ನವದೆಹಲಿ: ಈ ವರ್ಷದ ಸೆಪ್ಟೆಂಬರ್‌ನೊಳಗೆ ವಾಣಿಜ್ಯ ಸೇವೆಗಳನ್ನು ಪುನರಾರಂಭಿಸುವ ಗುರಿಯನ್ನು ಹೊಂದಿರುವ ಜೆಟ್ ಏರ್‌ವೇಸ್ ಬಹು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.ಈ ಹಿನ್ನೆಲೆಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.ಇದೆ ವೇಳೆ ವಿಮಾನಯಾನವು ಈ ಹಿಂದಿನ ಜೆಟ್ ಏರ್ವೇಸ್ ಉದ್ಯೋಗಿಗಳಿಗೂ ಸಹ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುತ್ತದೆ.
ಜೆಟ್ ಏರ್‌ವೇಸ್ ಜನರಲ್ ಮ್ಯಾನೇಜರ್ (ಚಿಲ್ಲರೆ ಮತ್ತು ಕಾರ್ಪೊರೇಟ್ ಮಾರಾಟಗಳು), ಹೆಡ್ - ಗ್ರೌಂಡ್ ಆಪರೇಷನ್ ಟ್ರೈನಿಂಗ್, ಡಿಜಿಆರ್ ಇನ್‌ಸ್ಟ್ರಕ್ಟರ್ ಮತ್ತು ಪ್ಯಾಸೆಂಜರ್ ಸರ್ವಿಸ್ ಸಿಸ್ಟಮ್ (ಪಿಎಸ್‌ಎಸ್) ತರಬೇತುದಾರ ಮತ್ತು ಇತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ಡೀಲ್ ರಾಜಕೀಯ ಬಿಜೆಪಿಯವರ ಮನೆದೇವರಾಗಿಬಿಟ್ಟಿದೆ: ಕಾಂಗ್ರೆಸ್ ಟೀಕೆ
ಈ ಕುರಿತಾಗಿ ಟ್ವೀಟ್ ಮಾಡಿರುವ ಜೆಟ್ ಏರ್ವೇಸ್ 'ಇತಿಹಾಸವನ್ನು ರಚಿಸುವ ತಂಡವನ್ನು ಸೇರಲು ನಾವು ರಿಟೇಲ್ ಮತ್ತು ಕಾರ್ಪೊರೇಟ್ ಸೇಲ್ಸ್ ನಲ್ಲಿ ಜನರಲ್ ಮ್ಯಾನೇಜರ್ (GM) ನ್ನು ಹುಡುಕುತ್ತಿದ್ದೇವೆ" ಎಂದು ಟ್ವೀಟ್ ಮಾಡಿದೆ.
We are looking for a GM – Retail & Corporate Sales to join the team creating history.
If you meet the requirements below, please send us your CV at: careers@jetairways.com#JetAirwaysIsHiring pic.twitter.com/xpVMTMAifk
— Jet Airways (@jetairways) May 31, 2022
-ವಿಮಾನಯಾನ ಅಥವಾ ಪ್ರಯಾಣ ಉದ್ಯಮದಲ್ಲಿ ಅಭ್ಯರ್ಥಿಯು 10 ರಿಂದ 15 ವರ್ಷಗಳ ನಡುವಿನ ಅನುಭವವನ್ನು ಹೊಂದಿರಬೇಕು -
-ಸಂಭಾವ್ಯ ಗ್ರಾಹಕರು ಮತ್ತು ವ್ಯಾಪಾರ ಪಾಲುದಾರರನ್ನು ಗುರುತಿಸಲು ಅಭ್ಯರ್ಥಿಯು ತ್ವರಿತವಾಗಿರಬೇಕು ಮತ್ತು ವಾಣಿಜ್ಯ ಸಂಬಂಧಗಳನ್ನು ನಿರ್ವಹಿಸುವಲ್ಲಿ ಉತ್ತಮವಾಗಿರಬೇಕು.
-ಅಭ್ಯರ್ಥಿಯು ಪದವೀಧರರಾಗಿರಬೇಕು ಅಥವಾ ಸ್ನಾತಕೋತ್ತರ ಪದವೀಧರರಾಗಿರಬೇಕು. ಏತನ್ಮಧ್ಯೆ, ಮಾರ್ಕೆಟಿಂಗ್ ಅಥವಾ ಮಾರಾಟದಲ್ಲಿ ಎಂಬಿಎ ಮಾಡಿದ್ದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
-ಹೆಡ್-ಗ್ರೌಂಡ್ ಆಪರೇಷನ್ಸ್ ತರಬೇತಿಗಾಗಿ, ಅಭ್ಯರ್ಥಿಯು ಸ್ನಾತಕೋತ್ತರ ಪದವಿ ಮತ್ತು ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರಬೇಕು.
ಇದನ್ನೂ ಓದಿ: ಸಿದ್ದರಾಮಯ್ಯ ಎದುರು ಡಿಕೆಶಿ ಅಸಹಾಯಕರಾಗಿ ನಿಲ್ಲಬೇಕಷ್ಟೆ!: ಬಿಜೆಪಿ ವ್ಯಂಗ್ಯ
-ಡಿಜಿಆರ್ ಬೋಧಕ ಹುದ್ದೆಗಾಗಿ ಅಭ್ಯರ್ಥಿಯು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA)-ಅನುಮೋದಿತ ಅಪಾಯಕಾರಿ ಸರಕುಗಳ ಬೋಧಕನಾಗಿರಬೇಕು.ಕನಿಷ್ಟ 5 ವರ್ಷಗಳ ತರಬೇತಿ ಅನುಭವವನ್ನು ಹೊಂದಿರಬೇಕು.
-ಪ್ರಯಾಣಿಕ ಸೇವಾ ವ್ಯವಸ್ಥೆ (PSS) ತರಬೇತುದಾರ ಹುದ್ದೆಗೆ, ಅಭ್ಯರ್ಥಿಯು PSS ವ್ಯವಸ್ಥೆಗಳಲ್ಲಿ ಕನಿಷ್ಠ 4 ವರ್ಷಗಳ ಅನುಭವವನ್ನು ಹೊಂದಿರಬೇಕು ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು
ಜೆಟ್ ಏರ್‌ವೇಸ್ ಮಾರಾಟವನ್ನು ಮುಂದಿನ ಹಂತಕ್ಕೆ ಮತ್ತು ಅದರಾಚೆಗೆ ಅಭಿವೃದ್ಧಿಪಡಿಸಲು ಉನ್ನತ-ಕಾರ್ಯನಿರ್ವಹಣೆಯ ಮಾರಾಟ ವೃತ್ತಿಪರರನ್ನು ಸಹ ಏರ್‌ಲೈನ್ ಹುಡುಕುತ್ತಿದೆ.
ಒಂದು ವೇಳೆ ನಿಮಗೆ ಈ ಅರ್ಹತೆಗಳು ಇದ್ದಲ್ಲಿ ಕೂಡಲೇ ನಿಮ್ಮ ಸಿವಿಯನ್ನು ಇಲ್ಲಿಗೆ ಕಳುಹಿಸಿ: careers@jetairways.com.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.