ತೀವ್ರ ವಾಯುಮಾಲಿನ್ಯದಿಂದಾಗಿ ರಾಷ್ಟ್ರ ರಾಜಧಾನಿ ಉಸಿರುಗಟ್ಟಿಸುವುದನ್ನು ತಡೆಯಲು ದೆಹಲಿ ಸರ್ಕಾರ ನಿನ್ನೆ ಬೆಳಗ್ಗೆ ತನ್ನ ಶೇ. 50 ರಷ್ಟು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಿದೆ. ಪರಿಸರ ಸಚಿವ ಗೋಪಾಲ್ ರೈ ಅವರು ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, "ಮಾಲಿನ್ಯವನ್ನು ಕಡಿಮೆ ಮಾಡಲು, ದೆಹಲಿ ಸರ್ಕಾರವು ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡುಲ ನಿರ್ಧರ ತೆಗೆದುಕೊಂಡಿದೆ. ಶೇ 50 ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಾರೆ. ಅದರ ಅನುಷ್ಠಾನಕ್ಕಾಗಿ ಅಧಿಕಾರಿಗಳು ಇಂದು ಸಚಿವಾಲಯದಲ್ಲಿ ಸಭೆ ನಡೆಸಿದರು ಎಂದು ತಿಳಿಸಿದ್ದಾರೆ. ಮನೆಯಿಂದ ಕೆಲಸ ಮತ್ತು ಸಮ-ಬೆಸ ನಿಯಮವನ್ನು ಸರ್ಕಾರ ಶೀಘ್ರದಲ್ಲೇ ನಿರ್ಧರಿಸುತ್ತದೆ ಎಂದು ಗೋಪಾಲ್ ರೈ ಹೇಳಿದ ಒಂದು ದಿನದ ನಂತರ ಈ ಘೋಷಣೆ ಹೊರಬಿದ್ದಿದೆ.
Ration Card Correction: ಪಡಿತರ ಚೀಟಿಯಲ್ಲಿ ಹೆಸರು, ವಿಳಾಸ ಮತ್ತು ಜನ್ಮದಿನಾಂಕದಲ್ಲಿ ಯಾವುದೇ ತಪ್ಪುಗಳಿದ್ದರೆ, ಈಗ ನೀವು ಅದನ್ನು ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಸರಿಪಡಿಸಬಹುದು. ಇದಕ್ಕಾಗಿ ನೀವು ಯಾವುದೇ ಸರ್ಕಾರಿ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ.
ಕಚೇರಿಯ ಕಬೋರ್ಡಿನಲ್ಲಿದ್ದ ಕೆಲ ಪ್ರಮುಖ ದಾಖಲೆಗಳು ಹಾಗೂ 3 ಕಂಪ್ಯೂಟರ್ಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಸದ್ಯ ಈ ಬಗ್ಗೆ ಎಂಜಿನಿಯರ್ ಅನಂತ್ ಎಂಬುವವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
VPN, Google Drive Banned: ಕೇಂದ್ರ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (Cert-In) ಸರ್ಕಾರಿ ನೌಕರರಿಂದ ಥರ್ಡ್ ಪಾರ್ಟಿ ವಿಪಿಎನ್ಗಳ ಬಳಕೆಯ ಮೇಲೆ ನಿಷೇಧ ವಿಧಿಸಿದೆ ಮತ್ತು ಯಾವುದೇ ರೀತಿಯ ಆಂತರಿಕ ಮತ್ತು ಕಾನ್ಫಿಡೆನ್ಸಿಯಲ್ ಸರ್ಕಾರಿ ಫೈಲ್ಗಳನ್ನು ಗೂಗಲ್ ಡ್ರೈವ್, ಡ್ರಾಪ್ಬಾಕ್ಸ್ನಂತಹ ಸರ್ಕಾರೇತರ ಕ್ಲೌಡ್ ಸೇವೆಗಳಿಗೆ ಅಪ್ಲೋಡ್ ಮಾಡದಂತೆ ಸೂಚಿಸಿದೆ.
ಅಲ್-ಖೈದಾ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ನನ್ನು ವಿಶ್ವದ ಅತ್ಯುತ್ತಮ ಜೂನಿಯರ್ ಇಂಜಿನಿಯರ್ ಎಂದು ಬಣ್ಣಿಸುವ ಚಿತ್ರವನ್ನು ತನ್ನ ಕಚೇರಿಯಲ್ಲಿ ಹಾಕಿದ್ದಕ್ಕಾಗಿ ಸರ್ಕಾರಿ ವಿದ್ಯುತ್ ವಿತರಣಾ ಕಂಪನಿಯ ಅಧಿಕಾರಿಯನ್ನು ಬುಧವಾರ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.