ಅಂಬೇಡ್ಕರ್ ಪರಿ ನಿರ್ವಹಣಾ ದಿನಾಚರಣೆ- ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಡಿ6ರಂದು ಪಟ್ಟಣದ ಡಾ" ಬಿ.ಆರ್. ಅಂಬೇಡ್ಕರ್ ರವರ ವೃತ್ತದಲ್ಲಿ, ಅಂಬೇಡ್ಕರ್ ಸಂಘಟನೆ ಹಾಗೂ ದಲಿತ ಸಂಘಟನೆಗಳಿಂದ ಡಾ"ಬಿ.ಆರ್.ಅಂಬೇಡ್ಕರ್ ರವರ 67ನೇ ಪರಿನಿರ್ವಹಣಾ ದಿನಾಚರಣೆಯನ್ನು ಆಚರಿಸಲಾಯಿತು. ಡಾ" ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಗಳಿಂದ ಪೂಜಿಸಿ ನಮಿಸಲಾಯಿತು, ನಂತರ ದಲಿತ ಮಖಂಡ ಎಸ್.ದುರುಗೇಶ ಸೇರಿದಂತೆ ವಿವಿದ ದಲಿತ ಮುಖಂಡರು ಮಾತನಾಡಿ ನುಡಿ ನಮನ ಸಲ್ಲಿಸಿದರು.
ಡಾ. B.R ಅಂಬೇಡ್ಕರ್ ಸಂವಿಧಾನ ನೀಡದೇ ಇದ್ದಿದ್ದರೆ ನಾನು ಸಿಎಂ ಆಗ್ತಿರಲಿಲ್ಲ. ಬದ್ಲಿಗೆ ಕುರಿ, ಎಮ್ಮೆ ಕಾಯ್ತಾ ಇರುತ್ತಿದ್ದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಜೀವನದ ಘಟನೆಗಳನ್ನ ನೆನಪಿಸಿಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಜಿಲ್ಲಾಡಳಿತ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಸಿಎಂ ಮಾತನಾಡಿದರು. ಜನರಿಗೆ ಬಸವಣ್ಣ, ಹಡಪದ ಅಪ್ಪಣ್ಣ ಅವರಂಥವರ ಆದರ್ಶ ಮತ್ತು ವಿಚಾರಗಳು ಗೊತ್ತಾಗ್ಬೇಕು. ಹೃದಯ ಇದ್ದರೆ ಸಾಕು. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ ಅಂತೇಳಿದ್ರು... ಇನ್ನೂ ಒಮ್ಮೆ ನನ್ನ ಕಾರಿನ ಮೇಲೆ ಕಾಗೆ ಕೂತಾಗ ಹಲವರು ಊಹಾಪೋಹಾ ವ್ಯಕ್ತಪಡಿಸಿದ್ದರು.
Karnataka MLA Training: ರಾಜಕಾರಣ ಇರುವುದು ಜನರ ಸೇವೆಗಾಗಿಯೇ ಹೊರತು ಧಿಮಾಕು ತೋರಿಸಲು ಅಲ್ಲ. ರಾಜಕಾರಣಿ ಜನರ ಸೇವಕ. ಇದು ಮನಸ್ಸಿನಲ್ಲಿ ಇದ್ರೆ ಮಾತ್ರ ಸಾರ್ವಜನಿಕ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಷ್ಟ್ರ ನಾಯಕರನ್ನು ಅವಹೇಳನ ಮಾಡಿ ಜನರ ಮನಸ್ಸಿಗೆ ನೋವುಂಟು ಮಾಡಿದ್ದಾರೆ, ಈಗಾಗಲೇ ಸಂಜೀವ್ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ಆರೋಪವೂ ಕೇಳಿಬಂದಿದ್ದು ಸರ್ಕಾರಕ್ಕೆ ಮುಜುಗುರ ಉಂಟಾಗುವ ಸನ್ನಿವೇಶ ಸೃಷ್ಟಿಸಿದ್ದು ಕೂಡಲೇ ಅವರನ್ನು ಸಿಮ್ಸ್ ಡೀನ್ ಹುದ್ದೆಯಿಂದ ಬಿಡುಗಡೆ ಮಾಡಬೇಕೆಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಪರಿಷ್ಕೃತ ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಪದ ಬಿಟ್ಟಿರುವ ವಿಚಾರ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ, ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಬೇಡ. ಅಂಬೇಡ್ಕರ್ ಅಂದ್ರೆ ಏನು ಅಂತ ಎಲ್ರಿಗೂ ಗೊತ್ತು. ಅಂಬೇಡ್ಕರ್ ಹೆಸರಲ್ಲೇ ಎಲ್ಲವೂ ಇದೆ. ಎಲ್ಲೋ ಒಂದು ಕಡೆ ಸಂವಿಧಾನ ಶಿಲ್ಪಿ ಅಂತ ನಮೂದಾಗೋದು ಬಿಟ್ಹೋದ್ರೆ ಏನಾಗುತ್ತೆ? ಮತ್ತೆ ಸೇರಿಸಿಕೊಂಡರೆ ಆಯ್ತು ಎಂದು ಹೇಳಿಕೆ ನೀಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.