Royal Challengers Bangalore Vs Gujarat Giants : ಫೆಬ್ರವರಿ 23 ರಂದು ಪ್ರಾರಂಭವಾದ 2024 ರ ವುಮೆನ್ಸ್ ಪ್ರೀಮಿಯರ್ ಲೀಗ್ ನ 5ನೇ ಪಂದ್ಯ ಇಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯ ನಡೆಯಿತು.
ಗುಜರಾತ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಬೆಂಗಳೂರು ತಂಡ 8 ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ತಂಡವು ಬ್ಯಾಕ್ ಟು ಬ್ಯಾಕ್ ಗೆಲ್ಲುವ ಎರಡನೇ ಪಂದ್ಯ ಇದಾಗಿದೆ.
ಇದನ್ನು ಓದಿ : ಅಪ್ಪು ಜನ್ಮದಿನದ ಪ್ರಯುಕ್ತ ಮಾರ್ಚ್ 15ಕ್ಕೆ ಜಾಕಿ ಸಿನಿಮಾ ರೀರಿಲೀಸ್
ಆರ್ ಸಿಬಿ ತಂಡ ಟಾಸ್ ಗೆಲ್ಲುವ ಮೂಲಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಗುಜರಾತ್ ತಂಡವು ಬ್ಯಾಟಿಂಗ್ ಅನ್ನು ಆರಂಭಿಸಿ, 20 ಓವರ್ ನಲ್ಲಿ 7 ವಿಕೆಟ್ 107 ರನ್ ಗಳ ಗೆಲುವಿನ ಗುರಿಯನ್ನು ಆರ್ ಸಿಬಿ ತಂಡಕ್ಕೆ ನೀಡಿತು. ಇದಾದ ಬಳಿಕ ಬ್ಯಾಟಿಂಗ್ ಗೆ ಇಳಿದ ಆರ್ ಸಿಬಿ ತಂಡ 12.3 ಓವರ್ ಗಳಲ್ಲಿ 110 ರನ್ ಗಳನ್ನು ಮಾಡಿ 8 ವಿಕೆಟ್ ಅಂತರದಿಂದ ಗೆಲುವನ್ನು ಸಾಧಿಸಿತು.
The first time was so nice, they had to do it twice 🤌
✌️ in ✌️at Namma Chinnaswamy 🤩🏡#PlayBold #SheIsBold #ನಮ್ಮRCB #WPL2024 #RCBvGG pic.twitter.com/iRYuRRSMOP
— Royal Challengers Bangalore (@RCBTweets) February 27, 2024
ಆರ್ ಸಿಬಿ ಪರ ಸ್ಮೃತಿ ಮಂಧಾನ ಸಿಡಿದೆದ್ದು, 27 ಬೌಲ್ ಗಳಲ್ಲಿ 43 ರನ್ ಗಳನ್ನು ಮಾಡುವ ಮೂಲಕ ಆರ್ ಸಿಬಿ ಜಯ ತಂದುಕೊಡುವಲ್ಲಿ ಒಬ್ಬರಾದರು. ಮಂಧಾನ ಬೌಲರ್‌ಗಳ ಮೇಲೆ ದಾಳಿ ಮುಂದುವರಿಸಿ 27 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್‌ನೊಂದಿಗೆ 43 ರನ್ ಗಳಿಸಿದರು.
ಎಂಐ ವಿರುದ್ಧ ಅರ್ಧಶತಕ ಗಳಿಸಿದ ಸಬ್ಬಿನೇನಿ ಮೇಘನಾ 28 ಎಸೆತಗಳಲ್ಲಿ 36 ರನ್ ಗಳಿಸಿ ಔಟಾಗದೆ ಉಳಿದರು. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ 2000 ರನ್ ಪೂರೈಸಿದ್ದಾರೆ. ಕೇವಲ ಒಂದೇ ಓವರ್ ಬೌಲ್ ಮಾಡಿದ ಎಲಿಸ್ ಪೆರ್ರಿ 4 ಬೌಂಡರಿಗಳನ್ನು ಬಾರಿಸಿದರು ಮತ್ತು 14 ಎಸೆತಗಳಲ್ಲಿ 23 ರನ್ ಗಳಿಸಿ ಔಟಾಗದೆ ಉಳಿದರು.
ಇದನ್ನು ಓದಿ : 8ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುವ ಜರ್ಮನಿ ಗಾಯಕಿಯನ್ನು ಭೇಟಿಯಾದ ಪ್ರಧಾನಿ ಮೋದಿ
ಈ ಪಂದ್ಯ ಗೆಲ್ಲುವ ಮೂಲಕ +1.665 ನಿವ್ವಳ ರನ್ ರೇಟ್ ಚಾಲೆಂಜರ್ಸ್ ತಂಡವು ಪಡೆದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.