ಹೊಸಕೋಟೆ ತಾಲೂಕಿನ ಮೈಲಾಪುರ ಗೇಟ್ ಬಳಿ ನಿಂತಿದ್ದ ಲಾರಿಗೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಹೊಸಕೋಟೆ ಕೋಲಾರ ರಾಷ್ಟ್ರೀಯ ಹೆದ್ದಾರಿಯ ಮೈಲಾಪುರ ಗೇಟ್ ಬಳಿ ದುರ್ಘಟನೆ ಸಂಭವಿಸಿದೆ.
18 ವರ್ಷದ ಅಶ್ವಿನಿ ಎಂಬಾಕೆ ಅವಸರವಾಗಿ ರಸ್ತೆ ದಾಟುತ್ತಿದ್ದಾಗ ಈ ಅವಘಡ ಸಂಭವಿಸಿದ್ದು ಯುವತಿಗೆ ಗಂಭೀರ ಗಾಯಗಳಾಗಿವೆ. ಬಳ್ಳಾರಿ ರಸ್ತೆಯಲ್ಲಿ ನಡೆದ ಆ್ಯಕ್ಸಿಡೆಂಟ್ನ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಾಸ್ತವವಾಗಿ, ಈ ವೀಡಿಯೊದಲ್ಲಿ, ಹೆಲ್ಮೆಟ್ ಧರಿಸಿರುವ ಇಬ್ಬರು ಹುಡುಗರು ಕಾರು ಚಾಲಕನೊಂದಿಗೆ ಗಲಾಟೆ ಮಾಡಲು ಮುಂದಾಗುವುದನ್ನು ನೋಡಬಹುದು. ಇಬ್ಬರೂ ಕಾರಿನ ಮೇಲೆ ಮೆಟ್ಟುವುದು, ಚಾಲಕನನ್ನು ನಿಂದಿಸುವುದು ದೃಶ್ಯದಲ್ಲಿ ಕಾಣುತ್ತದೆ.
ಗುಜರಾತ್ನ ಅರಾವಳಿಯಲ್ಲಿ ಭಾರೀ ರಸ್ತೆ ಅಪಘಾತ: ಗುಜರಾತ್ನ ಅರಾವಳಿ ಜಿಲ್ಲೆಯಲ್ಲಿ ಭಾರೀ ಅಪಘಾತ ಸಂಭವಿಸಿದ್ದು, ಇಲ್ಲಿ ವೇಗವಾಗಿ ಬರುತ್ತಿದ್ದ ಕಾರು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ.
ಬೆಳ್ಳಂ ಬೆಳಗ್ಗೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಭೀಕರ ಅಪಘಾತ ಸಂಭವಿಸಿದೆ. ವಿದ್ಯಾರ್ಥಿನಿಯರಿದ್ದ ಕಾಲೇಜು ಬಸ್ ಹಾಗೂ ಗೂಡ್ಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಬಣಜವಾಡ ಕಾಲೇಜಿಗೆ ಸೇರಿದ ವಾಹನ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದೆ. ಬಸ್ನಲ್ಲಿ 10 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನನಿಸಲಾಗಿದೆ.
ಮೃತರೆಲ್ಲರೂ ತೆಲಂಗಾಣದ ಕೊಡಂಗಲ್ ಸಮೀಪದ ದರ್ಗಾಕ್ಕೆ ತೆರಳಿದ್ದರು. ದರ್ಗಾದಲ್ಲಿ ಜವಳ ಕಾರ್ಯಕ್ರಮ ಹಾಗೂ ಪೂಜೆ ಸಲ್ಲಿಸಿ ಹಟ್ಟಿ ಗ್ರಾಮಕ್ಕೆ ವಾಪಸ್ ಬರುತ್ತಿರುವಾಗ ಕಾರು ಮತ್ತು ಲಾರಿ ನಡುವೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದ ಬಳಿಕ ಎಳನೀರು ತುಂಬಿದ ಲಾರಿ ಹೊತ್ತಿ ಉರಿದ ಘಟನೆ ತುಮಕೂರು ಸಮೀಪ ನಡೆದಿದೆ. ತುಮಕೂರು ತಾಲೂಕಿನ ಗೂಳೂರು ಗ್ರಾಮದಲ್ಲಿ ಮದ್ದೂರಿನಿಂದ ಬರುತ್ತಿದ್ದ ಎಳನೀರು ಹೊತ್ತ ಲಾರಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಜಾತವಾರ ಬಳಿಯ ಹೊಸಹಳ್ಳಿ ರೈಲ್ವೇ ಅಂಡರ್ ಪಾಸ್ ಗೋಡೆಗೆ ಟೊಮೆಟೊ ಲಾರಿ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಟೊಮೆಟೊ ತುಂಬಿದ್ದ ಲಾರಿ ಉರುಳಿ ಬಿದ್ದದ್ದಿದೆ. ಈ ವೇಳೆ ಚಾಲಕನಿಗೆ ಗಂಭೀರ ಗಾಯವಾಗಿದೆ.
ಹೊಸಕೋಟೆಯ ಸಂತೆ ಗೇಟ್ ಬಳಿ ಮೂರು ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ... ಅಪಘಾತದಲ್ಲಿ 3 ವಾಹನಗಳು ಜಖಂಗೊಂಡಿವೆ. ಕಾರು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗ್ತಿದೆ. ಅಪಘಾತದಿಂದಾಗಿ ಹೊಸಕೋಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಳಗಾವಿ ಹೊರವಲಯದ ಗಣೇಶಪುರ ರಸ್ತೆಯಲ್ಲಿ ಅದೃಷ್ಟವಶಾತ್ ಅಪಘಾತವೊಂದು ತಪ್ಪಿದೆ.. ಯುವತಿಯೊಬ್ಬಳು ಸ್ಕೂಟಿಯಲ್ಲಿ ಹೋಗ್ತಿರಬೇಕಾದ್ರೆ ನಾಯಿಯೊಂದು ಅಡ್ಡ ಬಂದಿದೆ.. ಈ ವೇಳೆ ಯುವತಿ ಬ್ರೇಕ್ ಹಾಕಿದ್ದು, ಸ್ಕಿಡ್ ಆಗಿ ಸ್ಕೂಟಿ ಬಿದ್ದಿದೆ.. ಹಿಂಬದಿಯಿಂದ ವೇಗವಾಗಿ ಲಾರಿಯೊಂದು ಬಂದಿದ್ದು, ತಕ್ಷಣ ಲಾರಿ ನಿಲ್ಲಿಸೋ ಮೂಲಕ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾನೆ. ಯುವತಿ ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.