ಮುಂಬೈ : ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮಾರ್ಚ್ 4ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ತಂಡದ ಒಡತಿ ನೀತಾ ಎಂ. ಅಂಬಾನಿ ಉಪಸ್ಥಿತಿಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿತು. ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್-ಬೌಲಿಂಗ್ನಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿತು. ಈ ಮೂಲಕ ಆರಂಭಿಕ ಪಂದ್ಯದಲ್ಲಿ 143 ರನ್ಗಳಿಂದ ಭರ್ಜರಿಯಾಗಿ ಜಯ ಗಳಿಸಿ, ಟೂರ್ನಿಯಲ್ಲಿ ರೋಮಾಂಚಕ ಆರಂಭ ಕಂಡಿತು.
ಮಹಿಳಾ ಕ್ರಿಕೆಟ್ ಗೆ ಬೆಂಬಲ ನೀಡಲು ಮಹಿಳೆಯರು ಮತ್ತು ಪುರುಷರು ಇಬ್ಬರೂ ಸ್ಟೇಡಿಯಂಗೆ ಆಗಮಿಸಿದ್ದರು. ಹೆಚ್ಚಿನ ಮಹಿಳೆಯರು ಕ್ರೀಡೆಗಳನ್ನು ಆಡಬೇಕೆಂಬ ಕನಸು ಹೊಂದಿರುವ ನೀತಾ ಅಂಬಾನಿ ಅವರು ಪಂದ್ಯದ ಪ್ರತಿ ಎಸೆತಕ್ಕೂ ಆಟಗಾರ್ತಿಯರನ್ನು ಹುರಿದುಂಬಿಸಿದರು. ನಂತರ ಅವರು ಮುಂಬೈ ಇಂಡಿಯನ್ಸ್ ತಂಡದ ಸಾಂಪ್ರದಾಯಿಕ ಪಂದ್ಯದ ನಂತರದ ಡ್ರೆಸ್ಸಿಂಗ್ ರೂಮ್ ಸಂಭ್ರಮಾಚರಣೆಯನ್ನೂ ಮುನ್ನಡೆಸಿದರು.
ಇದನ್ನೂ ಓದಿ : WPL 2023 : ವಿಶ್ವ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಮುಂಬೈ ಇಂಡಿಯನ್ಸ್ ತಂಡ!
ಈ ಬಗ್ಗೆ ಮಾತನಾಡಿದ ನೀತಾ ಅಂಬಾನಿ, ಡಬ್ಲ್ಯುಪಿಎಲ್ ಆರಂಭಿಕ ದಿನವು ಎಂದೂ ಮರೆಯಲಾಗದ ಕ್ಷಣವಾಗಿದೆ. ಇದು ಒಂದು ಅಪ್ರತಿಮ ದಿನ ಮತ್ತು ಕ್ರೀಡೆಯಲ್ಲಿ ಮಹಿಳೆಯರಿಗೆ ಅಪ್ರತಿಮ ಕ್ಷಣವಾಗಿದೆ. ಡಬ್ಲ್ಯುಪಿಎಲ್ ನಲ್ಲಿ ಭಾಗವಾಗಿರುವುದು ತುಂಬಾ ರೋಮಾಂಚನಕಾರಿಯಾಗಿದೆ ಎಂದರು.
ಇನ್ನು ಮುಂದುವರೆದು ಮಾತನಾಡಿದ ಅವರು, ಹೆಚ್ಚಿನ ಮಹಿಳೆಯರು ಕ್ರೀಡೆಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಕ್ರೀಡೆಯಲ್ಲಿ ವೃತ್ತಿಜೀವನವನ್ನು ಕಂಡುಕೊಳ್ಳಲು ಡಬ್ಲ್ಯುಪಿಎಲ್ ಸಹಾಯ ಮಾಡುತ್ತದೆ ಎಂದು ಆಶಿಸಿದರು, ಜೊತೆಗೆ ಟೂರ್ನಿಯ ವಾತಾವರಣವನ್ನೂ ಶ್ಲಾಘಿಸಿದರು. "ಇದು ದೇಶಾದ್ಯಂತ ಯುವತಿಯರಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು, ಅವರ ಕನಸನ್ನು ನನಸಾಗಿಸಲು ಮತ್ತು ಅವರ ಹೃದಯವನ್ನು ಅನುಸರಿಸಲು ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ತಂಡ :
ಆಟದ ನಂತರ ಮಾತನಾಡಿಯಾ ನೀತಾ ಅಂಬಾನಿ, ಮುಂಬೈ ಇಂಡಿಯನ್ಸ್ ಆಕರ್ಷಕವಾದ ಡ್ರೆಸ್ ಹೊಂದಿದೆ ಮತ್ತು ಅದರ ಮೊದಲ ಪಂದ್ಯವು ಕಣಕ್ಕಿಳಿದ ಅನುಭವಿ ಮತ್ತು ಯುವ ಆಟಗಾರ್ತಿಯರಿಗೆ ಅತ್ಯಂತ ಪರಿಪೂರ್ಣವಾಗಿತ್ತು. “ಮುಂಬೈ ಇಂಡಿಯನ್ಸ್ ತಂಡವು ನಿರ್ಭೀತ ಮತ್ತು ಉತ್ತೇಜಕ ಕ್ರಿಕೆಟ್ ಆಟಕ್ಕೆ ಜನಪ್ರಿಯತೆ ಕಂಡಿದೆ. ನಮ್ಮ ಹುಡುಗಿಯರು ಇಂದು ತುಂಬಾ ಚೆನ್ನಾಗಿ ಆಡಿದ್ದಾರೆ. ಅವರು ಆಡಿದ ರೀತಿಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಇದು ಶ್ರೇಷ್ಠ ಪ್ರದರ್ಶನವಾಗಿತ್ತು. ನಮ್ಮ ನಾಯಕಿ ಹರ್ಮಾನ್ಪ್ರೀತ್ ಕೌರ್ ಇನಿಂಗ್ಸ್ ಬಗ್ಗೆ ವಿಶೇಷವಾಗಿ ಉಲ್ಲೇಖಿಸಲೇ ಬೇಕು. ಅದು ಎಂಥ ಅದ್ಭುತ ಇನಿಂಗ್ಸ್ ಆಗಿತ್ತು. ಅಮೆಲಿಯಾ ಕೆರ್ ಕೂಡ ಚೆನ್ನಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದರು' ಎಂದು ಹೇಳಿದ್ದಾರೆ.
ಪಲ್ಟಾನ್ಗೂ ವಿಶೇಷ ಮೆಚ್ಚುಗೆ:
ಸ್ಟೇಡಿಯಂಗೆ ಆಗಮಿಸಿ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸಿದ ದೊಡ್ಡ ಸಂಖ್ಯೆಯ ಅಭಿಮಾನಿಗಳತ್ತ ತಿರುಗಿ ನೀತಾ ಅಂಬಾನಿ, ಅವರ ಉಪಸ್ಥಿತಿಯ ಬಗ್ಗೆ ಮೆಚ್ಚುಗೆ ಸೂಚಿಸಿದರು. "ಪುರುಷರು ಮತ್ತು ಮಹಿಳೆಯರು ಸೇರಿದಂತೆ ಅನೇಕ ಜನರು ಕ್ರೀಡಾಂಗಣದಲ್ಲಿ ಮಹಿಳಾ ತಂಡವನ್ನು ಬೆಂಬಲಿಸಲು ಬಂದಿರುವುದನ್ನು ನೋಡಿ ಖುಷಿಯಾಯಿತು ಹೇಳಿದ್ದಾರೆ. ಜೊತೆಗೆ, ಎಂಐ ಪಲ್ಟಾನ್ ಎಂದೇ ಕರೆಯಲ್ಪಡುವ ತಂಡದ ಅಭಿಮಾನಿಗಳ ಬಳಗಕ್ಕೆ ವಿಶೇಷ ಸಂದೇಶವನ್ನು ಕಳುಹಿಸಿರುವ ಅವರು, "ನಮ್ಮ ಹುಡುಗಿಯರನ್ನು ಬೆಂಬಲಿಸೋಣ ಮತ್ತು ಅವರಿಗೆ ಹೆಚ್ಚಿನ ಶಕ್ತಿ ತುಂಬೋಣ. ಈ ಚೊಚ್ಚಲ ಆವೃತ್ತಿಯ ಟೂರ್ನಿಯಲ್ಲಿ ಆಡುತ್ತಿರುವ ಎಲ್ಲಾ ತಂಡಗಳಿಗೆ ನಾನು ಶುಭ ಹಾರೈಸುತ್ತೇನೆ' ಎಂದಿದ್ದಾರೆ.
ಇದನ್ನೂ ಓದಿ : Jasprit Bumrah : ನಾಲ್ಕನೇ ಟೆಸ್ಟ್‌ಗೂ ಮುನ್ನ ವಿದೇಶಕ್ಕೆ ಹಾರಿದ ಜಸ್ಪ್ರೀತ್ ಬುಮ್ರಾ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.