ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ ನಡೆಯುತ್ತಿದೆ. ಇಂದು ನಟ ಡಾ. ಶಿವರಾಜಕುಮಾರ್ ಅವರ ನಾಯಕತ್ವದ ಒಡೆಯರ್ ಚಾರ್ಜಸ್ ತಂಡ ಮತ್ತು ಡಾಲಿ ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ನಡುವೆ ಮ್ಯಾಚ್ ನಡೆದಿತ್ತು. ಈ ವೇಳೆ ಬ್ರೇಕ್ ಸಮಯದಲ್ಲಿ ಶಿವಣ್ಣ ವಿಲನ್ ಸಿನಿಮಾದ ಹಿಟ್ ಸಾಂಗ್ ಟಿಕ್ ಟಿಕ್ ಹಾಡಿಗೆ ಹೆಜ್ಜೆ ಹಾಕಿದರು. ಶಿವಣ್ಣ ಎನರ್ಜಿಟಿಕ್ ಡಾನ್ಸ್ ನೋಡಿ ಪ್ರೇಕ್ಷಕರು ಶಿಳ್ಳೆ ಹೊಡೆದರು.
Kannada Chalanachitra Cup: ಪಂದ್ಯಾವಳಿಯ ಪೂರ್ವಭಾವಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, “ಪಂದ್ಯಾವಳಿಯ ಆಯೋಜನೆ ಕಾರ್ಯದಲ್ಲಿದ್ದು, ಆಡುತ್ತಿರುವ ವಿವಿಧ ನಟರ ಅಭಿಮಾನಿಗಳು ಆಟವನ್ನು ಶಾಂತಿಯುತವಾಗಿ ಆನಂದಿಸಿ ಮತ್ತು ಯಾವುದೇ ಗಲಾಟೆ ಸೃಷ್ಟಿಸಬೇಡಿ” ಎಂದು ವಿನಂತಿಸಿದರು.
ಕನ್ನಡ ಚಲನಚಿತ್ರ ಕಪ್ ಪಂದ್ಯಾವಳಿಯ ಎರಡು ವರ್ಷಗಳ ಯಶಸ್ಸಿನ ಹಿನ್ನೆಲೆಯಲ್ಲಿ ಮೂರನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಲು ಸಂಘಟಕರು ಮುಂದಾಗಿದ್ದಾರೆ. ಈ ಬಾರಿ ಮೈಸೂರಿನಲ್ಲಿ ಟೂರ್ನಿ ನಡೆಯಲಿದ್ದು, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪೆಟ್ರಿಯೊಟ್ಸ, ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ್ , ಒಡೆಯರ್ ಚಾರ್ಜರ್ಸ್, ಕದಂಬ ಲಯನ್ಸ್ ಸೇರಿದಂತೆ ಒಟ್ಟು ಆರು ತಂಡಗಳು ಮೈದಾನಕ್ಕೀಳಿಯಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.