ಗುರುವಾರ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲು ಈ ನಿರ್ಧಾರ ಮಾಡಿದೆ. ಸಭೆಯ ಬಳಿಕ ವಿಪಕ್ಷ ನಾಯಕ ಗುಲಾಬ್ ಚಂದ್ ಕಟಾರಿಯಾ ನಿರ್ಧಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಧ್ಯಪ್ರದೇಶ ವಿಶ್ವಾಸಮತ ಪರೀಕ್ಷೆಯಲ್ಲಿ ಹಸ್ತಕ್ಷೇಪ ವಹಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.ವಿಶ್ವಾಸಮತ ಯೋಚನೆ ಕೋರಿ ಬಿಜೆಪಿ ಅರ್ಜಿ ಸಲ್ಲಿಸಿದ್ದರೆ ಕಾಂಗ್ರೆಸ್ ಅದನ್ನು ವಿರೋಧಿಸಿ ಅರ್ಜಿ ಸಲ್ಲಿಸಿದೆ.
ಉದ್ಧವ್ ಸರ್ಕಾರದ ಬಹುಮತ ಸಾಬೀತು, ಹೊಸ ಸ್ಪೀಕರ್ ಆಯ್ಕೆ, ವಿರೋಧ ಪಕ್ಷದ ಮುಖಂಡರ ಘೋಷಣೆ ಮತ್ತು ರಾಜ್ಯಪಾಲರ ಭಾಷಣಕ್ಕಾಗಿ ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ.
ಶನಿವಾರ ಮಧ್ಯಾಹ್ನ 2 ಗಂಟೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ತನ್ನ ಬಹುಮತವನ್ನು ಸಾಬೀತುಪಡಿಸುತ್ತದೆ. ಹೊಸ ಸ್ಪೀಕರ್ ಆಯ್ಕೆ, ವಿರೋಧ ಪಕ್ಷದ ಮುಖಂಡರ ಘೋಷಣೆ ಮತ್ತು ರಾಜ್ಯಪಾಲರ ಭಾಷಣಕ್ಕಾಗಿ ಮಹಾರಾಷ್ಟ್ರ ವಿಧಾನಸಭೆಯ ಎರಡು ದಿನಗಳ ವಿಶೇಷ ಸಭೆ ಕರೆಯಲಾಗಿದೆ.
ಸಮ್ಮಿಶ್ರ ಸರ್ಕಾರ ಕಳೆದ 14 ತಿಂಗಳುಗಳಿಂದ ಅಚ್ಚುಕಟ್ಟಾಗಿ ಕೆಲಸಗಳನ್ನು ನಿರ್ವಹಿಸಿದೆ. ಆದಾಗ್ಯೂ ವಿರೋಧ ಪಕ್ಷದವರು ಐಎಂಎ ಹಗರಣ, ಜಿಂದಾಲ್ ಪ್ರಕರಣಗಳ ಬಗ್ಗೆ ಶಾಸಕರು ರಾಜೀನಾಮೆ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ. ವಿಪಕ್ಷದವರು 'ಅಯೋಗ್ಯ ಸರ್ಕಾರ' ಎಂದಿದ್ದಾರೆ. ಇಲ್ಲಿ ಯಾರಿಗೆ ಮಾನ ಮರ್ಯಾದೆ ಇದೆಯೋ ತಿಳಿದಿಲ್ಲ. ನಮಗಂತೂ ಇದೆ. ಇವೆಲ್ಲದಕ್ಕೂ ನಾವು ಸ್ಪಷ್ಟನೆ ನೀಡಬೇಕಿದೆ. ಹಾಗಾಗಿ ಮೊದಲು ಚರ್ಚೆ ನಡೆಸಿ ಬಳಿಕ ವಿಶ್ವಾಸಮತಯಾಚನೆಗೆ ಹೋಗುವುದು ಸೂಕ್ತ ಎಂದು ಸಿಎಂ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.