IMD : ಮುಂದಿನ 48 ಗಂಟೆಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾಧಾರಣ ಮಳೆ ಮತ್ತು ಗುಡುಗುಸಹಿತಬಿರುಗಾಳಿಗಳು, ಕೆಲವು ಪ್ರದೇಶಗಳಲ್ಲಿ ಸಾಂದರ್ಭಿಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ° C ಮತ್ತು 22 ° C ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.
Tamil Nadu Sri Lankan Navy fishermen release: ಕೊಲಂಬೊದಿಂದ ವಿಮಾನದ ಮೂಲಕ ಇಲ್ಲಿಗೆ ಆಗಮಿಸಿದ ಅವರನ್ನು ತಮಿಳುನಾಡು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಬಿಜೆಪಿಯ ಕೆಲವು ಕಾರ್ಯಕರ್ತರು ಬರಮಾಡಿಕೊಂಡಿದ್ದಾರೆ.
ಸಿಲಿಕಾನ್ ಸಿಟಿಯ ಕೆರೆಗಳು ಕಲುಷಿತಗೋಳ್ಳುತ್ತಿವೆ. ಹೀಗಾಗಿ, ಒಂದೆಡೆ ನೀರನ್ನು ಮುಟ್ಟುವುದಕ್ಕೆ ಸಹ ಜನರು ಹಿಂದೇಟು ಹಾಕುತ್ತಾರೆ. ಆದರೆ ನಗರದಲ್ಲಿ ಇರುವ 196 ಕೆರೆಗಳಲ್ಲಿ ಒಂದು ವರ್ಷದಲ್ಲಿ ಒಟ್ಟು 9126 ಟನ್ ಮೀನು ಉತ್ಪಾದನೆ ಮಾಡಲಾಗಿದೆ.
ಯಾದಗಿರಿ ನಗರಕ್ಕೆ ಹೊಂದಿಕೊಂಡ ಭೀಮಾನದಿ ಮೈದುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಆದ್ರೆ ಇಂಥಾ ಸ್ಥಿತಿಯಲ್ಲೂ ಮೀನುಗಾರರು ದುಸ್ಸಾಹಸ ಮಾಡ್ತಿದ್ದಾರೆ. ಮೈತುಂಬಿ ಹರಿಯುತ್ತಿರುವ ಭೀಮಾನದಿಯಲ್ಲಿ ಮೀನುಗಾರಿಕೆ ಮಾಡ್ತಿದ್ದಾರೆ. ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ರೂ ಡೋಂಟ್ಕೇರ್ ಎಂದಿದ್ದಾರೆ..
ಅರೇಬಿಯನ್ ಸಮುದ್ರದಲ್ಲಿ 'ಕ್ಯಾರ್ ಚಂಡಮಾರುತ' ರಚನೆಯಿಂದ ಉಂಟಾದ ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ರಾಜ್ಯದಲ್ಲಿ ವಿವಿಧ ಪ್ರದೇಶಗಳಲ್ಲಿ ನೀರು ನುಗ್ಗಿದೆ. ಹಲವೆಡೆ ಮರಗಳು ಧರೆಗೆ ಉರುಳಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.