ವಿಶ್ವಕಪ್ ನಲ್ಲಿ ಭಾರತದ ಪರ ಯಜುವೇಂದ್ರ ಚಹಾಲ್ ನೂತನ ದಾಖಲೆ...!

 ಭಾರತದ ಪರವಾಗಿ ವಿಶ್ವಕಪ್ ಇತಿಹಾಸದಲ್ಲಿ ಯಜುವೆಂದ್ರ ಚಹಾಲ್ ನೂತನ ದಾಖಲೆ ಮಾಡಿದ್ದಾರೆ.ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ 10 ಓವರ್ ಗಳಲ್ಲಿ  88 ರನ್ ನೀಡುವ ಮೂಲಕ ಅತಿ ದುಬಾರಿ ರನ್ ನೀಡಿದ ಆಟಗಾರ ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

Last Updated : Jun 30, 2019, 08:06 PM IST
ವಿಶ್ವಕಪ್ ನಲ್ಲಿ ಭಾರತದ ಪರ ಯಜುವೇಂದ್ರ ಚಹಾಲ್ ನೂತನ ದಾಖಲೆ...!  title=

ನವದೆಹಲಿ:  ಭಾರತದ ಪರವಾಗಿ ವಿಶ್ವಕಪ್ ಇತಿಹಾಸದಲ್ಲಿ ಯಜುವೆಂದ್ರ ಚಹಾಲ್ ನೂತನ ದಾಖಲೆ ಮಾಡಿದ್ದಾರೆ.ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ 10 ಓವರ್ ಗಳಲ್ಲಿ  88 ರನ್ ನೀಡುವ ಮೂಲಕ ಅತಿ ದುಬಾರಿ ರನ್ ನೀಡಿದ ಆಟಗಾರ ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ಬರ್ಮಿಂಗ್ ಹ್ಯಾಮ್ ಎಡ್ಜ್ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಇಯೊನ್ ಮೋರ್ಗಾನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಇಂಗ್ಲೆಂಡ್ ತಂಡವು 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 337 ರನ್ ಗಳನ್ನು ಗಳಿಸಿತು. ಭಾರತದ ಪರವಾಗಿ ಚಹಾಲ್ 10 ಓವರ್ ಗಳಲ್ಲಿ ಯಾವುದೇ ವಿಕೆಟ್ ತೆಗೆದುಕೊಳ್ಳದೆ 88 ರನ್ ಗಳನ್ನು ನೀಡಿದರು. ಆ ಮೂಲಕ ವಿಶ್ವಕಪ್ ನಲ್ಲಿ ಭಾರತದ ಪರವಾಗಿ ಅತಿ ದುಬಾರಿ ಬೌಲರ್ ಎನ್ನುವ ಕುಖ್ಯಾತಿಗೆ ಪಾತ್ರರಾದರು. 
 
ಈ ಹಿಂದೆ ಚಹಾಲ್ ಗೂ ಮೊದಲು ಜಾವಗಲ್ ಶ್ರೀನಾಥ್ ಜೋಹಾನ್ಸ್‌ಬರ್ಗ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ  87 ರನ್ ಗಳನ್ನು ನೀಡಿದ್ದರು. ಇನ್ನೊಂದೆಡೆ ಅವರ ಸಹ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ 72 ರನ್ ನೀಡಿದರು. ಇಂಗ್ಲೆಂಡ್‌ನ ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋವ್ ಅವರು 2019 ರ ವಿಶ್ವಕಪ್‌ನ ಮೊದಲ ಶತಕವನ್ನು ಬಾರಿಸಿದರು ಮತ್ತು ಅವರ ಆರಂಭಿಕ ಪಾಲುದಾರ ಜೇಸನ್ ರಾಯ್ (66) ಅವರೊಂದಿಗೆ 160 ರನ್‌ಗಳ ಮೊದಲ ಜೊತೆಯಾಟ ಇಂಗ್ಲೆಂಡ್ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿತು. 
 

Trending News