ನವದೆಹಲಿ: ರಾಷ್ತ್ರೀಯ ಆಯ್ಕೆ ಸಮೀತಿಯಲ್ಲಿ ಸುನೀಲ್ ಜೋಷಿ ಹಾಗೂ ಹರವಿಂದರ್ ಸಿಂಗ್ ಶಾಮೀಲಾದ ಬಳಿಕವೂ ಕೂಡ ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಅನಿಶ್ಚಿತತೆ ಮುಂದುವರೆದಿದ್ದು, ಅವರು ಟೀಮ್ ಇಂಡಿಯಾಗೆ ವಾಪಸ್ಸಾಗಲಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಹೇಳಿಕೆ ನೀಡಿರುವ BCCIನ ಉನ್ನತ ಅಧಿಕಾರಿಯೊಬ್ಬರು T20 ವರ್ಲ್ಡ್ ಕಪ್ ತಂಡದಲ್ಲಿ ಶಾಮೀಲಾಗಲು ಧೋನಿ ಮುಂಬರುವ IPL ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಸುನೀಲ್ ಜೋಷಿ ನೇತೃತ್ವದ ಆಯ್ಕೆ ಸಮೀತಿ ಅಹ್ಮದಾಬಾದ್ ನಲ್ಲಿ ತನ್ನ ಮೊದಲ ಸಭೆ ನಡೆಸಿದೆ. ಈ ಸಭೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಬೇಕಿರುವ ಮೂರು ಪಂದ್ಯಗಳ ODI ಸೀರಿಸ್ ಗೆ ಟೀಮ್ ಇಂಡಿಯಾಗೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ಏಕದಿನ ಪಂದ್ಯಗಳ ಸರಣಿ ಮಾರ್ಚ್ 12 ರಿಂದ ಆರಂಭಗೊಳ್ಳಲಿದೆ. ಈ ಸರಣಿಯ ಮೂಲಕ ಹಾರ್ದಿಕ್ ಪಾಂಡ್ಯಾ, ಭುವನೇಶ್ವರ್ ಕುಮಾರ್ ಹಾಗೂ ಶಿಖರ್ ಧವನ್ ತಂಡಕ್ಕೆ ಮರಳುತ್ತಿದ್ದಾರೆ.
ವರ್ಲ್ಡ್ ಕಪ್ ಸೆಮಿಫೈನಲ್ ಪಂದ್ಯದ ಬಳಿಕ MS ಧೋನಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಏತನ್ಮಧ್ಯೆ ಮಾರ್ಚ್ 29 ರಿಂದ ಆರಂಭಗೊಳ್ಳಬೇಕಿರುವ IPL ಟೂರ್ನಿಯ ಮೂಲಕ ಅವರು ಚೆನ್ನೈ ಹಾಗೂ ಮುಂಬೈ ನಡುವಿನ ಪಂದ್ಯದ ಮೂಲಕ ಕ್ರಿಕೆಟ್ ಗೆ ವಾಪಸ್ಸಾಗುತ್ತಿದ್ದಾರೆ.
BCCI ಮೂಲಗಳಿಂದ ತಿಳಿದುಬಂದ ಮಾಹಿತಿ ಪ್ರಕಾರ, ಆಯ್ಕೆ ಸಮೀತಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಬೇಕಿರುವ ಏಕದಿನ ಸರಣಿಗಾಗಿ ಮಹೇಂದ್ರ ಸಿಂಗ್ ಧೋನಿ ಅವರ ಹೆಸರನ್ನು ಪರಿಗಣಿಸಿಲ್ಲ ಎನ್ನಲಾಗಿದೆ. ಅವರ ವಾಪಸ್ಸಾತಿ ಕುರಿತು ಕೇವಲ ಸಾಮಾನ್ಯ ಚರ್ಚೆ ಮಾತ್ರ ನಡೆದಿದೆ ಎನ್ನಲಾಗಿದೆ. ಒಂದು ವೇಳೆ IPL ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಅವರು ಟೀಮ್ ಇಂಡಿಯಾಗೆ ಮರಳುವ ಕುರಿತು ಚಿಂತನೆ ನಡೆಸಲಾಗುವುದು ಎನ್ನಲಾಗಿದೆ.
ಈ ವರ್ಷದ ಅಕ್ಟೋಬರ್-ನವೆಂಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ವರ್ಲ್ಡ್ ಕಪ್ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದೆ. ಇಂತಹುದರಲ್ಲಿ ಟೀಮ್ ಇಂಡಿಯಾದಲ್ಲಿ ಧೋನಿ ವಾಪಸ್ಸಾತಿ ಕುರಿತು ಈಗಾಗಲೇ ಮಾತು ಕೇಳಿ ಬರಲಾರಂಭಿಸಿವೆ.