ಬಾಯಾರಿಕೆಯ ಭಾವನೆ ಪ್ರತಿಯೊಬ್ಬರ ಜೀವನದಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿದೆ. ಬಾಯಾರಿಕೆ ನೀಗಿಸಿಕೊಳ್ಳಲು ನೀರು ಕುಡಿಯುತ್ತೇವೆ. ಆದರೆ, ಸಾಕಷ್ಟು ಬಾರಿ ನೀರು ಕುಡಿದರೂ ಬಾಯಾರಿಕೆ ನೀಗುವುದಿಲ್ಲ. ನಾವು ಅದನ್ನು ಸಾಮಾನ್ಯವೆಂದು ಪರಿಗಣಿಸುತ್ತೇವೆ ಮತ್ತು ನಿರ್ಲಕ್ಷಿಸುತ್ತೇವೆ. ಆರೋಗ್ಯ ತಜ್ಞರ ಪ್ರಕಾರ ಪ್ರತಿದಿನ 3-4 ಲೀಟರ್ ನೀರು ಕುಡಿಯಬೇಕು. ಆದರೆ ನೀರು ಕುಡಿದರೂ ಮತ್ತೆ ಮತ್ತೆ ಬಾಯಾರಿಕೆಯಾಗುತ್ತಿದೆ ಎಂದಾದಲ್ಲಿ ಎಚ್ಚರಿಕೆ ವಹಿಸಬೇಕು, ಅದು ದೊಡ್ಡ ಕಾಯಿಲೆಯ ಲಕ್ಷಣವಾಗಿರಬಹುದು. ಈ ಚಿಹ್ನೆಗಳು ಮಧುಮೇಹ ಮತ್ತು ರಕ್ತಹೀನತೆಯಂತಹ ರೋಗಗಳನ್ನು ಸೂಚಿಸಬಹುದು.
Reasons For Excessive Thirst: ನಿಮಗೆ ಮತ್ತೆ ಮತ್ತೆ ಬಾಯಾರಿಕೆಯಾಗುತ್ತಿದ್ದರೆ ಮತ್ತು ನೀರು ಕುಡಿದರೂ ಬಾಯಾರಿಕೆ ತಣಿಸುತ್ತಿಲ್ಲ ಎಂದಾದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಇದು ಈ ಮಾರಕ ಕಾಯಿಲೆಯ ಲಕ್ಷಣ ಕೂಡ ಆಗಿರಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.