International Monetary Fund: IMF ಜಗತ್ತಿನ 60ಕ್ಕೂ ಹೆಚ್ಚು ದೇಶಗಳಿಗೆ ಸಾಲ ನೀಡಿದೆ. ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ ಸೇರಿದಂತೆ ವಿಶ್ವದ ಹತ್ತಾರು ದೇಶಗಳು ಇದರಲ್ಲಿ ಸೇರಿವೆ.
Pakistan Economic Crisis: ಹಣಕಾಸು ತಜ್ಞರ ಪ್ರಕಾರ, ಪಾಕಿಸ್ತಾನ ಬಡವಾದರೆ ಆಗ ಅದು ವಿಶ್ವದಲ್ಲಿ ತನ್ನ ಪ್ರತಿಷ್ಠೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ಪಾಕಿಸ್ತಾನದ ರೂಪಾಯಿ ಮೌಲ್ಯ ವಿಶ್ವದಲ್ಲೇ ಅಂತ್ಯವಾಗಲಿದೆ. ಪಾಕಿಸ್ತಾನವು ಹೊರಗಿನಿಂದ ಏನನ್ನೂ ಆಮದು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ., ಇದರಿಂದಾಗಿ ಅದರ ಆರ್ಥಿಕತೆಯು ಸ್ಥಗಿತಗೊಳ್ಳುತ್ತದೆ. ಮುಳುಗುತ್ತಿರುವ ಆರ್ಥಿಕತೆಯಿಂದಾಗಿ ದೇಶದಲ್ಲಿ ನಿರುದ್ಯೋಗ ಮತ್ತು ಬಡತನ ಉತ್ತುಂಗಕ್ಕೇರಲಿದೆ.
ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದ ಜನತೆ ಇಂದು ತಡ ರಾತ್ರಿ 2000 ಕ್ಕೂ ಹೆಚ್ಚು ಜನರು ಲಂಕಾ ರಾಜಧಾನಿಯಲ್ಲಿ ಅಧ್ಯಕ್ಷರ ಭವನದ ಬಳಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
IMF Predicts India Growth - 2020ರಲ್ಲಿ ಭಾರತದ ಆರ್ಥಿಕತೆ ದಾಖಲೆಯ ಶೇಕಡಾ 8 ರಷ್ಟು ಕುಸಿದಿದೆ ಎಂದು ವಿಶ್ವ ಹಣಕಾಸು ನಿಧಿ ಹೇಳಿದೆ. ಆದರೆ ಈ ವರ್ಷ ಭಾರತದ ಆರ್ಥಿಕ ಬೆಳವಣಿಗೆಯ ದರ ಶೇಕಡಾ 12.5 ರಷ್ಟಿರಲಿದೆ ಎಂದು ಹಣಕಾಸು ನಿಧಿ ತನ್ನ ಅಂದಾಜು ವ್ಯಕ್ತಪಡಿಸಿದೆ.
International Monetary Fund- ಕೃಷಿ ಕಾನೂನುಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿ, ಈ ಕಾನೂನುಗಳು ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಾಗಿ ಮಹತ್ವದ ಹೆಜ್ಜೆಯಾಗಲಿದ್ದು, ಇವುಗಳಿಂದ ರೈತರ ಆದಾಯ ಕೂಡ ಹೆಚ್ಚಾಗಲಿದೆ ಎಂದು ಹೇಳಿದೆ.
2020-21ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ದರ ಕೇವಲ ಶೇ..1.9ರಷ್ಟು ಇರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ಅಂದಾಜು ವ್ಯಕ್ತಪಡಿಸಿದೆ. ಕರೋನಾ ವೈರಸ್ ಸಾಂಕ್ರಾಮಿಕ ಮತ್ತು ವಿಶ್ವಾದ್ಯಂತ ಆರ್ಥಿಕ ಚಟುವಟಿಕೆಯ ನಿಶ್ಚಲತೆಯಿಂದಾಗಿ ಜಾಗತಿಕ ಆರ್ಥಿಕತೆಯು ತೀವ್ರ ಹಿನ್ನಡೆ ಅನುಭವಿಸುತ್ತಿದೆ ಎಂದು IMF ಹೇಳಿದೆ.
"ಕಳೆದ ಐದು ವರ್ಷಗಳಿಂದ ಭಾರತ ಆರ್ಥಿಕತೆ ಶೇಕಡಾ ಏಳು ರಷ್ಟು ಏರಿಕೆಯಾಗುತ್ತಿದೆ ಎಂಬ ಕಾರಣದಿಂದಾಗಿ, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ" ಎಂದು ಐಎಮ್ಎಫ್ ಕಮ್ಯುನಿಕೇಷನ್ಸ್ ನಿರ್ದೇಶಕ ಗೆರ್ರಿ ರೈಸ್ ಗುರುವಾರ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.