ಬೆಂಗಳೂರು: ಚುನಾವಣೆ ಎಂಬುದು ಪಕ್ಷಗಳು, ಅವರ ಸಿದ್ಧಾಂತಗಳು ಮತ್ತು ಪ್ರಣಾಳಿಕೆಗಳ ನಡುವಿನ ಸ್ಪರ್ಧೆಯೇ ಹೊರತು ಅದೊಂದು ಸೌಂದರ್ಯ ಸ್ಪರ್ಧೆಯಲ್ಲವೆಂಬ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
#ಮಹಿಳಾವಿರೋಧಿಕಾಂಗ್ರೆಸ್ ಹ್ಯಾಶ್‍ಟ್ಯಾಗ್ ಬಳಸಿ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದೆ. ‘ಸರ್ವಶಕ್ತ ಮಹಿಳೆಯನ್ನು ಸೌಂದರ್ಯಕ್ಕೆ ಸೀಮಿತ ಮಾಡುವ ಮುನ್ನ ಜೈರಾಮ್ ರಮೇಶ್ ದೇಶದ ವೀರ ನಾರಿಯರ, ಮಹಿಳಾ ಸಾಧಕರ ಇತಿಹಾಸವನ್ನರಿಯಬೇಕು. ಅಂತರಿಕ್ಷಕ್ಕೆ ಅಡಿಯಿಟ್ಟ ಸ್ತ್ರೀ ಸಂಕುಲವನ್ನು ಸೌಂದರ್ಯ ಮೇಳಕ್ಕೆ ಸೀಮಿತಗೊಳಿಸುವ ಸಂಕುಚಿತ ಬುದ್ಧಿ ಅವರ ಸಂಸ್ಕಾರವನ್ನು ಹೇಳುತ್ತದೆ’ ಅಂತಾ ಟೀಕಿಸಿದೆ.
ಇದನ್ನೂ ಓದಿ: Shocking news: ಶ್ರದ್ಧಾ ಹತ್ಯೆ ಮಾದರಿಯಲ್ಲೇ ಅಪ್ಪನ ಹತ್ಯೆಗೈದು 30 ಪೀಸ್ ಮಾಡಿದ ಮಗ!
‘ಒಂದು ಕಡೆ ಕಾಂಗ್ರೆಸ್ ಪಕ್ಷ ‘ಮೈ ಲಡ್ಕಿ ಹೂಂ ಮೈ ಲಡ್ ಸಕ್ತಿ ಹೂಂ’ ಎಂದು ಸುಳ್ಳು ಪ್ರಚಾರ ಮಾಡುತ್ತಾರೆ, ಮತ್ತೊಂದೆಡೆ ಚುನಾವಣೆಯೆಂದರೆ ಸೌಂದರ್ಯ ಸ್ಪರ್ಧೆಯಲ್ಲ ಎನ್ನುತ್ತಾ ಮಹಿಳೆಯರು ಸಿಎಂ ಹುದ್ದೆಗೆ ಅನರ್ಹರು ಎಂದು ಮಹಿಳಾ ವಿರೋಧಿ ನೀತಿಯನ್ನು ಪ್ರದರ್ಶಿಸುತ್ತಾರೆ. ಇದೇನಾ ನಿಮ್ಮ ಮಹಿಳಾ ಸಬಲೀಕರಣ?’ ಎಂದು ಬಿಜೆಪಿ ಪ್ರಶ್ನಿಸಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಇನ್ನೂ ಮಹಿಳೆಯರಿಗೆ ಚುನಾವಣೆಗೆ ಸ್ಪರ್ಧಿಸುವ ಸ್ವಾತಂತ್ರ್ಯವನ್ನು ರಚನಾತ್ಮಕವಾಗಿ ಹತ್ತಿಕ್ಕುತ್ತಾ ಬಂದಿದ್ದು ಇದೇ @INCIndia. ಇದಕ್ಕೆ ತಾಜಾ ಉದಾಹರಣೆ @Jairam_Ramesh ನುಡಿಮುತ್ತುಗಳು.
ಇವರೆಲ್ಲ ಸೋನಿಯಾ ಗಾಂಧಿಯವರನ್ನು ಹೇಗೆ ಸಹಿಸಿಕೊಂಡರು ಎಂಬುದೇ ಯಕ್ಷಪ್ರಶ್ನೆಯಾಗಿದೆ.
— BJP Karnataka (@BJP4Karnataka) December 13, 2022
‘ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದರೂ ಇನ್ನೂ ಮಹಿಳೆಯರಿಗೆ ಚುನಾವಣೆಗೆ ಸ್ಪರ್ಧಿಸುವ ಸ್ವಾತಂತ್ರ್ಯವನ್ನು ರಚನಾತ್ಮಕವಾಗಿ ಹತ್ತಿಕ್ಕುತ್ತಾ ಬಂದಿದ್ದು ಇದೇ ಕಾಂಗ್ರೆಸ್. ಇದಕ್ಕೆ ತಾಜಾ ಉದಾಹರಣೆ ಜೈರಾಮ್ ರಮೇಶ್ ಅವರ ನುಡಿಮುತ್ತುಗಳು. ಇವರೆಲ್ಲ ಸೋನಿಯಾ ಗಾಂಧಿಯವರನ್ನು ಹೇಗೆ ಸಹಿಸಿಕೊಂಡರು ಎಂಬುದೇ ಯಕ್ಷಪ್ರಶ್ನೆಯಾಗಿದೆ’ ಅಂತಾ ಬಿಜೆಪಿ ಕುಟುಕಿದೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಸಾವಿರ ಕೆ.ಜಿ.ತೂಕದ ಬೃಹದಾಕಾರದ ಕರದಂಟು ಪ್ರದರ್ಶನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.