ಪಾಕ್ ಪಂದ್ಯದ ಬಳಿಕ ಗಾಯಕ್ಕೆ ತುತ್ತಾದ ನಾಯಕ ವಿಶ್ವಕಪ್’ನಿಂದ ರೂಲ್ಡೌಟ್! ಇನ್ಮುಂದೆ 27ರ ಹರೆಯದ ಬಲಗೈ ಮಧ್ಯಮ ವೇಗಿ ಕ್ಯಾಪ್ಟನ್

sri lanka captain dasun shanaka injury: 32ರ ಹರೆಯದ ಶನಕ ಗಾಯಗೊಂಡಿರುವ ಕಾರಣ ಪ್ರಸಕ್ತ ವಿಶ್ವಕಪ್‌’ನಲ್ಲಿ ಇದುವರೆಗೆ ಕಳಪೆ ಪ್ರದರ್ಶನ ನೀಡಿರುವ ಶ್ರೀಲಂಕಾ ತಂಡಕ್ಕೆ ಸಂಕಷ್ಟ ಹೆಚ್ಚಿದೆ.

Written by - Bhavishya Shetty | Last Updated : Oct 15, 2023, 08:52 AM IST
    • ಗಾಯದ ಕಾರಣ ಶ್ರೀಲಂಕಾ ನಾಯಕ ದಸುನ್ ಶನಕ ವಿಶ್ವಕಪ್’ನಿಂದ ಹೊರಕ್ಕೆ
    • ವಿಶ್ವಕಪ್‌’ನಲ್ಲಿ ಇದುವರೆಗೆ ಕಳಪೆ ಪ್ರದರ್ಶನ ನೀಡಿರುವ ಶ್ರೀಲಂಕಾ ತಂಡ
    • ಬಲಗೈ ಮಧ್ಯಮ ವೇಗಿ ಚಾಮಿಕಾ ಕರುಣಾರತ್ನ ಬದಲಿ ಕ್ಯಾಪ್ಟನ್
ಪಾಕ್ ಪಂದ್ಯದ ಬಳಿಕ ಗಾಯಕ್ಕೆ ತುತ್ತಾದ ನಾಯಕ ವಿಶ್ವಕಪ್’ನಿಂದ ರೂಲ್ಡೌಟ್! ಇನ್ಮುಂದೆ 27ರ ಹರೆಯದ ಬಲಗೈ ಮಧ್ಯಮ ವೇಗಿ ಕ್ಯಾಪ್ಟನ್ title=
dasun shanaka

ODI World Cup, Captain Injured: ಶನಿವಾರ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ 7 ವಿಕೆಟ್‌’ಗಳ ಜಯ ಸಾಧಿಸಿದೆ. ಈ ಪಂದ್ಯದ ಬಳಿಕ ಕೆಟ್ಟ ಸುದ್ದಿಯೊಂದು ಹೊರಬಿದ್ದಿದ್ದು, ತಂಡವೊಂದರ ನಾಯಕ ಗಾಯದ ಕಾರಣದಿಂದ ಇಡೀ ಐಸಿಸಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಸದ್ಯ ಅವರ ಬದಲಿಯನ್ನೂ ಘೋಷಿಸಲಾಗಿದೆ.

ಇದನ್ನೂ ಓದಿ: ಪಾಕ್ ವಿರುದ್ಧದ ಅಜೇಯ ಗೆಲುವಿನ ಮಧ್ಯೆ ವಿಶಿಷ್ಟ ದಾಖಲೆ ಬರೆದ ಭಾರತ!

ಆ ಆಟಗಾರ ಬೇರೆ ಯಾರೂ ಅಲ್ಲ, ಶ್ರೀಲಂಕಾ ನಾಯಕ ದಸುನ್ ಶನಕ. ಗಾಯದ ಕಾರಣ ಶನಕ ಪ್ರಸಕ್ತ ODI ವಿಶ್ವಕಪ್ ನಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಆಲ್‌ ರೌಂಡರ್ ಚಾಮಿಕಾ ಕರುಣಾರತ್ನೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬಲ ತೊಡೆಯ ಸ್ನಾಯುವಿನ ಗಾಯದಿಂದಾಗಿ ಶನಕ ಶನಿವಾರ ವಿಶ್ವಕಪ್‌ನಿಂದ ಹೊರಗುಳಿದಿದ್ದರು.

32ರ ಹರೆಯದ ಶನಕ ಗಾಯಗೊಂಡಿರುವ ಕಾರಣ ಪ್ರಸಕ್ತ ವಿಶ್ವಕಪ್‌’ನಲ್ಲಿ ಇದುವರೆಗೆ ಕಳಪೆ ಪ್ರದರ್ಶನ ನೀಡಿರುವ ಶ್ರೀಲಂಕಾ ತಂಡಕ್ಕೆ ಸಂಕಷ್ಟ ಹೆಚ್ಚಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೀಡಿರುವ ಹೇಳಿಕೆ ಪ್ರಕಾರ, ಅಕ್ಟೋಬರ್ 10 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಶನಕ ಗಾಯಗೊಂಡಿದ್ದರು. ಅವರು ಚೇತರಿಸಿಕೊಳ್ಳಲು ಕನಿಷ್ಠ 3 ವಾರಗಳನ್ನು ತೆಗೆದುಕೊಳ್ಳುತ್ತದೆ. ಇದರಿಂದಾಗಿ ತಂಡವು ಅವರ ಬದಲಿ ನಾಯಕನನ್ನು ಘೋಷಿಸಲಿದೆ.  

ಶ್ರೀಲಂಕಾ ತನ್ನ ಮೊದಲ 2 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ವಿರುದ್ಧ ಸೋತಿದೆ.

ಇದನ್ನೂ ಓದಿ: ಚಿನ್ನ ಖರೀದಿಸುವ ಪ್ಲ್ಯಾನ್ ಇದೆಯೇ? ಹಾಗಾದ್ರೆ ಇವತ್ತೆಷ್ಟಿದೆ ತಿಳಿಯಿರಿ 10 ಗ್ರಾಂ ಚಿನ್ನದ ಬೆಲೆ

ಐಸಿಸಿ ಅನುಮೋದನೆ:

ಐಸಿಸಿ ತಾಂತ್ರಿಕ ಸಮಿತಿಯು 32ರ ಹರೆಯದ ಶನಕ ಬದಲಿಗೆ ಕರುಣಾರತ್ನೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದಕ್ಕೆ ಅನುಮೋದನೆ ನೀಡಿದೆ. ದೆಹಲಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 429 ರನ್‌’ಗಳ ಗುರಿಯನ್ನು ಬೆನ್ನಟ್ಟಿದ್ದ ದಸುನ್ ಶನಕ 62 ಎಸೆತಗಳಲ್ಲಿ 68 ರನ್ ಗಳಿಸಿದ್ದರು. ಅವರ ಬದಲಿಗೆ ಬಂದಿರುವ ಕರುಣಾರತ್ನೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಬಲಗೈ ಮಧ್ಯಮ ವೇಗಿ. ಚಾಮಿಕಾ ಕರುಣಾರತ್ನ ಇದುವರೆಗೆ 23 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 27ರ ಹರೆಯದ ಆಟಗಾರ ಈ ಮಾದರಿಯಲ್ಲಿ 24 ವಿಕೆಟ್ ಪಡೆದಿದ್ದು, ಒಂದು ಅರ್ಧಶತಕದೊಂದಿಗೆ 443 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News