Marraige Video : ಅಭಿಮಾನಿಗಳಿಗೆ ಸರ್ಪ್ರೈಜ್ ನೀಡಿದ Yuzvendra Chahal ಪತ್ನಿ ಧನಶ್ರೀ

ಯುಜ್ವೇಂದ್ರ ಚಹಲ್,  22 ಡಿಸೆಂಬರ್ 2020 ರಂದು ತಮ್ಮ ಬಹುಕಾಲದ ಗೆಳತಿ ಧನಶ್ರೀ ವರ್ಮಾ ಅವರನ್ನು ವಿವಾಹವಾಗಿದ್ದಾರೆ.  ಧನಶ್ರೀ ಇದೀಗ ತಮ್ಮ ವಿವಾಹದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ  ಹಂಚಿಕೊಂಡಿದ್ದಾರೆ. 

Written by - Ranjitha R K | Last Updated : Apr 4, 2021, 10:09 AM IST
  • ವಿವಾಹ ವಿಡಿಯೋ ಶೇರ್ ಮಾಡಿದ ಚಹಲ್ ಪತ್ನಿ ಧನಶ್ರೀ
  • ಡಿಸೆಂಬರ್ 22, 2020 ರಂದು ವಿವಾಹವಾದ ಚಹಲ್ ಮತ್ತು ಧನಶ್ರೀ
  • ಚಹಲ್ ಪತ್ನಿ ಧನಶ್ರೀ ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ
Marraige Video : ಅಭಿಮಾನಿಗಳಿಗೆ ಸರ್ಪ್ರೈಜ್ ನೀಡಿದ Yuzvendra Chahal ಪತ್ನಿ ಧನಶ್ರೀ  title=
ವಿವಾಹ ವಿಡಿಯೋ ಶೇರ್ ಮಾಡಿದ ಚಹಲ್ ಪತ್ನಿ ಧನಶ್ರೀ (photo zee news)

ನವದೆಹಲಿ: ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಅವರ ಪತ್ನಿ ಧನಶ್ರೀ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಬಹಳ ಜನಪ್ರಿಯ. ಧನಶ್ರೀ ವರ್ಮಾ (Dhanashree Verma) ತಮ್ಮ ವಿವಾಹದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಧನಶ್ರೀ ವರ್ಮಾ ಅಭಿಮಾನಿಗಳೊಂದಿಗೆ ತಮ್ಮ ಜೀವನದ ಅಭೂತ ಪೂರ್ವ ಕ್ಷಣಗಳನ್ನು ಶೇರ್ ಮಾಡಿಕೊಂಡಿದ್ದಾರೆ. 

ವಿವಾಹದ ವಿಡಿಯೋ ಹಂಚಿಕೊಂಡ ಧನಶ್ರೀ :
ಯುಜ್ವೇಂದ್ರ ಚಹಲ್ (Yuzvendra Chahal),  22 ಡಿಸೆಂಬರ್ 2020 ರಂದು ತಮ್ಮ ಬಹುಕಾಲದ ಗೆಳತಿ ಧನಶ್ರೀ ವರ್ಮಾ (Dhanashree Verma) ಅವರನ್ನು ವಿವಾಹವಾಗಿದ್ದಾರೆ.  ಧನಶ್ರೀ ಇದೀಗ ತಮ್ಮ ವಿವಾಹದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ (Youtube) ಹಂಚಿಕೊಂಡಿದ್ದಾರೆ. ಜೀವನದ ಸುಂದರ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು  ತುಂಬಾ ಸಂತೋಷವಾಗುತ್ತಿದೆ ಎಂದು ಧನಶ್ರೀ ಹೇಳಿದ್ದಾರೆ. ಈ ವೀಡಿಯೊ ನೋಡಿ ನಿಮ್ಮ ಮುಖದಲ್ಲಿಯೂ ನಗು ಮೂಡುವುದು ಎಂಬ ಭರವಸೆಯಿದೆ ಎಂದು ಬರೆದಿದ್ದಾರೆ. ಮದುವೆ (Marraige) ಎನ್ನುವುದು ಎರಡು ಸುಂದರ ಆತ್ಮಗಳನ್ನು ಜೊತೆಯಾಗಿಸುವ ಬಂಧವಾಗಿದೆ.  ಪರಸ್ಪರ ಪ್ರೀತಿಸಿ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರೆ ಬದುಕು ಸುಂದರವಾಗಿರುತ್ತದೆ ಎಂದು ಹೇಳಿದ್ದಾರೆ.  

 
 
 
 

 
 
 
 
 
 
 
 
 
 
 

A post shared by Dhanashree Verma Chahal (@dhanashree9)

 

ಇದನ್ನೂ ಓದಿ : IPL 2021: ಕೊರೊನಾ ಭೀತಿ ಹಿನ್ನಲೆಯಲ್ಲಿ ನಡೆಯುತ್ತಾ ಐಪಿಎಲ್ ?

ಚಹಲ್ ಪತ್ನಿ ಧನಶ್ರೀ ಹಿನ್ನೆಲೆ : 
ಯುಜ್ವೇಂದ್ರ ಚಾಹಲ್ ಪತ್ನಿ ಧನಶ್ರೀ ವರ್ಮಾ ವೃತ್ತಿಯಲ್ಲಿ ದಂತವೈದ್ಯೆ (Dentist). ಇದರ ಜೊತೆ ಕೊರಿಯೋಗ್ರೋಫರ್ (Choreographer) ಮತ್ತು ಯೂಟ್ಯೂಬರ್ ಕೂಡ ಆಗಿದ್ದಾರೆ.  ನೃತ್ಯಕ್ಕೆ ಸಂಬಂಧಿಸಿದಂತೆ ಧನಶ್ರೀ ಅವರ ಯೂಟ್ಯೂಬ್ ಚಾನೆಲ್ (Youtube channel) ಕೂಡಾ ಇದೆ. ಈ ಚಾನೆಲ್ 15 ಲಕ್ಷಕ್ಕೂ ಅಧಿಕ  ಹೆಚ್ಚು subscribers ಅನ್ನು ಹೊಂದಿದೆ. ಧನಶ್ರೀ ಬಾಲಿವುಡ್ (Bollywood) ಹಾಡುಗಳನ್ನು ರಿಕ್ರೀಯೆಟ್ ಮಾಡುತ್ತಾರೆ. ಇದಲ್ಲದೆ, ಹಿಪ್-ಹಾಪ್ ತರಬೇತಿಯನ್ನು ಸಹ ನೀಡುತ್ತಾರೆ.

ಇದನ್ನೂ ಓದಿ : IPL 2021- IPL ಪಂದ್ಯಗಳ ಮೇಲೆ ಕೊರೊನಾ ಕಾರ್ಮೋಡ, ವಾನ್ ಖೇಡ್ ಕ್ರೀಡಾಂಗಣದ 8 ಸಿಬ್ಬಂದಿಗಳು ಕೊರೊನಾ ಪಾಸಿಟಿವ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News