾಯಕ ಹೇಳಿದ್ದೇನು ?
ಇದೀಗ ರೋಹಿತ್ ಶರ್ಮಾಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದನ್ನು ಕೇಳಲಾಗಿತ್ತು, ಸತತ ಗೆಲುವು ಕಂಡ ಭಾರತದ ಯಶಸ್ಸಿನ ರೂವಾರಿ ಯಾರೆಂದು ಕೇಳಿದಾಗ, ಹಿಟ್ ಮ್ಯಾನ್ ಉತ್ತರಿಸಿದ್ದು ಹೀಗೆ...
“ಡ್ರೆಸ್ಸಿಂಗ್ ಕೋಣೆಯ ವಾತಾವರಣವು ಅದ್ಭುತವಾಗಿದೆ. ಒಬ್ಬ ಅಥವಾ ಇಬ್ಬರು ಆಟಗಾರರ ಸಹಾಯದಿಂದ ಅಂತಹ ವಾತಾವರಣವನ್ನು ಸೃಷ್ಟಿಸುವುದು ಅಸಾಧ್ಯ, ಅದಕ್ಕೆ ಎಲ್ಲರ ಪ್ರಯತ್ನಗಳು ಬೇಕು. ಬೆಂಬಲ ಸಿಬ್ಬಂದಿ ಮತ್ತು ಇತರ ಎಲ್ಲ ಜನರ ಸಹಾಯದಿಂದ ಇಂತಹ ವಾತಾವರಣವನ್ನು ಸೃಷ್ಟಿಯಾಗಿದೆ” ಎಂದು ಹೇಳಿದರು.
ವಿಶ್ವಕಪ್ 2023 ರಲ್ಲಿ ಭಾರತೀಯ ತಂಡದ ಯಶಸ್ಸಿನ ಬಗ್ಗೆ ಅನುಭವಿ ಒಬ್ಬರು ಮಾತನಾಡಿರುವಂತೆ, “ಎಲ್ಲಾ ಆಟಗಾರರು ಉತ್ತಮ ರೂಪದಲ್ಲಿ ಮಾತ್ರವಲ್ಲ, ಪರಸ್ಪರರ ಯಶಸ್ಸನ್ನು ಆಚರಿಸುತ್ತಾರೆ. ಇದು ಉತ್ತಮ ಪ್ರದರ್ಶನ ನೀಡಲು ಪರಸ್ಪರ ಪ್ರೇರಣೆ ನೀಡುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೆಮಿಫೈನಲ್’ಗೆ ಟೀಂ ಇಂಡಿಯಾದ ಪ್ಲೇಯಿಂಗ್ 11 ಪ್ರಕಟಿಸಿದ ರೋಹಿತ್-ದ್ರಾವಿಡ್
ಇನ್ನು ಇದುವರೆಗೆ ನಾಕೌಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಹೆಚ್ಚು ಸೋಲನ್ನೇ ಅನುಭವಿಸಿದೆ. ಈ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ “ಅವೆಲ್ಲವೂ ಕಳೆದುಹೋಗಿವೆ. ಆಟಗಾರರ ಗಮನವು ಮುಂದಿನ ಪಂದ್ಯದಲ್ಲಿದೆ. ಈ ಹಿಂದೆ ಏನಾಯಿತು ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಮುಂದೆ ಮೈದಾನದಲ್ಲಿ ಏನು ಮಾಡಲಿದ್ದೇವೆ ಎಂಬುದರ ಮೇಲೆ ನಮ್ಮ ಗಮನವಿದೆ” ಎಂದಿದ್ದಾರೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.