ಹುಬ್ಬಳ್ಳಿ : ಹೆಸ್ಕಾಂ ಜಾಗೃತ ದಳದ ಪೋಲಿಸ್ ಅಧಿಕ್ಷಕರಾದ ಶ್ರೀ ಚನ್ನಬಸವಣ್ಣ ಎಸ್.ಎಲ್. ಎಪಿಎ ಅವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ, ಬೆಳಗಾವಿ, ಚಿಕ್ಕೋಡಿ, ಗದಗ, ಹಾವೇರಿ, ಕಾರವಾರ, ಬಾಗಲಕೋಟ, ವಿಜಯಪೂರ, ಜಾಗೃತ ದಳದ ಪೋಲಿಸ್ ಠಾಣೆಗಳ ಪಿಐ, ಎಇಇ, ಎಇ, ಪಿಎಸ್‍ಐ, ಮತ್ತು ಸಿಬ್ಬಂದಿಗಳು 2021-22 ನೇ ವರ್ಷದಲ್ಲಿ ಅಕ್ರಮ ವಿದ್ಯುತ್ ಸಂಪರ್ಕ ಪಡೆದ, ಬೈಪಾಸ್ ಮಾಡಿಕೊಂಡ ಮತ್ತು ಮೀಟರ್ ಟ್ಯಾಂಪರಿಂಗ್ ಮಾಡಿಕೊಂಡ ಜನರ ಮೇಲೆ ವಿಶೇಷ ಕಾರ್ಯಚರಣೆ ನಡೆಸಿ ಹಲವಾರು ಪ್ರಕರಣಗಳನ್ನು ಪತ್ತೆ ಹಚ್ಚಿ ಅಕ್ರಮ ವಿದ್ಯುತ್ ಸಂಪರ್ಕ ಪಡೆಯಲು ಬಳಸಿದ ವಿದ್ಯುತ್, ಉಪಕರಣಗಳನ್ನು ಜಾಗೃತದಳದ ತಂಡ ವಶಪಡಿಸಿಕೊಂಡಿವೆ ಹಾಗೂ ಅಂದಾಜು 11 ಕೋಟಿ ರೂಪಾಯಿಯಷ್ಟು ದಂಡ ವಿಧಿಸಲಾಗಿದೆ.
ಇದನ್ನೂ ಓದಿ: ಸರಿಯಾಗಿ ಡಿ.ಟಿ.ಪಿ ಕೋರ್ಸ್ ಕಲಿಸದ ಕಂಪ್ಯೂಟರ್ ಸಂಸ್ಥೆಗೆ ದಂಡ ವಿಧಿಸಿದ ಗ್ರಾಹಕರ ಆಯೋಗ
ವಿದ್ಯುತ್ ಕಂಬದಿಂದ ನೇರವಾಗಿ ಮನೆಗೆ ಸಂಪರ್ಕ ಪಡೆದಿರುವುದು, ಬೈಪಾಸ್ ಸಂಪರ್ಕ ಮಾಡಿಕೊಂಡಿರುವುದು, ಮಿಟರ್ ಟ್ಯಾಂಪರಿಂಗ್ ಮಾಡಿಕೊಂಡಿರುವದು, ವಿದ್ಯುತ್ ಶುಲ್ಕ ಪಾವತಿಸದೆ ಸಂಪರ್ಕ ಕಡಿತವಾಗಿದ್ದರೂ ಸಹ ಅಕ್ರಮವಾಗಿ ಸಂಪರ್ಕ ಪಡೆದಿರುವುದು ಹೀಗೆ ಹಲವಾರು ರೀತಿಯಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಸರ್ಕಾರಕ್ಕೆ ವಂಚಿಸುತ್ತಿರುವ ಪ್ರಕರಣಗಳು ಪತ್ತೆಯಾಗಿವೆ. ಮತ್ತು ಜಾಗೃತದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಹೆಚ್ಚು ವಿದ್ಯುತ್ ಪೆÇೀಲಾಗುತ್ತಿರುವ ಹಳ್ಳಿಗಳಿಗೆ ಬೇಟಿ ನೀಡಿ ವಿದ್ಯುತ್ ಕಳ್ಳತನ ಹಾಗೂ ಮೂಡಿಸಲಾಗುತ್ತಿರುತ್ತದೆ. ದುರುಪಯೋಗದ ಬಗ್ಗೆ ಜನಜಾಗೃತಿ ಸಭೆಗಳನ್ನು ನಡೆಸಿ ಜನರಲ್ಲಿ ಅರಿವು ಮೂಡಿಸಲಾಗುತ್ತದೆ.
ಇದನ್ನೂ ಓದಿ: ಟೋಲ್ ಸಿಬ್ಬಂದಿಯಿಂದ ಕಾರು ಚಾಲಕನ ಮೇಲೆ ಹಲ್ಲೆ
ಈ ದಿನ, ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಿದ್ಯುತ್ ಉಪಕರಣಗಳನ್ನು ಪೆÇಲೀಸ್ ಆಧೀಕ್ಷಕರಾದ ಚನ್ನಬಸವಣ್ಣ, ಎಸ್.ಎಲ್.ಎ.ಎಸ್., ರವರ ನೇತೃತ್ವದಲ್ಲಿ ಪ್ರದರ್ಶಿಸಲಾಯಿತು. ಈ ವೇಳೆಯಲ್ಲಿ ಎಲ್ಲ ಎಂಟು ಜಾಗೃತದಳದ ಪೋಲಿಸ್ ಠಾಣೆಯ ಪಿ.ಐ . ಹಾಗೂ ಎ.ಇ.ಇ., ರವರು ಮತ್ತು ಪೆÇಲೀಸ್ ಸಿಬ್ಬಂದಿ ಹಾಗೂ ಕಛೇರಿ ಸಿಬ್ಬಂದಿರವರು ಹಾಜರಿದ್ದರು, ಅವರ ಈ ಕಾರ್ಯಕ್ಕೆ ಮಾನ್ಯ ಪೋಲಿಸ್ ಅಧೀಕ್ಷಕರು, ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.