ISRO Scientist: ಯುವ ವಿಜ್ಞಾನಿ ಅಶುತೋಷ್ ಸಿಂಗ್ ಕ್ವಿಡ್ ಕಾರಿನಲ್ಲಿ ಬರುತ್ತಿದ್ದಾಗ ನಾಲ್ವರು ಅಪರಿಚಿತರು ತಡೆದು ನಿಲ್ಲಿಸಿ ಏಕಾಏಕಿ ದಾಳಿ ನಡೆಸಿದ್ದು, ಹಿಂಭಾಗದ ಗಾಜನ್ನು ಒಡೆದು ಹಾಕಿದ್ದಾರೆ.
Aditya-L1 Mission: ಸೆಪ್ಟೆಂಬರ್ ಮೊದಲ ವಾರದಲ್ಲಿ ಸೂರ್ಯನ ಅಧ್ಯನಕ್ಕೆ ‘Aditya L-1’ ಯೋಜನೆ ಕೈಗೊಳ್ಳಲಾಗುವುದು ಎಂದು ಕೆಲ ದಿನಗಳ ಹಿಂದಷ್ಟೇ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದರು.
ಇಸ್ರೋ ಶುಕ್ರವಾರದಂದು ಚಂದ್ರಯಾನ -2 ರ ಅಧಿಕ ರೆಸಲ್ಯೂಶನ್ ಕ್ಯಾಮೆರಾ ತೆಗೆದ ಚಂದ್ರನ ಮೇಲ್ಮೈಯ ಚಿತ್ರಗಳನ್ನು ಹಂಚಿಕೊಂಡಿದೆ. ಆರ್ಬಿಟರ್ ಹೈ ರೆಸಲ್ಯೂಷನ್ ಕ್ಯಾಮೆರಾ ಚಂದ್ರನ ಅಧಿಕ ರೆಸಲ್ಯೂಶನ್ ಹೊಂದಿರುವ ಚಿತ್ರಗಳನ್ನು ನೀಡುತ್ತದೆ ಎಂದು ಇಸ್ರೋ ಹೇಳಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಎನ್ಆರ್ಎಸ್ಸಿ ಅಧಿಕಾರಿಯಾದ ಎಸ್.ಸುರೇಶ್(56) ಎಂಬವರು ಹೈದರಾಬಾದ್ನ ಅಮೀರ್ಪೇಟ್ನಲ್ಲಿರುವ ಅನ್ನಪೂರ್ಣ ಅಪಾರ್ಟ್ಮೆಂಟ್ ನಲ್ಲಿರುವ ಅವರ ಫ್ಲ್ಯಾಟ್ನಲ್ಲಿ ಮಂಗಳವಾರ ಕೊಲೆಯಾಗಿರುವುದು ಪತ್ತೆಯಾಗಿದೆ.
ಚಂದ್ರಯಾನ-2 ಆರ್ಬಿಟರ್ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ವಿಕ್ರಮ್ ಲ್ಯಾಂಡರ್ ನಿಂದ ಇನ್ನೂ ಯಾವುದೇ ಸಿಗ್ನಲ್ ಸಿಕ್ಕಿಲ್ಲ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ತಿಳಿಸಿದ್ದಾರೆ.
ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಲು ಪ್ರಯತ್ನಿಸುವ ಮೂಲಕ ಭಾರತದ ಚಂದ್ರಯಾನ -2 ಜಗತ್ತಿನ ಗಮನ ಸೆಳೆಯಿತು. ಆದರೆ ಚಂದ್ರನನ್ನು ತಲುಪುವ ಮುನ್ನ ಸಂಪರ್ಕ ಕಡಿತಗೊಂಡ ಹಿನ್ನಲೆಯಲ್ಲಿ ಸ್ವಲ್ಪದರಲ್ಲೇ ಇತಿಹಾಸ ಸೃಷ್ಟಿಸುವ ಅವಕಾಶ ಕಳೆದುಕೊಂಡಿತು.
ಜೀವನದಲ್ಲಿ ಏರಿಳಿತಗಳು ಇದ್ದದ್ದೇ. ಸಂಪರ್ಕ ಕಡಿದುಕೊಂಡಾಗ ಎಲ್ಲರಿಗೂ ಬೇಸರವಾಗಿರುವುದನ್ನು ನಾನು ನೋಡಿದೆ. ಇದು ಕಡಿಮೆ ಸಾಧನೆಯಲ್ಲ. ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ- ಇಸ್ರೋ ವಿಜ್ಞಾನಿಗಳಿಗೆ ಟ್ವೀಟ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಂತ್ವನ.
ಚಂದ್ರಯಾನ-2 ಮಿಷನ್ ನ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವುದನ್ನು ವೀಕ್ಷಿಸಲು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಹನ ನಡೆಸಿದರು.
ಚಂದ್ರಯಾನ್ -2 ರ ವಿಕ್ರಮ್ ಲ್ಯಾಂಡರ್ ಜೊತೆಗಿನ ಸಂಪರ್ಕವನ್ನು ಇಸ್ರೋ ಕಳೆದುಕೊಂಡ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಬೆಳಿಗ್ಗೆ 8 ಗಂಟೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿಯಂತ್ರಣ ಕೇಂದ್ರದಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಕೈಗೊಂಡಿದ್ದ ಚಂದ್ರಯಾನ 2 ಕೊನೆ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡಿದೆ. ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೊರಡಿಸಿದ ಹೇಳಿಕೆಯಲ್ಲಿ ಚಂದ್ರಯಾನ -2 ಚಂದ್ರನ ಮೇಲ್ಮೈಯಿಂದ 2.1 ಕಿ.ಮೀ ದೂರದಲ್ಲಿ ಸಂಪರ್ಕವನ್ನು ಕಳೆದುಕೊಂಡಿದೆ.
ಚಂದ್ರಯಾನ್ -2ನ ವಿಕ್ರಮ್ ಲ್ಯಾಂಡರ್ ಶನಿವಾರ ಮುಂಜಾನೆ 1.30 ರಿಂದ 2.30ರ ವೇಳೆಗೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಪಾದಾರ್ಪಣೆ ಮಾಡಲಿದ್ದು, ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಸುರಕ್ಷಿತ ಮತ್ತು ಯಶಸ್ವಿಯಾಗಿ ಇಳಿಯುವ ಬಗ್ಗೆ ವಿಶ್ವಾಸವಿದೆ ಎಂದು ಶಿವನ್ ಅವರು ಸುದ್ದಿಸಂಸ್ಥೆ ಎಎನ್ಐಗೆ ಹೇಳಿದ್ದಾರೆ.
ಬಾಹ್ಯಾಕಾಶ ಜಗತ್ತಿನಲ್ಲಿ, ಚಂದ್ರಯಾನ -2 ಎಂಬ ಬಾಹ್ಯಾಕಾಶ ನೌಕೆ ಮಂಗಳವಾರ ಬೆಳಿಗ್ಗೆ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸುವುದರ ಜೊತೆಗೆ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.