IND vs NZ: 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಈ ಹಿಂದೆ ಯಾರೂ ಮಾಡದ ಸಾಧನೆ ಮಾಡಿದ ಮಹಮ್ಮದ್ ಶಮಿ

IND vs NZ: ಭಾನುವಾರ ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ವೇಗಿ ಮೊಹಮ್ಮದ್ ಶಮಿ ಒಟ್ಟು 3 ದಾಖಲೆಗಳನ್ನು ಮಾಡಿದ್ದಾರೆ.   

Written by - Yashaswini V | Last Updated : Oct 23, 2023, 07:56 AM IST
  • ನಿನ್ನೆ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಒಟ್ಟು 5 ವಿಕೆಟ್ ಕಬಳಿಸಿದರು.
  • ಇದರೊಂದಿಗೆ, ಸುಮಾರು 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡರು.
  • ವಿಶೇಷವೆಂದರೆ, ಭಾರತ ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರ ಕಪಿಲ್ ದೇವ್ ಸಹ ಈ ಸಾಧನೆ ಮಾಡಿಲ್ಲ.
IND vs NZ: 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಈ ಹಿಂದೆ ಯಾರೂ ಮಾಡದ ಸಾಧನೆ ಮಾಡಿದ ಮಹಮ್ಮದ್ ಶಮಿ  title=

IND vs NZ: ಭಾನುವಾರ (ಅಕ್ಟೋಬರ್ 22) ಧರ್ಮಶಾಲಾದಲ್ಲಿ ನಡೆದ 2023 ರ ವಿಶ್ವಕಪ್‌ನಲ್ಲಿ, ಒಂದು ಕಾಲದಲ್ಲಿ ಮುನ್ನೂರರ ಗಡಿ ದಾಟುತ್ತಿದ್ದ ನ್ಯೂಜಿಲೆಂಡ್ ತಂಡವನ್ನು ಕಟ್ಟಿಹಾಕುವ ಮೂಲಕ ಮೊಹಮ್ಮದ್ ಶಮಿ ವಿಶೇಷ ಮೂರು ದಾಖಲೆಗಳನ್ನು ನಿರ್ಮಿಸಿದ್ದಾರೆ.  

ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಕೋಟಾದ 10 ಓವರ್‌ಗಳಲ್ಲಿ 54 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದರು. ಪ್ರದರ್ಶನವು ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ ಈ ವೇಗಿ ಕೇವಲ ಒಂದಲ್ಲ ಅನೇಕ ದಾಖಲೆಗಳನ್ನು ಮಾಡಿದ್ದಾರೆ. 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಈ ಹಿಂದೆ ಯಾರೂ ಮಾಡದ ಸಾಧನೆ ಇದು. ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರಿಗಾಗಲಿ ಅಥವಾ ಇನ್ನಾವುದೇ ಭಾರತೀಯ ಬೌಲರ್‌ ಸಹ ಈ ದಾಖಲೆಯನ್ನು ಮಾಡಲು ಸಾಧ್ಯವಾಗಿಲ್ಲ. 

2023ರ ವಿಶ್ವಕಪ್‌ನಲ್ಲಿ, ಭಾನುವಾರ ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಕಿವೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. 50 ಓವರ್’ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 273 ರನ್ ಕಲೆಹಾಕಿತ್ತು. ವಿಶೇಷವೆಂದರೆ ಒಂದು ಕಾಲದಲ್ಲಿ ಅತ್ಯಂತ ಪ್ರಬಲ ಸ್ಕೋರ್ ಮಾಡುತ್ತಿದ್ದ ಕಿವೀಸ್ ಮುನ್ನೂರರ ಗಡಿ ದಾಟದಂತೆ ತಡೆದಿದ್ದು ಭಾರತದ ವೇಗಿ ಮೊಹಮ್ಮದ್ ಶಮಿ. 

ಇದನ್ನೂ ಓದಿ- 20 ವರ್ಷಗಳ ಬಳಿಕ ಕೀವೀಸ್ ವಿರುದ್ಧ ಗೆದ್ದುಬೀಗಿದ ಟೀಂ ಇಂಡಿಯಾ: ಕೊಹ್ಲಿ-ಶಮಿ ಮೋಡಿಗೆ ಅಜೇಯ ‘ಭಾರತ’ಕ್ಕೆ ಭರ್ಜರಿ ಗೆಲುವು

ಐದು ವಿಕೆಟ್ ಕಬಳಿಸಿದ ಶಮಿ: 
ಇನ್ನೂ ನಿನ್ನೆ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಒಟ್ಟು 5 ವಿಕೆಟ್ ಕಬಳಿಸಿದರು. ಇದರೊಂದಿಗೆ, ಸುಮಾರು 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡರು. ಅವರಿಗಿಂತ ಮೊದಲು ಒಂದು ಪಂದ್ಯದಲ್ಲಿ ಕಪಿಲ್ ದೇವ್, ವೆಂಕಟೇಶ್ ಪ್ರಸಾದ್, ರಾಬಿನ್ ಸಿಂಗ್, ಆಶಿಶ್ ನೆಹ್ರಾ ಮತ್ತು ಯುವರಾಜ್ ಸಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ತಲಾ ಐದು ವಿಕೆಟ್ ಪಡೆದ ಆಟಗಾರರಾಗಿದ್ದಾರೆ. ಆದರೆ, ಎರಡನೇ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಮೊದಲ ಭಾರತೀಯ ಬೌಲರ್ ಎಂಬ ಖ್ಯಾತಿಗೆ ಈಗ ಶಮಿ ಪಾತ್ರರಾಗಿದ್ದಾರೆ. ವಿಶೇಷವೆಂದರೆ, ಭಾರತ ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರ ಕಪಿಲ್ ದೇವ್ ಸಹ ಈ ಸಾಧನೆ ಮಾಡಿಲ್ಲ. 

ವಿಶ್ವಕಪ್ ಇತಿಹಾಸದಲ್ಲಿ ಈ ಅಂಕಿ-ಅಂಶದಲ್ಲಿ ಜಹೀರ್ ಖಾನ್ (44)  ಹೆಸರು ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಜಾವಗಲ್ ಶ್ರೀನಾಥ್ (44) ಇದ್ದರೆ, ಇದೀಗ, ವಿಶ್ವಕಪ್‌ನಲ್ಲಿ 36 ವಿಕೆಟ್‌ಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೇರಿದ್ದಾರೆ.  ಗಮನಾರ್ಹವಾಗಿ, ಮೊಹಮ್ಮದ್ ಶಮಿ,  ಅನಿಲ್ ಕುಂಬ್ಳೆ (31) ಮತ್ತು ಜಸ್ಪ್ರೀತ್ ಬುಮ್ರಾ (29) ಅವರನ್ನು ಸೋಲಿಸುವ ಮೂಲಕ ಮೂರನೇ ಸ್ಥಾನವನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಕಪಿಲ್ ದೇವ್ (28) ಆರನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ಶಮಿ ವಿಶ್ವಕಪ್‌ನಲ್ಲಿ 12 ಪಂದ್ಯಗಳಲ್ಲಿ 36 ವಿಕೆಟ್‌ಗಳನ್ನು ಕಬಳಿಸಿದ್ದಾರೆ.  

ಇದನ್ನೂ ಓದಿ- ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದಿದ್ದು ಈತನಿಂದಲೇ.. ಎಂದು ಕೊಂಡಾಡಿದ ರೋಹಿತ್ ಶರ್ಮಾ!

ವಿಶ್ವಕಪ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌: 
ಕಾಂಗರೂ ಎಡಗೈ ಆಟಗಾರ ಮಿಚೆಲ್ ಸ್ಟಾರ್ಕ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದಿರುವವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಗಮನಾರ್ಹವಾಗಿ, ಮಿಚೆಲ್ ಸ್ಟಾರ್ಕ್ ಆರು ಬಾರಿ ಈ ಸಾಧನೆ ಮಾಡಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಶಮಿ ಸ್ಟಾರ್ಕ್ ಅವರನ್ನು ಸರಿಗಟ್ಟುವ ಸಾಧ್ಯತೆಯಿದೆ. ಏಕೆಂದರೆ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಮತ್ತು ಮೊಹಮ್ಮದ್ ಶಮಿ ಇದೀಗ ಈ ಸಾಧನೆ ಮಾಡುವ ಮೂಲಕ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಯಾವುದೇ ಭಾರತೀಯ ಬೌಲರ್ ಒಂದು ಪಂದ್ಯದಲ್ಲಿ ಎರಡು ಬಾರಿ ಹೆಚ್ಚು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿರುವುದು ಇದೇ ಮೊದಲು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News