ಪವರ್ ಸ್ಟಾರ್ ಡಾ. ಪುನೀತ್ ಮಾಡಬೇಕಿದ್ದ "ದ್ವಿತ್ವ" ಸಿನಿಮಾ ಯಾರ ಪಾಲಾಗಿದೆ ಗೊತ್ತಾ..?

ಅಪ್ಪು ಅಗಲಿಕೆ ನಂತ್ರ ಈ ಚಿತ್ರವನ್ನು ಯಾರು ಮಾಡ್ತಾರೆ ಅನ್ನೋ ಕುತೂಹಲ ಮೂಡಿತ್ತು. ಅದ್ರೆ  ಚಿತ್ರದ ನಿರ್ದೇಶಕರ ಪವನ್ ಕುಮಾರ್ ಅಗಲಿ ಹೊಂಬಾಳೆ ಪ್ರೊಡಕ್ಷನ್ ಆಗಲಿ ಈ ಸಿನಿಮಾ ಮತ್ತೆ ಮಾಡುವ ಸೂಚನೆ ಕೊಟ್ಟಿರಲಿಲ್ಲ.. ಇದ ನೋಡಿದ ಪವರ್ ಫ್ಯಾನ್ಸ್ ಅಪ್ಪು ಇಷ್ಟ ಪಟ್ಟು ಒಕೆ ಮಾಡಿದ್ದ "ದ್ವಿತ್ವ" ಬರಲ್ಲ ಅಂತ ನೊಂದು ಕೊಂಡಿದ್ರು.. ಅದ್ರೆ ಈಗ ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಅದೇನಪ್ಪ ಅಂದ್ರೆ ಅಪ್ಪು ಮಾಡಬೇಕಿದ್ದ ದ್ವಿತ್ವ ಸಿನಿಮಾ ಬೆಳ್ಳಿ ತೆರೆ ಬೆಳಗಿಸೋದು ಪಕ್ಕಾ ಅಂತೆ.. ಬೇಸರದ ಸಂಗತಿ ಅಂದ್ರೆ ಅಪ್ಪು ಮಾಡಬೇಕಿದ್ದ ಪಾತ್ರ ಬೇರೆ ನಟನ ಪಾಲಾಗಿರೋದು‌..  

Written by - YASHODHA POOJARI | Edited by - Yashaswini V | Last Updated : Nov 30, 2022, 03:55 PM IST
  • ಅಪ್ಪು ಇಲ್ಲದ ವೇಳೆ ಈ ಚಿತ್ರ ಮಾಡೋದೇ ಬೇಡ ಎಂದು ಹೊಂಬಾಳೆಯವರು ನಿರ್ಧಾರ ಮಾಡಿದ್ರಂತೆ..
  • ಅದ್ರೆ ಈ ಸಿನಿಮಾ ಅಪ್ಪು ಮಾಡಿದ್ರೆ ಇನ್ನೊಂದು "ಜೀವನ ಚೈತ್ರ' ಆಗ್ತಿತ್ತು.
  • ಯಾಕಂದ್ರೆ ಅಣ್ಣಾವ್ರ ಜೀವನ ಚೈತ್ರ ಸಿನಿಮಾ ನೋಡಿ ಅದೇಷ್ಟೋ ಹಳ್ಳಿಗಳಲ್ಲಿ ಸಾರಾಯಿ ಅಂಗಡಿ‌ ಮುಚ್ಚಿಸಿ. ಅದೇಷ್ಟೋ ಮಂದಿ ಸಾರಾಯಿ ಕುಡಿಯೋದನ್ನ ನಿಲ್ಲಿಸಿದ್ರು‌.
ಪವರ್ ಸ್ಟಾರ್ ಡಾ. ಪುನೀತ್ ಮಾಡಬೇಕಿದ್ದ "ದ್ವಿತ್ವ" ಸಿನಿಮಾ ಯಾರ ಪಾಲಾಗಿದೆ ಗೊತ್ತಾ..?
Dvitva

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮ ಜೊತೆ ದೈಹಿಕವಾಗಿ ಇದ್ದಿದ್ರೆ ಇಷ್ಟೊತ್ತಿಗೆ ಮೂರ್ನಾಲ್ಕು ಸಿನಿಮಾಗಳು ರೆಡಿ ಆಗ್ತಿದ್ವು ಅಭಿಮಾನಿಗಳ ಪ್ರೀತಿಯ ಅರಸ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಹೊಸತನದ ಹಸಿವು ಹೆಚ್ಚಿತ್ತು‌.‌ ಹೊಸ ಕದಿ, ಸಮಾಜಕ್ಕೆ ಸಂದೇಶ ಕೊಡುವ ಸಿನಿಮಾಗಳು, ಬಹುಮುಖ ಪ್ರತಿಭೆಗಳಿಗೆ ವೇದಿಕೆ ಕೊಡುವ ತವಕ ಅಪ್ಪು ಅವರಿಗೆ ಸಾಕಷ್ಟಿತ್ತು. ಹಾಗಾಗಿಯೇ ಅಪ್ಪು ಪಿಆರ್ ಕೆ ಸಂಸ್ಥೆ ಹುಟ್ಟುಹಾಕಿ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಿ ಕೊಟ್ಟಿದ್ರು.. ಜೊತೆ ತಾವು ನಟಿಸೋ ಸಿನಿಮಾಗಳಲ್ಲೂ ಉತ್ತಮ ಸಂದೇಶ ಇರುವ ಸಿನಿಮಾಗಳನ್ನು ಮಾಡುವ ಉತ್ಸಾಹ ದೊಡ್ಮನೆ ರಾಜಕುಮಾರನಲ್ಲಿತ್ತು. ಈ  ನಡುವೆ 'ದ್ವಿತ್ವ' ಸಿನಿಮಾ ಆಗೋಕೆ ವೇದಿಕೆ ಸಿದ್ದವಾಗಿತ್ತು. ಇನ್ನೇನು ಈ ಸಿನಿಮಾ ಶೂಟಿಂಗ್ ಶುರುವಾಗಬೇಕು ಅಷ್ಟರಲ್ಲಿ ವಿಧಿಯ ಕ್ರೂರ ಕರೆಗೆ ಅಪ್ಪು ಹೊರಟೇ ಬಿಟ್ಟಿದ್ದರು... ದ್ವಿತ್ವ ಸಿನಿಮಾವಾಗದೆ ಬರವಣಿಗೆಯಲ್ಲೇ ನಿಂತಿತ್ತು.

ಅಪ್ಪು ಅಗಲಿಕೆ ನಂತ್ರ ಈ ಚಿತ್ರವನ್ನು ಯಾರು ಮಾಡ್ತಾರೆ ಅನ್ನೋ ಕುತೂಹಲ ಮೂಡಿತ್ತು. ಅದ್ರೆ  ಚಿತ್ರದ ನಿರ್ದೇಶಕರ ಪವನ್ ಕುಮಾರ್ ಅಗಲಿ ಹೊಂಬಾಳೆ ಪ್ರೊಡಕ್ಷನ್ ಆಗಲಿ ಈ ಸಿನಿಮಾ ಮತ್ತೆ ಮಾಡುವ ಸೂಚನೆ ಕೊಟ್ಟಿರಲಿಲ್ಲ.. ಇದ ನೋಡಿದ ಪವರ್ ಫ್ಯಾನ್ಸ್ ಅಪ್ಪು ಇಷ್ಟ ಪಟ್ಟು ಒಕೆ ಮಾಡಿದ್ದ "ದ್ವಿತ್ವ" ಬರಲ್ಲ ಅಂತ ನೊಂದು ಕೊಂಡಿದ್ರು.. ಅದ್ರೆ ಈಗ ಅಪ್ಪು ಅಭಿಮಾನಿಗಳಿಗೆ  ಸಿಹಿ ಸುದ್ದಿ ಸಿಕ್ಕಿದೆ. ಅದೇನಪ್ಪ ಅಂದ್ರೆ ಅಪ್ಪು ಮಾಡಬೇಕಿದ್ದ ದ್ವಿತ್ವ ಸಿನಿಮಾ ಬೆಳ್ಳಿ ತೆರೆ ಬೆಳಗಿಸೋದು ಪಕ್ಕಾ ಅಂತೆ.. ಬೇಸರದ ಸಂಗತಿ ಅಂದ್ರೆ ಅಪ್ಪು ಮಾಡಬೇಕಿದ್ದ ಪಾತ್ರ ಬೇರೆ ನಟನ ಪಾಲಾಗಿರೋದು‌..

ಇದನ್ನೂ ಓದಿ- Jamaaligudda Teaser: ಡಾಲಿ ಧನಂಜಯ್ ‘ಜಮಾಲಿಗುಡ್ಡ’ದ ಟೀಸರ್ ರಿಲೀಸ್

ಯೆಸ್.. ದ್ವಿತ್ವ ಚಿತ್ರ ಒಂದು ಉತ್ತಮ ಸಂದೇಶ ಸಾರುವ ಕಥೆಯಾಗಿತ್ತು.. ಸಿಗರೇಟ್ ನಿಂದ ಆಗುವ ಅನಾಹುತ, ಧೂಮಪಾನದಿಂದ ಆರೋಗ್ಯದ ಮೇಲಾಗುವ ಪರಿಣಾಮದ ಸುತ್ತ ದ್ವಿತ್ವದ ಕಥೆ ಹೆಣೆದಿದ್ರಂತೆ ಪವನ್.. ಈ ಕಥೆ ಇಷ್ಟ ಪಟ್ಟ ಅಪ್ಪು, ಸಮಾಜಕ್ಕೆ ಒಂದು ಸಂದೇಶ ಕೊಡುವ ಉದ್ದೇಶದಿಂದ ಜನರ ಆರೋಗ್ಯದ ಹಿತದೃಷ್ಟಿಯಿಂದ ದ್ವಿತ್ವ ಸಿನಿಮಾ ಮಾಡಲು ಉತ್ಸುಕರಾಗಿದ್ರಂತೆ.. ಆದ್ರೆ ಅಪ್ಪು ಕನಸು ನನಸಾಗೊಕು ಮುನ್ನ ಅಪ್ಪು ಪರಮಾತ್ಮ ಆದ್ರು.. ಆದ್ರೆ ಈಗ ಈ ಸಂದೇಶ ಸಾರುವ ಚಿತ್ರ ನಿಲ್ಲಬಾರದು, ಅಪ್ಪು ಕನಸು ನನಸಾಗಬೇಕು ಎಂಬ ಹಠದಲ್ಲಿ ಹೊಂಬಾಳೆ ದ್ವಿತ್ವ ಚಿತ್ರವನ್ನು ಟೈಟಲ್ ಬದಲಿಸಿ ಧೂಮಂ ಸಿನಿಮಾ ಮಾಡ್ತಿದ್ದಾರೆ ಹೊಂಬಾಳೆ ಬಳಗ..

ಇನ್ನು ಅಪ್ಪು ಇಲ್ಲದ ವೇಳೆ ಈ ಚಿತ್ರ ಮಾಡೋದೇ ಬೇಡ ಎಂದು ಹೊಂಬಾಳೆಯವರು ನಿರ್ಧಾರ ಮಾಡಿದ್ರಂತೆ.. ಅದ್ರೆ  ಈ ಸಿನಿಮಾ ಅಪ್ಪು ಮಾಡಿದ್ರೆ ಇನ್ನೊಂದು "ಜೀವನ ಚೈತ್ರ' ಆಗ್ತಿತ್ತು, ಯಾಕಂದ್ರೆ ಅಣ್ಣಾವ್ರ ಜೀವನ ಚೈತ್ರ ಸಿನಿಮಾ ನೋಡಿ ಅದೇಷ್ಟೋ ಹಳ್ಳಿಗಳಲ್ಲಿ ಸಾರಾಯಿ ಅಂಗಡಿ‌ ಮುಚ್ಚಿಸಿ. ಅದೇಷ್ಟೋ ಮಂದಿ ಸಾರಾಯಿ ಕುಡಿಯೋದನ್ನ ನಿಲ್ಲಿಸಿದ್ರು‌. ಒಂದು ವೇಳೆ ಅಪ್ಪು ದ್ವಿತ್ವ ಚಿತ್ರ ಮಾಡಿದ್ರೆ ಖಂಡಿತಾ ಅವರನ್ನು ಪ್ರೀತಿಸೋ ಮಂದಿ ಧೂಮಪಾನಕ್ಕೆ ಗುಡ್ ಬೈ ಹೇಳೆ ಹೇಳ್ತಿದ್ರಂತೆ ಅಂತ ಕಥೆ ಚಿತ್ರದಲ್ಲಿ ಅಡಗಿತ್ತಂತೆ..

ಇದನ್ನೂ ಓದಿ- "ಬೇರೆ ಯಾರೋ ನಮ್ಮ ಮದುವೆ ಡೇಟ್​ ಹೇಳುವ ಮುನ್ನ.." ಪ್ರಭಾಸ್​ ಜತೆಗಿನ ಲವ್ ಬಗ್ಗೆ ಕೃತಿ ಹೀಗಂದ್ರು

ಇಂತಹ ಕಥೆಯನ್ನ ಅಪ್ಪು ಓಕೆ ಮಾಡಿದ್ರು.. ಅವರಿಲ್ಲದಿದ್ರು ಈ ಸಂದೇಶ ಜನಕ್ಕೆ ತಲುಪಲೇ ಬೇಕೆಂಬ ಉದ್ದೇಶದಿಂದ ಹೊಂಬಾಳೆ ಫಿಲಂಸ್ ದ್ವಿತ್ವ ಕಥೆಯಲ್ಲೇ  ಮಾಲಿವುಡ್ ಸ್ಟಾರ್ ನಟನ ಜೊತೆ ಧೂಮಂ ಸಿನಿಮಾ ಮಾಡ್ತಿದ್ದಾರೆ‌. ಈ ಮೂಲಕ ಕರುನಾಡ ಅರಸ ಕಂಡ ಕನಸನ್ನು ನನಸು ಮಾಡಲು ಹೊಂಬಾಳೆ ಫಿಲಂಸ್ ಧೂಮಂ ಸಿನಿಮಾ ಮಾಡ್ತಿದ್ದು, ಅಪ್ಪು ಮಾಡಬೇಕಿದ್ದ ಪಾತ್ರದಲ್ಲಿ ಪ್ರತಿಭಾವಂತ ನಟ ಫಹಾದ್ ಫಾಜಿಲ್ ಯಾವ ರೀತಿ ಕಾಣಿಸ್ತಾರೆ ಅನ್ನೋ ಕುತೂಹಲ ಈಗ ಮೂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News