BBMP NEWS: ಕಾರ್ಪೋಪೇಟರ್‌ಗಳೇ ಇಲ್ಲದ ಬಿಬಿಎಂಪಿ ಗೋಳು ಕೇಳುವವರು ಯಾರು?

Written by - Bhavya Sunil Bangera | Edited by - Manjunath N | Last Updated : Jul 5, 2023, 04:20 PM IST
  • ಡ್ರೈನೇಜ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು
  • ಬೀದಿ ದೀಪಗಳನ್ನು ಶೀಘ್ರದಲ್ಲೇ ಅಳವಡಿಸಬೇಕು ಹಾಗು ಬದಲಾಯಿಸಬೇಕು
  • ರಸ್ತೆಗಳಿಗೆ ಡಾಂಬರೀಕರಣ ಮಾಡಿಸಬೇಕು, ಗುಂಡಿಗಳನ್ನೂ ಮುಚ್ಚಬೇಕು.
BBMP NEWS: ಕಾರ್ಪೋಪೇಟರ್‌ಗಳೇ ಇಲ್ಲದ ಬಿಬಿಎಂಪಿ ಗೋಳು ಕೇಳುವವರು ಯಾರು? title=

ಬಿಬಿಎಂಪಿಯಲ್ಲಿ ಕಾರ್ಪೋಪೇಟರ್‌ಗಳೇ ಇಲ್ಲದೇ ಬರೊಬ್ಬರಿ 3 ವರ್ಷಗಳಾಯ್ತು. ಬಿಬಿಎಂಪಿ ಎಲೆಕ್ಷನ್ ಈಗ ನಡೆಯುತ್ತೆ ಆಗ ನಡೆಯುತ್ತೆ ಅಂತ ಕಾಯ್ತಿದ್ದ ಜನರಂತೂ ಎಲೆಕ್ಷನ್‌ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಕಾರ್ಪೋರೇಟರ್‌ಗಳಿಲ್ಲದ ಕಾರಣ ವಾರ್ಡ್‌ಗಳಲ್ಲಿ ಸಮಸ್ಯೆಗಳ ಪಟ್ಟಿ ಏರುತ್ತಲೇ ಹೋಗ್ತಿದೆ. ನಗರವಾಸಿಗಳೆಲ್ಲಾ ಯಾವ ಸಮಸ್ಯೆಯಿಂದ ಅತಿಯಾಗಿ ಬಳಲ್ತಿದ್ದಾರೆ ಅಂತ ಒಂದು ವಿಭಿನ್ನ ಸರ್ವೇ ನಡೆಸಲಾಗಿದೆ. ಸಾಲ್ವ್ ನಿಂಜಾ ಚಾಟ್‌ಬಾಟ್ ಎಂಬ ಸಂಸ್ಥೆ ನಡೆಸಿರೋ ಸ್ಟ್ರೀಟ್ ಆಡಿಟ್‌ನಲ್ಲಿ ಹೊರಬಿದ್ದಿರೋ ಮಾಹಿತಿ ಇಲ್ಲಿದೆ.

8 ವಿಧಾನಸಭಾ ಕ್ಷೇತ್ರಗಳು, 60 ವಾರ್ಡ್‌ಗಳು, 412 ರಸ್ತೆಗಳು..!
40000 ಜನರ ಬೇಡಿಕೆ ಆಲಿಸಿದ ಸಾಲ್ವ್ ನಿಂಜಾ ಚಾಟ್‌ಬಾಟ್.

ಇದನ್ನೂ ಓದಿ: ಇನ್ನೇಕೆ ಹೇರ್ ಡೈ..? ಈ 3 ಎಲೆಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಕಪ್ಪಾಗುತ್ತೆ!

ನಗರದ ಆಡಳಿತ ಹಾಗು ನಿರ್ವಹಣೆ ಸ್ಮೂತ್ ಆಗಿ ನಡೆಯಬೇಕು ಅಂದ್ರೆ ಪ್ರತಿ ಕ್ಷೇತ್ರಕ್ಕೂ ಶಾಸಕರಿರೋ ಹಾಗೆ, ಪ್ರತಿ ವಾರ್ಡ್‌ನಲ್ಲಿ ಕಾರ್ಪೋರೇಟರ್GB ಇರಲೇಬೇಕು. ಆಗಲೇ ವಾರ್ಡ್‌ ಮಟ್ಟದ ಸಮಸ್ಯೆಗಳು ಅದೇ ಹಂತದಲ್ಲೇ ಅತ್ಯಂತ ವೇಗವಾಗಿ ಬಗೆಹರಿಯುತ್ತೆ. ಕಾರ್ಪೋರೇಟರ್‌ಗಳಲ್ಲಿದಿರೋ ಬೆಂಗಳೂರಿನಲ್ಲಿ ಸಮಸ್ಯೆಗಳನ್ನು ಬಗೆಹರಿಸೋರ್ಯಾರು ಎಂಬ ಪ್ರಶ್ನೆ ಒಂದೆಡೆದಾದ್ರೆ, ಜನರ ಮುಖ್ಯ ಸಮಸ್ಯೆಗಳೇನು ಅಂತ ಅರ್ಥ ಮಾಡಿಕೊಂಡು ಸರ್ಕಾರಕ್ಕೆ ವರದಿ ನೀಡೋದಕ್ಕೆ ಸಾಲ್ವ್ ನಿಂಜಾ ಚಾಟ್‌ಬಾಟ್ ಸಂಸ್ಥೆ ವಿಭಿನ್ನ ಸರ್ವೇ ನಡೆಸಿತ್ತು. ಬೆಂಗಳೂರು ದಕ್ಷಿಣ ಭಾಗದಲ್ಲಿರೋ 8 ವಿಧಾನಸಭಾ ಕ್ಷೇತ್ರಗಳಲ್ಲಿನ 60 ವಾರ್ಡ್‌ಗಳಲ್ಲಿ 40 ಸಾವಿರ ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ. ಸಣ್ಣ ಮನೆಯಿಂದ ಹಿಡಿದು ಅಪಾರ್ಟ್‌ಮೆಂಟ್‌ಗಳಿಗೆ ಖುದ್ದು ಭೇಟಿ ನೀಡಿ ಜನರ  ಬೇಡಿಕೆ ಹಾಗು ಆಕ್ರೋಶವನ್ನು ಆಲಿಸಿದೆ.
ಸಾಲ್ವ್ ನಿಂಜಾ ಚಾಟ್‌ಬಾಟ್‌ನ ಸ್ಟ್ರೀಟ್ ಆಡಿಟ್‌ನಲ್ಲಿ ಕಂಡು ಬಂದ ಪ್ರಮುಖ ಬೇಡಿಕೆಗಳು

1.    ಡ್ರೈನೇಜ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. 
2.    ಬೀದಿ ದೀಪಗಳನ್ನು ಶೀಘ್ರದಲ್ಲೇ ಅಳವಡಿಸಬೇಕು ಹಾಗು ಬದಲಾಯಿಸಬೇಕು.
3.    ರಸ್ತೆಗಳಿಗೆ ಡಾಂಬರೀಕರಣ ಮಾಡಿಸಬೇಕು, ಗುಂಡಿಗಳನ್ನೂ ಮುಚ್ಚಬೇಕು.
4.    ಫುಟ್‌ಪಾತ್‌ಗಳ ಮೇಲಿರೋ ದ್ವಿಚಕ್ರ ವಾಹನಗಳು ಹಾಗು ಕಾರ್‌ಗಳನ್ನು ತೆರವು ಮಾಡಬೇಕು.
5.    ತೆರವು ಮಾಡಿದ ನಂತರ ಮೋರಿಗಳನ್ನು ಶುಚಿ ಮಾಡಬೇಕು.
6.    ಪ್ರತಿಯೊಂದು ವಾರ್ಡ್‌ನಲ್ಲಿ ಪಾರ್ಕಿಂಗ್ ಕಾಂಪ್ಲೆಸ್ ನಿರ್ಮಿಸಬೇಕು.
7.    ಎಲ್ಲೆಂದರಲ್ಲಿ ಕಸವನ್ನು ಸುಡಲಾಗುತ್ತಿದ್ದು, ಇದಕ್ಕೆ ಫುಲ್‌ಸ್ಟಾಪ್ ಇಡಬೇಕು.
8.    ರಸ್ತೆಗಳಲ್ಲಿರೋ ಬ್ಲಾಕ್‌ಸ್ಪಾಟ್‌ಗಳನ್ನು ಇನ್ನಿಲ್ಲದಂತೆ ಮಾಡಬೇಕು.

ನಗರದ ಬಗ್ಗೆ ಜನರ ಅಭಿಪ್ರಾಯ ಏನೆಂದು ತಿಳಿಯೋದಕ್ಕೆ ವಿಶ್ವ ಪರಿಸರ ದಿನಾಚರಣೆಯಂದು ಈ ವಿಭಿನ್ನ ಸರ್ವೇ ಆರಂಭಿಸಲಾಯ್ತು. ನಗರದ ಜನರನ್ನು ಮಾತ್ರವಲ್ಲದೇ ಇತರೆ ರಾಜ್ಯಗಳಿಂದ ಬಂದಿರೋ ವ್ಯಕ್ತಿಗಳ ಅಭಿಪ್ರಾಯವನ್ನೂ ಸಂಗ್ರಹಿಸಲಾಗಿತ್ತು. ಈ ಹಿಂದೆ ಪಟ್ಟಿ ಮಾಡಿರೋ ಸಮಸ್ಯೆಗಳನ್ನು ಹೊರತುಪಡಿಸಿ ಅನೇಕ ಸಮಸ್ಯೆಗಳನ್ನು ಸಾಲ್ವ್ ನಿಂಜಾ ಚಾಟ್‌ಬಾಟ್ ತಾನೇ ಗುರುತಿಸಿದೆ. ಈಗಾಗಲೇ ಸಮಸ್ಯೆಗಳ ಪಟ್ಟಿಯನ್ನು ಈ ಸಂಸ್ಥೆ ಸಿದ್ದಪಡಿಸಿದ್ದು ಪಾಲಿಕೆಗೆ, ಡಿಸಿಎಂಗೆ ಹಾಗು ಸರ್ಕಾರಕ್ಕೆ ಸಲ್ಲಿಸಲು ಸಿದ್ದವಾಗಿದೆ.
 ಪಾಲಿಕೆಯ ಚುನಾವಣೆ ನಡೆಸಿ, ಜನರ ಸಮಸ್ಯೆಗಳಿಗೆ ಅಂತ್ಯ ಹಾಡಿ..!

ಇದನ್ನೂ ಓದಿ: ಸ್ವಯಂಪ್ರೇರಿತ ಹೇಳಿಕೆಯಲ್ಲಿ ಶ್ರೀಕಿ ಅಸಲಿ ಮುಖ ಅನಾವರಣ

ಕಳೆದ 3 ವರ್ಷಗಳಿಂದ ಪಾಲಿಕೆಯ ಚುನಾವಣೆಗೆ ಮಾಜಿ ಕಾರ್ಪೋರೇಟರ್‌ಗಳಿಗಿಂತ ಹೆಚ್ಚಾಗಿ ನಗರದ ಜನರು ಕಾಯ್ತಿದ್ದಾರೆ. Local Governance ಗೆ Local Leader ಇರಬೇಕು ಅನ್ನೋದು ಜನರಿಗೂ ಹಾಗು ಸರ್ಕಾರಕ್ಕೂ ಈಗ ಮನದಟ್ಟಾಗಿದೆ. ಸ್ಥಳೀಯ ಜನಪ್ರತಿನಿಧಿಯಿದ್ರೆ ಯಾವ ಸಮಸ್ಯೆ ಬೇಕಾದ್ರೂ ಬಗೆಹರಿಯುತ್ತೆ ಅನ್ನೋದು ಎಲ್ಲರಿಗೂ ಅರಿವಾಗಿದೆ. ಅದಕ್ಕೆ ಪೂರಕವಾಗಿ ಸಾಲ್ವ್ ನಿಂಜಾ ಚಾಟ್‌ಬಾಟ್ ವರದಿಯನ್ನು ಕೂಡ ಸಿದ್ದಪಡಿಸಿದೆ. ಒಟ್ನಲ್ಲಿ, ಸರ್ಕಾರ ಈ ವರದಿಯನ್ನು ಯಾವ ರೀತಿ ಪರಿಗಣಿಸುತ್ತೆ, ಯಾವ ಕ್ರಮವನ್ನ ಕೈಗೊಳ್ಳುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Trending News