ಟರ್ಕಿ ಮತ್ತು ಸಿರಿಯಾದಲ್ಲಿ ಭೀಕರ ಭೂಕಂಪ ಸಂಭವಿಸಿ ಜಗತ್ತಿಗೆ ಭೀತಿಯನ್ನುಂಟು ಮಾಡಿತ್ತು. ಭಾರತದಲ್ಲೂ ಸರಣಿ ಭೂಕಂಪನದ ನಡುವೆಯೇ ಇದೀಗ ಭಾನುವಾರ ಗುಜರಾತ್ನಲ್ಲಿ ಭೂಮಿ ನಡುಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3ರಷ್ಟಿತ್ತು. ಭೂಕಂಪದ ಕೇಂದ್ರಬಿಂದು ರಾಜ್ಕೋಟ್ನ 270 ಕಿಮೀ ವಾಯುವ್ಯ (NNW) ದೂರದಲ್ಲಿದೆ. ಭಾನುವಾರ ಮಧ್ಯಾಹ್ನ 3.21ಕ್ಕೆ ಭೂಕಂಪ ಸಂಭವಿಸಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪನವು ಗುಜರಾತ್ನ ವಾಯುವ್ಯ ಎಫ್ ರಾಜ್ಕೋಟ್ನಲ್ಲಿ ಭಾನುವಾರ ರಾತ್ರಿ 8: 13 ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಬುಧವಾರ ರಾತ್ರಿ ಗುಜರಾತಿನ ಹಲವು ಭಾಗಗಳಲ್ಲಿ ಭೂಕಂಪದ ಅನುಭವವಾಗಿದ್ದು, ರಿಕ್ಟರ್ ಮಾಪನದಲ್ಲಿ 4.0 ತೀವ್ರತೆ ದಾಖಲಾಗಿದೆ. ಅಹಮದಾಬಾದ್, ಸಬರ್ಕಾಂತ, ಬನಸ್ಕಾಂತ, ಅರಾವಳಿ ಮತ್ತು ಅಂಬಾಜಿಗಳಲ್ಲಿ ಭೂಕಂಪದ ಅನುಭವವಾಗಿರುವ ಬಗ್ಗೆ ವರದಿಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.