ಗುಜರಾತಿನ ರಾಜ್ ಕೋಟ ನಲ್ಲಿ 5.8 ತೀವ್ರತೆಯ ಭೂಕಂಪ

ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪನವು ಗುಜರಾತ್‌ನ ವಾಯುವ್ಯ ಎಫ್ ರಾಜ್‌ಕೋಟ್‌ನಲ್ಲಿ ಭಾನುವಾರ ರಾತ್ರಿ 8: 13 ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

Last Updated : Jun 14, 2020, 09:47 PM IST
ಗುಜರಾತಿನ ರಾಜ್ ಕೋಟ ನಲ್ಲಿ 5.8 ತೀವ್ರತೆಯ ಭೂಕಂಪ

ನವದೆಹಲಿ: ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆಯ ಭೂಕಂಪನವು ಗುಜರಾತ್‌ನ ವಾಯುವ್ಯ ಎಫ್ ರಾಜ್‌ಕೋಟ್‌ನಲ್ಲಿ ಭಾನುವಾರ ರಾತ್ರಿ 8: 13 ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಗುಜರಾತ್ ಈ ಹಿಂದೆ ಮೂರು ದೊಡ್ಡ ಭೂಕಂಪಗಳಿಗೆ ಸಾಕ್ಷಿಯಾಗಿದೆ, 2001 ರಲ್ಲಿ ಅತ್ಯಂತ ಭೀಕರ, 1956 ರಲ್ಲಿ ಅಂಜಾರ್‌ನಲ್ಲಿ ಮತ್ತೊಂದು ಮತ್ತು 1918 ರಲ್ಲಿ ಮೂರನೆಯದು ರನ್ ಆಫ್ ಕಚ್‌ನಲ್ಲಿ ಸಂಭವಿಸಿತ್ತು.

ವರದಿಗಳ ಪ್ರಕಾರ, ಜನವರಿ 26, 2001 ರಂದು ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪವು ರಿಕ್ಟರ್ ಪ್ರಮಾಣದಲ್ಲಿ 6.9 ರಷ್ಟಿತ್ತು ಮತ್ತು 100 ಸೆಕೆಂಡುಗಳಿಗಿಂತ ಹೆಚ್ಚು ಅವಧಿಯವರೆಗೆ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: BREAKING NEWS: ದೆಹಲಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಭೂಕಂಪ...!

ಕಳೆದ ಎರಡು ತಿಂಗಳುಗಳಲ್ಲಿ, ಒಂದು ಡಜನ್‌ಗೂ ಹೆಚ್ಚು ಭೂಕಂಪ ದೆಹಲಿಯಲ್ಲಿ ಸಂಭವಿಸಿವೆ.ದೇಶದ ಕೆಲವು ಉನ್ನತ ಭೂ ವಿಜ್ಞಾನಿಗಳ ಪ್ರಕಾರ, ಈ ರೀತಿಯ ಭೂಕಂಪಗಳು ಮುಂದೆ ಭೀಕರ ಭೂಕಂಪಗಳಿಗೆ ಸಾಕ್ಷಿಯಾಗಬಹುದು ಎಂದು ಅಂದಾಜಿಸಿದ್ದಾರೆ.

ದೆಹಲಿ ಹೆಚ್ಚಿನ ಅಪಾಯದ ಭೂಕಂಪನ ವಲಯ -4 ರ ಅಡಿಯಲ್ಲಿ ಬರುತ್ತದೆ.ಇಲ್ಲಿನ ಬಹುತೇಕ ಕಟ್ಟಡಗಳು ಭೂಕಂಪ ನಿರೋಧಕವಾಗಿಲ್ಲ ಎನ್ನಲಾಗಿದೆ.ಅಷ್ಟೇ ಅಲ್ಲದೆ ಕಟ್ಟಡ ನಿರ್ಮಾಣಕ್ಕಾಗಿ ನಿಗದಿಪಡಿಸಿದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನ ಕಡ್ಡಾಯ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎನ್ನಲಾಗಿದೆ.

More Stories

Trending News