Gujarat Earthquake : ಟರ್ಕಿ ಸಿರಿಯಾ ನಂತರ ʼಗುಜರಾತ್‌ನಲ್ಲಿ ಭೂಕಂಪʼ.. 4.3 ತೀವ್ರತೆ ದಾಖಲು..!

ಟರ್ಕಿ ಮತ್ತು ಸಿರಿಯಾದಲ್ಲಿ ಭೀಕರ ಭೂಕಂಪ ಸಂಭವಿಸಿ ಜಗತ್ತಿಗೆ ಭೀತಿಯನ್ನುಂಟು ಮಾಡಿತ್ತು. ಭಾರತದಲ್ಲೂ ಸರಣಿ ಭೂಕಂಪನದ ನಡುವೆಯೇ ಇದೀಗ ಭಾನುವಾರ ಗುಜರಾತ್‌ನಲ್ಲಿ ಭೂಮಿ ನಡುಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3ರಷ್ಟಿತ್ತು. ಭೂಕಂಪದ ಕೇಂದ್ರಬಿಂದು ರಾಜ್‌ಕೋಟ್‌ನ 270 ಕಿಮೀ ವಾಯುವ್ಯ (NNW) ದೂರದಲ್ಲಿದೆ. ಭಾನುವಾರ ಮಧ್ಯಾಹ್ನ 3.21ಕ್ಕೆ ಭೂಕಂಪ ಸಂಭವಿಸಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Written by - Krishna N K | Last Updated : Feb 26, 2023, 07:40 PM IST
  • ಟರ್ಕಿ ಮತ್ತು ಸಿರಿಯಾದಲ್ಲಿ ಭೀಕರ ಭೂಕಂಪ ಸಂಭವಿಸಿ ಜಗತ್ತಿಗೆ ಭೀತಿಯನ್ನುಂಟು ಮಾಡಿತ್ತು.
  • ಈ ನಡುವೆಯೇ ಇದೀಗ ಭಾನುವಾರ ಗುಜರಾತ್‌ನಲ್ಲಿ ಭೂಮಿ ನಡುಗಿದೆ.
  • ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3ರಷ್ಟಿತ್ತು.
Gujarat Earthquake : ಟರ್ಕಿ ಸಿರಿಯಾ ನಂತರ ʼಗುಜರಾತ್‌ನಲ್ಲಿ ಭೂಕಂಪʼ.. 4.3 ತೀವ್ರತೆ ದಾಖಲು..! title=

Gujarat Earthquake : ಟರ್ಕಿ ಮತ್ತು ಸಿರಿಯಾದಲ್ಲಿ ಭೀಕರ ಭೂಕಂಪ ಸಂಭವಿಸಿ ಜಗತ್ತಿಗೆ ಭೀತಿಯನ್ನುಂಟು ಮಾಡಿತ್ತು. ಭಾರತದಲ್ಲೂ ಸರಣಿ ಭೂಕಂಪನದ ನಡುವೆಯೇ ಇದೀಗ ಭಾನುವಾರ ಗುಜರಾತ್‌ನಲ್ಲಿ ಭೂಮಿ ನಡುಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3ರಷ್ಟಿತ್ತು. ಭೂಕಂಪದ ಕೇಂದ್ರಬಿಂದು ರಾಜ್‌ಕೋಟ್‌ನ 270 ಕಿಮೀ ವಾಯುವ್ಯ (NNW) ದೂರದಲ್ಲಿದೆ. ಭಾನುವಾರ ಮಧ್ಯಾಹ್ನ 3.21ಕ್ಕೆ ಭೂಕಂಪ ಸಂಭವಿಸಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕಳೆದ ಬುಧವಾರ ದೆಹಲಿಯಿಂದ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ನೇಪಾಳದಲ್ಲಿ ಮತ್ತೊಮ್ಮೆ ಕಂಪನ ಕಾಣಿಸಿಕೊಂಡಿತ್ತು. ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.8ರಷ್ಟಿತ್ತು. ಆದರೆ ದೆಹಲಿ ಎನ್‌ಸಿಆರ್‌ನಲ್ಲಿ ಕಂಪನಗಳು ತುಂಬಾ ಸೌಮ್ಯವಾಗಿದ್ದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಎಲ್ಲಿಯೂ ಪ್ರಾಣ ಹಾನಿ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರು...! 

ಮತ್ತೊಂದೆಡೆ, ಈ ತಿಂಗಳ 22 ರಂದು ಉತ್ತರಾಖಂಡದ ಪಿಥೋರ್‌ಗಢದಲ್ಲಿ ಮಧ್ಯಾಹ್ನ 1.30 ಕ್ಕೆ ಭೂಕಂಪ ಸಂಭವಿಸಿದೆ. ಇಲ್ಲಿ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.4 ರಷ್ಟಿತ್ತು. ಭೂಕಂಪದ ಕೇಂದ್ರಬಿಂದು ನೇಪಾಳದ ಜುಮ್ಲಾದಲ್ಲಿ ಪಿಥೋರಗಢದಿಂದ 143 ಕಿ.ಮೀ ದೂರದಲ್ಲಿದೆ. ಭೂಗತ 10 ಕಿ.ಮೀ. ಇದಕ್ಕೂ ಮುನ್ನ ಜನವರಿ 24 ರಂದು ನೇಪಾಳದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇತ್ತೀಚಿನ ದಿನಗಳಲ್ಲಿ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಭೂಕಂಪನಗಳು ನಿರಂತರವಾಗಿ ಸಂಭವಿಸುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಮೊನ್ನೆ ಫೆಬ್ರವರಿಯ ಆರಂಭದಲ್ಲಿಯೂ ಭೂಕಂಪನದಿಂದಾಗಿ ಪಶ್ಚಿಮ ಉತ್ತರ ಪ್ರದೇಶ ಮತ್ತು ಹರಿಯಾಣ ಪ್ರದೇಶಗಳು ಮತ್ತೊಮ್ಮೆ ನಡುಗಿದವು. ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.2 ರಷ್ಟಿತ್ತು. ಇದಕ್ಕೂ ಮುನ್ನ ಜನವರಿ 5 ರಂದು ದೆಹಲಿ-ಎನ್‌ಸಿಆರ್ ಪ್ರಬಲ ಕಂಪನದೊಂದಿಗೆ ಭೂಕಂಪನಕ್ಕೆ ಒಳಗಾಗಿತ್ತು. ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಭೂಕಂಪನವನ್ನು ಮರೆಯುವ ಮುನ್ನವೇ ಭಾರತ, ಚೀನಾ, ನೇಪಾಳದಂತಹ ದೇಶಗಳಲ್ಲಿ ಸರಣಿ ಭೂಕಂಪಗಳು ತಲ್ಲಣ ಮೂಡಿಸುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News