ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಹಾಗೂ ಉದ್ದೇಶಿತ MAR ಗೆ ಭೂಸ್ವಾಧೀನಪಡಿಸಿಕೊಂಡಿದ್ದು, ಇದರಲ್ಲಿ ಅನಧಿಕೃತವಾಗಿ ಕಂದಾಯ ನಿವೇಶನದಾರರು ಒತ್ತುವರಿ ಮಾಡಿಕೊಂಡು ಕಾಮಗಾರಿಗೆ ಅಡಚಣೆ ಉಂಟುಮಾಡುತ್ತಿದ್ದರಿಂದ ಸುಮಾರು 5 ಎಕರೆ ಜಮೀನನ್ನು ತೆರವುಗೊಳಿಸಿ ಪ್ರಾಧಿಕಾರವು ತನ್ನ ಸುಪರ್ಧಿಗೆ ತೆಗೆದುಕೊಂಡಿದೆ.
ಗಣೇಶ ವಿಸರ್ಜನೆಗೆ ನಗರದ ಕೇಂದ್ರ ಭಾಗದಲ್ಲಿರುವ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಹಾಗೂ ಇತರೆ ಪ್ರಮುಖ ಕೆರೆ/ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಸೂಚಿಸಿದರು.
ನಿನ್ನೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದೆ. ಡಿಸಿಎಂ ಸೂಚನೆ ಮೇರೆಗೆ ಮೂರು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದು, ಪೊಲೀಸ್ರು, ಬಿಬಿಎಂಪಿ ಹಾಗೂ ಇಂಧನ ಇಲಾಖೆಯಿಂದ ತನಿಖೆ ನಡೆಸಲಾಗುತ್ತಿದೆ. ಈ ಮಧ್ಯೆ ಹಲಸೂರ್ ಗೇಟ್ ಪೊಲೀಸ್ರು ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡು ಇಬ್ಬರು ಅಧಿಕಾರಿಗಳನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದು, ಅವ್ರಿಂದ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ಮಳೆ ನೀರುಗಾಲುವೆಗಳ ಒತ್ತುವರಿ ತೆರವು ಕಾರ್ಯಚರಣೆಗೆ ಸಂಬಂಧಿಸಿದಂತೆ ತೆರವು ಕಾರ್ಯಚರಣೆಯನ್ನು ತ್ವರಿತಗತಿಯಲ್ಲಿ ನಡೆಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚಿಸಿದರು.
ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರನ್ನು ಖಾಯಂಗೊಳಿಸುವ ಕುರಿತು ರಾಜ್ಯ ಬೆಜಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ದಲಿತರು ಮತ್ತು ಶೋಷಿತರ ಬೆಂಬಲದಿಂದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಕೂಡಲೇ ಪೌರಕಾರ್ಮಿಕರ ಹಿತ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಪೌರಕಾರ್ಮಿಕರ ಮಹಾಸಂಘ ಒತ್ತಾಯಿಸಿದೆ.
ಬಿಬಿಎಂಪಿಯಲ್ಲಿ ಕಾರ್ಪೋಪೇಟರ್ಗಳೇ ಇಲ್ಲದೇ ಬರೊಬ್ಬರಿ 3 ವರ್ಷಗಳಾಯ್ತು. ಬಿಬಿಎಂಪಿ ಎಲೆಕ್ಷನ್ ಈಗ ನಡೆಯುತ್ತೆ ಆಗ ನಡೆಯುತ್ತೆ ಅಂತ ಕಾಯ್ತಿದ್ದ ಜನರಂತೂ ಎಲೆಕ್ಷನ್ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಕಾರ್ಪೋರೇಟರ್ಗಳಿಲ್ಲದ ಕಾರಣ ವಾರ್ಡ್ಗಳಲ್ಲಿ ಸಮಸ್ಯೆಗಳ ಪಟ್ಟಿ ಏರುತ್ತಲೇ ಹೋಗ್ತಿದೆ. ನಗರವಾಸಿಗಳೆಲ್ಲಾ ಯಾವ ಸಮಸ್ಯೆಯಿಂದ ಅತಿಯಾಗಿ ಬಳಲ್ತಿದ್ದಾರೆ ಅಂತ ಒಂದು ವಿಭಿನ್ನ ಸರ್ವೇ ನಡೆಸಲಾಗಿದೆ. ಸಾಲ್ವ್ ನಿಂಜಾ ಚಾಟ್ಬಾಟ್ ಎಂಬ ಸಂಸ್ಥೆ ನಡೆಸಿರೋ ಸ್ಟ್ರೀಟ್ ಆಡಿಟ್ನಲ್ಲಿ ಹೊರಬಿದ್ದಿರೋ ಮಾಹಿತಿ ಇಲ್ಲಿದೆ.
8 ವಿಧಾನಸಭಾ ಕ್ಷೇತ್ರಗಳು, 60 ವಾರ್ಡ್ಗಳು, 412 ರಸ್ತೆಗಳು..!
40000 ಜನರ ಬೇಡಿಕೆ ಆಲಿಸಿದ ಸಾಲ್ವ್ ನಿಂಜಾ ಚಾಟ್ಬಾಟ್.
ನೀವು ಪೌರಕಾರ್ಮಿಕ ಕೆಲಸಕ್ಕಾಗಿ ಕಾಯ್ತಿದ್ದೀರಾ..!? ಹಾಗಿದ್ರೇ ನೀವು ಮದುವೆ ಆಗೋ ವಿಚಾರದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ಇಲ್ಲ ಅಂದ್ರೇ ನೀವು ಕೆಲಸ ಮಾಡಲು ಆನರ್ಹರಾಗ್ತೀರಿ ಹುಷಾರ.. ಬಿಬಿಎಂಪಿ ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದಾರೆ. ಅದ್ರಲ್ಲಿ ಏನಿದೆ ವಿಷೇಶ ಅಂದ್ರೆ..? ಆ ಬಗ್ಗೆ ವರದಿ ಇದೆ ಮುಂದೆ ಓದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.