ಅಪ್ಪು ಅಗಲಿಕೆ ನಂತ್ರ ಈ ಚಿತ್ರವನ್ನು ಯಾರು ಮಾಡ್ತಾರೆ ಅನ್ನೋ ಕುತೂಹಲ ಮೂಡಿತ್ತು. ಅದ್ರೆ ಚಿತ್ರದ ನಿರ್ದೇಶಕರ ಪವನ್ ಕುಮಾರ್ ಅಗಲಿ ಹೊಂಬಾಳೆ ಪ್ರೊಡಕ್ಷನ್ ಆಗಲಿ ಈ ಸಿನಿಮಾ ಮತ್ತೆ ಮಾಡುವ ಸೂಚನೆ ಕೊಟ್ಟಿರಲಿಲ್ಲ.. ಇದ ನೋಡಿದ ಪವರ್ ಫ್ಯಾನ್ಸ್ ಅಪ್ಪು ಇಷ್ಟ ಪಟ್ಟು ಒಕೆ ಮಾಡಿದ್ದ "ದ್ವಿತ್ವ" ಬರಲ್ಲ ಅಂತ ನೊಂದು ಕೊಂಡಿದ್ರು.. ಅದ್ರೆ ಈಗ ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಅದೇನಪ್ಪ ಅಂದ್ರೆ ಅಪ್ಪು ಮಾಡಬೇಕಿದ್ದ ದ್ವಿತ್ವ ಸಿನಿಮಾ ಬೆಳ್ಳಿ ತೆರೆ ಬೆಳಗಿಸೋದು ಪಕ್ಕಾ ಅಂತೆ.. ಬೇಸರದ ಸಂಗತಿ ಅಂದ್ರೆ ಅಪ್ಪು ಮಾಡಬೇಕಿದ್ದ ಪಾತ್ರ ಬೇರೆ ನಟನ ಪಾಲಾಗಿರೋದು..