World Cup: ವಿಶ್ವಕಪ್‌ನ ಮಧ್ಯೆ ದಿಢೀರನೆ ಮನೆಗೆ ಮರಳಿದ್ದಾರೆ ಈ ತಂಡದ ಕ್ಯಾಪ್ಟನ್! ಮುಂದಿನ ಪಂದ್ಯದಲ್ಲಿ ಆಡ್ತಾರಾ!

Shakib Al Hasan: ಐಸಿಸಿ ವಿಶ್ವಕಪ್ 2023 ರ ಮಧ್ಯದಲ್ಲಿ ಬಾಂಗ್ಲಾದೇಶ ತಂಡದ ಕ್ಯಾಪ್ಟನ್ ಶಕೀಬ್ ಅಲ್ ಹಸನ್ ತಾಯ್ನಾಡಿಗೆ ಮರಳಿದ್ದಾರೆ. 

Written by - Yashaswini V | Last Updated : Oct 26, 2023, 08:12 AM IST
  • ತಾಯ್ನಾಡಿಗೆ ಮರಳಿದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್
  • ಐಸಿಸಿ ವಿಶ್ವಕಪ್ 2023 ರ ನಡುವೆ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಢಾಕಾಗೆ ಮರಳಿದ್ದಾರೆ.
  • ಇವರು ಮುಂದಿನ ಪಂದ್ಯವನ್ನು ಆಡುತ್ತಾರೋ, ಇಲ್ಲವೋ ಎಂಬ ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್
World Cup: ವಿಶ್ವಕಪ್‌ನ ಮಧ್ಯೆ ದಿಢೀರನೆ ಮನೆಗೆ ಮರಳಿದ್ದಾರೆ ಈ ತಂಡದ ಕ್ಯಾಪ್ಟನ್! ಮುಂದಿನ ಪಂದ್ಯದಲ್ಲಿ ಆಡ್ತಾರಾ!  title=

World Cup 2023 Shakib Al Hasan: 2023ರ ವಿಶ್ವಕಪ್‌ನಲ್ಲಿ ತುಂಬಾ ಕಳಪೆ ಫಾರ್ಮ್ ನಲ್ಲಿರುವ   ಬಾಂಗ್ಲಾದೇಶ  ಇದುವರೆಗೂ ಐದು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ಕೇವಲ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. 2023ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡದ ನಾಯಕರಾಗಿರುವ ಶಕೀಬ್ ಅಲ್ ಹಸನ್, ಪಂದ್ಯಾವಳಿಯ ಮಧ್ಯದಲ್ಲಿ ಇದ್ದಕ್ಕಿದ್ದಂತೆ ತಮ್ಮ ದೇಶಕ್ಕೆ ಮರಳಿದ್ದಾರೆ. 

ಐಸಿಸಿ ವಿಶ್ವಕಪ್ 2023 ರ ನಡುವೆ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್  ಢಾಕಾಗೆ ಮರಳಿದ್ದಾರೆ. ಇವರು ಮುಂದಿನ ಪಂದ್ಯವನ್ನು ಆಡುತ್ತಾರೋ, ಇಲ್ಲವೋ ಎಂಬ ಅನುಮಾನಗಳ ನಡುವೆ ಶಕೀಬ್ ಅಲ್ ಹಸನ್ ತಾಯ್ನಾಡಿಗೆ ಮರಳಿರುವುದರ ಹಿಂದಿನ ದೊಡ್ಡ ಕಾರಣ ಕೂಡ ಬೆಳಕಿಗೆ ಬಂದಿದೆ. 

ಇದನ್ನೂ ಓದಿ- ಸತತ 5 ಪಂದ್ಯ ಗೆದ್ದರೂ ಸೆಮಿಫೈನಲ್ ಪ್ರವೇಶಿಸೋದು ಟೀಂ ಇಂಡಿಯಾಗೆ ಕಷ್ಟ! ಯಾಕೆ ಗೊತ್ತಾ?

ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ 149 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿದೆ. ಇದಾದ ಒಂದು ದಿನದ ನಂತರ ಬುಧವಾರ ಮಧ್ಯಾಹ್ನ ಶಕೀಬ್ ಅಲ್ ಹಸನ್  ಢಾಕಾಗೆ ತೆರಲಿದ್ದಾರೆ. ತಮ್ಮ ಮಾರ್ಗದರ್ಶಕ ನಜ್ಮುಲ್ ಅಬೆದೀನ್ ಫಹೀಮ್ ಅವರಿಂದ ತರಬೇತಿ ಪಡೆಯಲು ಶಕೀಬ್ ಢಾಕಾಗೆ ಮರಳಿದ್ದಾರೆ ಎಂದು ವರದಿಯಾಗಿದೆ. 

ದಕ್ಷಿಣ ಆಫ್ರಿಕಾದಿಂದ ಟೈಗರ್ಸ್ ಸೋತ ಒಂದು ದಿನದ ನಂತರ ಶಕೀಬ್ ಬುಧವಾರ ಢಾಕಾದಲ್ಲಿ ಬಂದಿಳಿದರು. ಅವರು ನಜ್ಮುಲ್ ಅಬೆದೀನ್ ಫಹೀಮ್  ಅಬೇದೀನ್ ಅವರೊಂದಿಗೆ ತರಬೇತಿ ಪಡೆಯಲು ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ಶಕೀಬ್ ಮುಖ್ಯವಾಗಿ ನೆಟ್ಸ್‌ನಲ್ಲಿ  ಥ್ರೋಡೌನ್‌ಗಳ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದರು. ಈ  ಸೆಷನ್ ಮೂರು ಗಂಟೆಗಳ ಕಾಲ ನಡೆಯಿತು.

ಇದನ್ನೂ ಓದಿ- IND vs NZ: 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಈ ಹಿಂದೆ ಯಾರೂ ಮಾಡದ ಸಾಧನೆ ಮಾಡಿದ ಮಹಮ್ಮದ್ ಶಮಿ

ಲಭ್ಯವಿರುವ ಮಾಹಿತಿಗಳ ಪ್ರಕಾರ, ಶಕೀಬ್ ಮೂರು ದಿನಗಳ ಕಾಲ ಢಾಕಾದಲ್ಲಿಯೇ ತಮ್ಮ ಅಭ್ಯಾಸ ಮುಂದುವರಿಸಲಿದ್ದು, ಇದಾದ ಬಳಿಕ ಮತ್ತೆ ಕೋಲ್ಕತ್ತಾಗೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ. 

ವಾಸ್ತವವಾಗಿ, ಬಾಂಗ್ಲಾದೇಶ ತಂಡ ಅಕ್ಟೋಬರ್ 28 ರಂದು ನೆದರ್ಲ್ಯಾಂಡ್ಸ್ ಮತ್ತು ಅಕ್ಟೋಬರ್ 31 ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. ಇದಕ್ಕಾಗಿ ಕ್ಯಾಪ್ಟನ್ ಹೊರತುಪಡಿಸಿ ಬಾಂಗ್ಲಾ ತಂಡದ ಉಳಿದವರು ಕೋಲ್ಕತ್ತಾಗೆ ಆಗಮಿಸಿದ್ದಾರೆ. ಈ ತಂಡದ ಕ್ಯಾಪ್ಟನ್ ಶಕೀಬ್ ಕೂಡ ಅಕ್ಟೋಬರ್ 28ರ ಮೊದಲು ತಂಡವನ್ನು ಸೇರಲಿದ್ದಾರೆ. ಡಚ್ಚರೊಂದಿಗಿನ ಮುಖಾಮುಖಿಯಾಗುವ ಒಂದು ದಿನದ ಮೊದಲು ಶಕೀಬ್ ಅಕ್ಟೋಬರ್ 27 ರಂದು ಕೋಲ್ಕತ್ತಾಗೆ ಮರಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News