ಹುಬ್ಬಳ್ಳಿಯಲ್ಲಿ ಬಿಜೆಪಿಯ ಮತ್ತೊಂದು ವಿಕೆಟ್ ಪತನ ಆಗ್ತಿದೆ. ಇಂದು ಹುಬ್ಬಳ್ಳಿ - ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಧ್ಯಕ್ಷ ಮಾಜಿ ಅಧ್ಯಕ್ಷ ನಾಗೇಶ್ ಕಲಬುರಗಿ ರಾಜೀನಾಮೆ ನೀಡಲಿದ್ದಾರೆ.. ಮತ್ತಷ್ಟು ಶೆಟ್ಟರ್ ಬೆಂಬಲಿಗರು ರಾಜೀನಾಮೆ ನೀಡೋ ಸಾಧ್ಯತೆ ಇದೆ..
7ನೇ ವೇತನ ಆಯೋಗ ಹಾಗೂ ಓಪಿಎಸ್ ಜಾರಿಗೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಸರ್ಕಾರಿ ನೌಕರರು ಮುಷ್ಕರದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಕೂಡ ಸಾಥ್ ನೀಡಿದ್ದಾರೆ. ಇದರಿಂದಾಗಿ ರೋಗಿಗಳು ಪರದಾಡುವಂತಾಗಿದೆ.
ಸಮಯಕ್ಕೆ ಸರಿಯಾಗಿ ಬಸ್ ಸಂಚಾರಕ್ಕೆ ಆಗ್ರಹಿಸಿ ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.. ಬಸ್ ಬರದ ಕಾರಣ ತರಗತಿಯಿಂದ ದೂರ ಉಳಿಯುತ್ತಿದ್ದೇವೆ. ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ..
ಈಗ ಗಾಯಗೊಂಡಿರುವ ಬಾಲಕ ಅಮೀನುದ್ಧೀನ್ ,ಮುಲ್ಲಾ ಎನ್ನಲಾಗಿದೆ.ಜೊತೆಗೆ ಇನ್ನೋರ್ವ ಬಾಲಕನ ಮೇಲೆಯೂ ದಾಳಿ ಮಾಡಿವೆ ಎನ್ನಲಾಗಿದೆ.ಸಂತಾನಹರಣ ಕಾರ್ಯಾಚರಣೆ ಮಾಡುವ ಪಾಲಿಕೆ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಕಾರ್ಯಾಚರಣೆ ನಡೆಸುತ್ತಿರುವುದ ಬೀದಿ ನಾಯಿಗಳ ಉಪಟಳ ಹೆಚ್ಚಳ ಎನ್ನಲಾಗಿದೆ.
ವಿದ್ಯುತ್ ಕಂಬದಿಂದ ನೇರವಾಗಿ ಮನೆಗೆ ಸಂಪರ್ಕ ಪಡೆದಿರುವುದು, ಬೈಪಾಸ್ ಸಂಪರ್ಕ ಮಾಡಿಕೊಂಡಿರುವುದು, ಮಿಟರ್ ಟ್ಯಾಂಪರಿಂಗ್ ಮಾಡಿಕೊಂಡಿರುವದು, ವಿದ್ಯುತ್ ಶುಲ್ಕ ಪಾವತಿಸದೆ ಸಂಪರ್ಕ ಕಡಿತವಾಗಿದ್ದರೂ ಸಹ ಅಕ್ರಮವಾಗಿ ಸಂಪರ್ಕ ಪಡೆದಿರುವುದು ಹೀಗೆ ಹಲವಾರು ರೀತಿಯಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಸರ್ಕಾರಕ್ಕೆ ವಂಚಿಸುತ್ತಿರುವ ಪ್ರಕರಣಗಳು ಪತ್ತೆಯಾಗಿವೆ.
ಹುಬ್ಬಳ್ಳಿಗೆ ಬಂದಿಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ. ತಡರಾತ್ರಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಶಾ ಆಗಮನ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಶಾ ಆಗಮನ. ಅಮಿತ್ ಶಾಗೆ ಸ್ವಾಗತ ಕೋರಿದ ರಾಜ್ಯ ನಾಯಕರು.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಾಡಿನ ಜನತೆಗೆ ಮಕರ ಸಂಕ್ರಾಂತಿ ಶುಭಾಶಯಗಳು.ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹುಬ್ಬಳ್ಳಿಗೆ ಬಂದಾಗ ಪ್ರಧಾನಮಂತ್ರಿಯವರ ಯುವಜನೋತ್ಸವದ ಕಾರ್ಯಕ್ರಮದಲ್ಲಿ ನಿಮ್ಮೆಲ್ಲರ ಸಹಕಾರ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಇಂದು ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಮೇನಿಯಾ..! ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ʻಕೇಸರಿ ಕಲರವʼ..! ರಾಷ್ಟ್ರೀಯ ಯುವಜನೋತ್ಸವ ಮೂಲಕ ಮೋದಿ ಮೋಡಿ. ರಾಷ್ಟ್ರೀಯ ಯುವಜನೋತ್ಸಕ್ಕೆ ಚಾಲನೆ ನೀಡಲಿರುವ ಮೋದಿ.
ನಗರದ ಹೊಸೂರು ಸರ್ಕಲ್ ಬಳಿಯಲ್ಲಿ ನಡೆಯುತ್ತಿರುವ ಪ್ಲೈ ಓವರ್ ಕಾಮಗಾರಿಯ ವೇಳೆಯಲ್ಲಿ ಪ್ಲೈಓವರ್ ಮೇಲಿಂದ ಕಬ್ಬಿಣದ ರಾಡ್ ಯುವಕನ ಬಲಗಡೆಯ ಎದೆ ಭಾಗಕ್ಕೆ ಸಿಲುಕಿಕೊಂಡಿದೆ. ಗಾಯಾಳುವನ್ನು ಕೊಲ್ಕತ್ತಾ ಮೂಲದ ಅಬ್ದುಲ್ ಗಫರ್ ಎಂದು ಗುರುತಿಸಲಾಗಿದ್ದು, ಯುವಕ ಗಂಭೀರವಾದ ಗಾಯವಾಗಿದೆ.
ನಾನು ದರ್ಗಾ ವೀಕ್ಷಿಣೆ ಮಾಡಲು ಬಂದಿದ್ದೇನೆ..ದರ್ಗಾ ಶಿಪ್ಟ್ ಮಾಡೋ ಕಾರ್ಯಚಾರಣೆ ವೀಕ್ಷಿಸಲು ಬಂದಿದ್ದೇ. ದರ್ಗಾದ ಮುಖ್ಯಸ್ಥರು ದರ್ಗಾ ಶಿಫ್ಟ್ ಮಾಡೋದಕ್ಕೆ ಸಹಕಾರಿಸಿದ್ದಾರೆ. ನಾನು ಅವರಿಗೆ ಧನ್ಯವಾದ ಹೇಳ್ತೀನಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಗುಂತಕಲ್ಲ-ಹುಬ್ಬಳ್ಳಿ ರೈಲಿನಲ್ಲಿ ವ್ಯಕ್ತಿಯ ಕೊಲೆ ಹಂತಕರ ಸುಳಿವು 13 ದಿನಗಳಾದರೂ ಸಿಕ್ಕಿಲ್ಲ. ಚಾಕುವಿನಿಂದ ಇರಿದು ಆಂಧ್ರಪ್ರದೇಶದ ಆಂಜನೇಯ ಲಕ್ಷ್ಮಣ ಸಾಂದೋಪಯನ್ನು ಕೊಲೆ ಮಾಡಲಾಗಿತ್ತು. ತನಿಖೆಗೆ ಪ್ರತ್ಯೇಕ ಎರಡು ವಿಶೇಷ ರೈಲ್ವೆ ಪೊಲೀಸ್ ತಂಡ ರಚಿಸಲಾಗಿದ್ದು, ಹಂತಕರ ಪತ್ತೆಗೆ ಬಲೆ ಬೀಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.