ಕಾಂಗ್ರೆಸ್ನ ಸುಳ್ಳಿನ ಸರದಾರ ಅಂದ್ರೆ ಸಿದ್ದರಾಮಯ್ಯ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಪ್ರಭು ಚವ್ಹಾಣ್ ವಾಗ್ದಾಳಿ ನಡೆಸಿದ್ದಾರೆ.. ಸಿದ್ದರಾಮಯ್ಯಗೆ ಕಣ್ಣು ಕಾಣಲ್ಲ.. ಕಿವಿಯೂ ಕೇಳಲ್ಲ. ಯಾರೋ ಕಿವಿಯಲ್ಲಿ ಹೇಳಿದ ಮಾತು ಕೇಳಿ ಹೇಳುತ್ತಾರೆ. ನನ್ನ ಬಗ್ಗೆ 40% ಕಮಿಷನ್ ಸತ್ಯ ಬಯಲು ಮಾಡಲು ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ..
ನಾನು ಮೀನು ತಿಂದು ದೇಗುಲಕ್ಕೆ ಹೋದ್ರೆ ಅಪಪ್ರಚಾರ.ಮಠಾಧೀಶರು ಕೂಡಾ ನನ್ನನ್ನು ಆಗ ಟೀಕೆ ಮಾಡಿದ್ದರು.ಆದ್ರೆ, ಸಿಟಿ.ರವಿ ವಿಚಾರದಲ್ಲಿ ಮಠಾಧೀಶರ ಮೌನ ಅಚ್ಚರಿ.ಮಠಾಧೀಶರ ಮೇಲೆ ಸಿದ್ದರಾಮಯ್ಯ ಅಸಮಾಧಾನ.ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ.
ರಾಜ್ಯದ ಬಜೆಟ್ ಮಂಡನೆ ಬಳಿಕ ನಾಡದೊರೆ ಬೊಮ್ಮಾಯಿ ಹಾವೇರಿ ಜಿಲ್ಲೆಗೆ ಇಂದು ಆಗಮಿಸಿದ್ದರು. ಸಿಎಂ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು. ಬಳಿಕ ಸಿಎಂ ಬೊಮ್ಮಾಯಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು. ಈ ವೇಳೆ ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಸಿಎಂ ಮಾತನಾಡಿದರು.
ಚುನಾವಣೆ ಹೊತ್ತಲ್ಲಿ ಬಾಗಲಕೋಟೆಯಲ್ಲಿ ಗಿಫ್ಟ್ ರಾಜಕೀಯ ಜೋರಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಗಲಗಲಿಯಲ್ಲಿ ಸಚಿವ ನಿರಾಣಿ ಬೆಂಬಲಿಗರು ಹಂಚಿದ ಸಕ್ಕರೆಯನ್ನು ಮಹಿಳೆಯೊಬ್ಬರು ತಿರಸ್ಕರಿಸಿದ್ದಾರೆ..
ರಾಜ್ಯದಲ್ಲಿ ಭ್ರಷ್ಟಾಚಾರ ಪಿತಾಮಹ ಸಿಎಂ ಬೊಮ್ಮಾಯಿ. ಟ್ರಾನ್ಸ್ಫರ್.. ಪೋಸ್ಟಿಂಗ್.. ಪ್ರಾಜೆಕ್ಟ್ ಸೇರಿದಂತೆ ಎಲ್ಲದರಲ್ಲೂ ಭ್ರಷ್ಟಾಚಾರ ನಡೀತಿದೆ. ಹಣ ಸಂಪಾದನೆ ಮಾಡಿ.. ಚುನಾವಣೆಗೆ ಹಣ ಹಾಕ್ತಾರೆ ಅಂತಾ ಸಿಎಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಫುಲ್ ಅಲರ್ಟ್. ಚುನಾವಣೆ ಗೆಲುವಿಗೆ BJP ಚಾಣಕ್ಯನ ಗೇಮ್ ಪ್ಲ್ಯಾನ್. ನಾಳೆ ಸಕ್ಕರೆನಾಡು ಮಂಡ್ಯಕ್ಕೆ ಅಮಿತ್ ಶಾ ಭೇಟಿ. ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ರಣತಂತ್ರ.
ಕರಾವಳಿಯಲ್ಲಿಂದು ಕಾಂಗ್ರೆಸ್ ಬೃಹತ್ ಸಮಾವೇಶ ಕುಮಟಾದಲ್ಲಿ ಕಾಂಗ್ರೆಸ್ ಜನಜಾಗೃತಿ ಸಮಾವೇಶ ಮಣಕಿ ಮೈದಾನದಲ್ಲಿ ಬಿಜೆಪಿ ವಿರುದ್ಧ ರಣತಂತ್ರ ಮುಂದಿನ ಚುನಾವಣೆಯಲ್ಲಿ ಗದ್ದುಗೆ ಏರಲು ಸಿದ್ಧತೆ ಸಮಾವೇಶದಲ್ಲಿ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಭಾಗಿ
ಚುನಾವಣೆಯಲ್ಲಿ ಎಲ್ಲರಿಗೂ ಅವಕಾಶ ಇದೆ. ಬಿಜೆಪಿಯವರು ಅವರ ತಯಾರಿ ಅವ್ರು ಮಾಡ್ತಾರೆ. ನಮ್ಮ ತಯಾರಿ ನಾವು ಮಾಡ್ತೀವಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು. ಚುನಾವಣೆಗೆ ಇನ್ನೂ ಆರೇಳು ತಿಂಗಳು ಬಾಕಿ ಇದೆ. ಅಷ್ಟರಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ನೋಡೋಣ ಎಂದ್ರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 130 ರಿಂದ 150 ಸೀಟು ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ನೂರಕ್ಕೆ ನೂರು ಬಹುಮತ ಪಡೆಯಲಿದೆ ಎಂದ ಸಿಎಂ, ಇದೇ ನನ್ನ ಕೊನೆಯ ಚುನಾವಣೆ. ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಆದ್ರೆ ಚುನಾವಣಾ ರಾಜಕೀಯದಲ್ಲಿ ಇರಲ್ಲ ಎಂದಿದ್ದಾರೆ.
2023 ನನ್ನ ಕೊನೆಯ ಚುನಾವಣೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಇದು ನನ್ನ ಕೊನೆಯ ಚುನಾವಣೆ. ನಂತರ ಯಾವುದೇ ಹುದ್ದೆ ಕೊಟ್ಟರೂ ನಾನು ಸ್ವೀಕಾರ ಮಾಡೋದಿಲ್ಲ ಎಂದಿದ್ದಾರೆ.
ಒಂದಕ್ಕಿಂತ ಹೆಚ್ಚು ಸ್ಥಾನಗಳಿಂದ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರುವ ಸಲುವಾಗಿ ಚುನಾವಣಾ ಆಯೋಗವು ಈಗ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.