ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಶುಕ್ರವಾರ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯಸ್ಥ ಕ್ರಿಸ್ಟಲಿನಾ ಜಾರ್ಜಿವಾ ಅವರೊಂದಿಗೆ ಮಾತುಕತೆ ನಡೆಸಿ, ನಗದು ಕೊರತೆಯಿಂದ ಬಳಲುತ್ತಿರುವ ದೇಶಕ್ಕೆ ಮುಂದಿನ ಹಂತದ ಪರಿಹಾರಕ್ಕಾಗಿ ಕೋರಿಕೆಯನ್ನಿಟ್ಟಿದ್ದಾರೆ.
ರಸ್ತೆಯ ಗುಣಲಕ್ಷಣಗಳಿಂದ ನಿರ್ಮಾಣ ವೆಚ್ಚಗಳು ಬದಲಾಗುತ್ತವೆ, ಅವುಗಳೆಂದರೆ ಲೇನ್‌ಗಳ ಸಂಖ್ಯೆ ಮತ್ತು ಮೇಲ್ಮೈ ಮತ್ತು ಪ್ರದೇಶದ ಪ್ರಕಾರ, ಉದಾಹರಣೆಗೆ ಉತ್ತರದಲ್ಲಿ ಮೂರನೇ ಹಂತದ ಎಲ್ಲಾ-ಹವಾಮಾನ ರಸ್ತೆಯು ದಕ್ಷಿಣದಲ್ಲಿ ನಿರ್ಮಿಸಲು ಎರಡು ಪಟ್ಟು ಹೆಚ್ಚು ವೆಚ್ಚವಾಗಬಹುದು ಎಂದು ಐಎಂಎಫ್ ಅಂದಾಜಿಸಿದೆ. ಇದಕ್ಕಾಗಿ ಪ್ರತಿ ಕಿಲೋಮೀಟರ್‌ಗೆ ಸರಾಸರಿ ವೆಚ್ಚ ಸುಮಾರು $509,000 ತಗಲುತ್ತದೆ ಎಂದು ಹೇಳಿದೆ.
ಭಾರತವು ಜಿ 20 ದೇಶಗಳನ್ನು ಶಕ್ತಿ ಸ್ಥಾನದಿಂದ ಮುನ್ನಡೆಸುವತ್ತ ಸಾಗುತ್ತಿದೆ ಮತ್ತು ಮುಂದಿನ ವರ್ಷದ ಅಧ್ಯಕ್ಷೀಯ ಅವಧಿಯಲ್ಲಿ ವಿಶ್ವದ ಮೇಲೆ ಒಂದು ಛಾಪನ್ನು ಮೂಡಿಸಲಿದೆ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಗುರುವಾರ ಹೇಳಿದ್ದಾರೆ.
GDP Growth: ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕತ್ತರಿ ಬಳಸಿ ಭಾರತದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 7 ರಿಂದ ಕೆಳಕ್ಕೆ ಇಳಿಸಿದೆ. IMF ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಜುಲೈನಲ್ಲಿ 7.4% ರಿಂದ 6.8% ಕ್ಕೆ ಇಳಿಸಿದೆ.
Economic Crisis: ಮುದ್ರಣ ಕಾಗದದ ಕೊರತೆಯಿಂದಾಗಿ ಭಾರತದ ನೆರೆಯ ದೇಶದಲ್ಲಿ ಲಕ್ಷಾಂತರ ಮಕ್ಕಳು ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ನೆರೆಯ ರಾಷ್ಟ್ರ ಶ್ರೀಲಂಕಾ ಅತ್ಯಂತ ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮುದ್ರಣ ಕಾಗದದ ದೊಡ್ಡ ಕೊರತೆಯಿಂದಾಗಿ ಸರ್ಕಾರವು ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಇಮ್ರಾನ್ ಸರ್ಕಾರವು 2018ರಲ್ಲಿ ಅಧಿಕಾರಕ್ಕೆ ಬಂದ ಮೊದಲ 3 ವರ್ಷಗಳಲ್ಲಿ ವಿದೇಶಿ ಸರ್ಕಾರಗಳು ಮತ್ತು ಸಂಸ್ಥೆಗಳಿಂದ $34 ಶತಕೋಟಿ ಅಮೆರಿಕನ್ ಡಾಲರ್ ಗಿಂತಲೂ ಹೆಚ್ಚಿನ ಸಾಲವನ್ನು ತೆಗೆದುಕೊಂಡಿದೆ.
Gita Gopinath To Leave IMF: ಗೀತಾ ಅವರು ಮೈಸೂರಿನಲ್ಲಿ ಜನಿಸಿದ್ದಾರೆ. ಅವರು ಐಎಂಎಫ್ ಮುಖ್ಯಸ್ಥೆ ಹುದ್ದೆಯನ್ನು ತಲುಪಿದ ಮೊದಲ ಮಹಿಳೆಯಾಗಿದ್ದಾರೆ. ಇದಲ್ಲದೇ, ರಘುರಾಮ್ ರಾಜನ್ ನಂತರ IFM ನಲ್ಲಿ ಈ ಸ್ಥಾನವನ್ನು ತಲುಪಿದ ಎರಡನೇ ಭಾರತೀಯರಾಗಿದ್ದಾರೆ.
Legal Tender To Crypto Currency - BitCoin ಗಳಂತಹ ಕ್ರಿಪ್ಟೋಕರೆನ್ಸಿ ಗಳಿಗೆ ಕಾನೂನು ಬದ್ಧಗೊಳಿಸುವುದರ ಕುರಿತು IMF ಎಚ್ಚರಿಕೆ ನೀಡಿದ್ದು, ಇದರಿಂದ ಮೈಕ್ರೋ ಎಕಾನಾಮಿ ಸ್ಟೆಬಿಲಿಟಿಗೆ ಪ್ರತ್ಯಕ್ಷ ರೂಪದಲ್ಲಿ ಹೊರೆಯಾಗಲಿದೆ ಎಂದು ಹೇಳಿದೆ.
India Growth Projection By IMF - ಕರೋನಾದ ಎರಡನೇ ಅಲೆ (Coronavirus Second Wave) ಭಾರತದ ಆರ್ಥಿಕತೆಯ (Indian Economy) ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ವರದಿ ಈ ಅಂಶ ಬಹಿರಂಗಪಡಿಸಿದೆ.
ಮುಂದಿನ ವರ್ಷದ ಮಧ್ಯಭಾಗದಲ್ಲಿ COVID-19 ವಿರುದ್ಧ 50 ಬಿಲಿಯನ್ ಡಾಲರ್ ಹೂಡಿಕೆ ಯೋಜನೆಯು ವಿಶ್ವದಾದ್ಯಂತ ಜನರಿಗೆ ಹೇಗೆ ಲಸಿಕೆ ನೀಡಬಹುದು ಎಂಬ ಪ್ರಸ್ತಾಪವನ್ನು ಅನಾವರಣಗೊಳಿಸಿದ ಅಂತರರಾಷ್ಟ್ರೀಯ ಹಣಕಾಸು ನಿಧಿ ಅಥವಾ ಐಎಂಎಫ್ ಶುಕ್ರವಾರ ಲಸಿಕೆಗಳ ರಫ್ತು ನಿಷೇಧಿಸುವ ಭಾರತದ ನಿರ್ಧಾರವು ಹಲವಾರು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ.
IMF Predicts India Growth - 2020ರಲ್ಲಿ ಭಾರತದ ಆರ್ಥಿಕತೆ ದಾಖಲೆಯ ಶೇಕಡಾ 8 ರಷ್ಟು ಕುಸಿದಿದೆ ಎಂದು ವಿಶ್ವ ಹಣಕಾಸು ನಿಧಿ ಹೇಳಿದೆ. ಆದರೆ ಈ ವರ್ಷ ಭಾರತದ ಆರ್ಥಿಕ ಬೆಳವಣಿಗೆಯ ದರ ಶೇಕಡಾ 12.5 ರಷ್ಟಿರಲಿದೆ ಎಂದು ಹಣಕಾಸು ನಿಧಿ ತನ್ನ ಅಂದಾಜು ವ್ಯಕ್ತಪಡಿಸಿದೆ.
Economic Growth Rate - ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವಿಕಾಸ ದರ ದಾಖಲೆಯ ಶೇಕಡಾ 11.5ಕ್ಕೆ ತಲುಪಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮಂಗಳವಾರ ಹೇಳಿದೆ.
International Monetary Fund- ಕೃಷಿ ಕಾನೂನುಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿ, ಈ ಕಾನೂನುಗಳು ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಾಗಿ ಮಹತ್ವದ ಹೆಜ್ಜೆಯಾಗಲಿದ್ದು, ಇವುಗಳಿಂದ ರೈತರ ಆದಾಯ ಕೂಡ ಹೆಚ್ಚಾಗಲಿದೆ ಎಂದು ಹೇಳಿದೆ.
ಕ್ರೆಡಿಟ್ ಸ್ಕೋರ್ (Credit Score) ಪ್ರತಿ ಹಂತದಲ್ಲಿ ಅಗತ್ಯವಾಗಿರುತ್ತದೆ ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತವೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಗ್ರಾಹಕರಿಗೆ ಸಾಲ ಪಡೆಯುವುದು ಸುಲಭ.
2020-21ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ದರ ಕೇವಲ ಶೇ..1.9ರಷ್ಟು ಇರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ಅಂದಾಜು ವ್ಯಕ್ತಪಡಿಸಿದೆ. ಕರೋನಾ ವೈರಸ್ ಸಾಂಕ್ರಾಮಿಕ ಮತ್ತು ವಿಶ್ವಾದ್ಯಂತ ಆರ್ಥಿಕ ಚಟುವಟಿಕೆಯ ನಿಶ್ಚಲತೆಯಿಂದಾಗಿ ಜಾಗತಿಕ ಆರ್ಥಿಕತೆಯು ತೀವ್ರ ಹಿನ್ನಡೆ ಅನುಭವಿಸುತ್ತಿದೆ ಎಂದು IMF ಹೇಳಿದೆ.