ಪ್ಯಾನ್ ಕಾರ್ಡ್ ಅನ್ನು ಆಧಾರ್ಗೆ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಮಾರ್ಚ್ 31 ರೊಳಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ಗೆ ಲಿಂಕ್ ಮಾಡಿದಿದ್ದಲ್ಲಿ ಅದು ನಿಷ್ಕ್ರಿಯಗೊಳ್ಳಲಿದೆ.
ನೀವು ಇನ್ನೂ ಪ್ಯಾನ್ ಕಾರ್ಡ್ ಅನ್ನು ಆಧಾರ್ಗೆ ಲಿಂಕ್ ಮಾಡದಿದ್ದರೆ, ಮೊದಲು ಆ ಕೆಲಸ ಮಾಡಿ ಮುಗಿಸಿ. ಮಾರ್ಚ್ 31 ರ ಒಳಗೆ ಈ ಕೆಲಸ ಮಾಡದೇ ಹೋದರೆ ನಿಮ್ಮ ಆಧಾರ್ ನಿಷ್ಕ್ರಿಯವಾಗಬಹುದು. ಮತ್ತೆ ಅದನ್ನು ಆಕ್ಟಿವ್ ಮಾಡಬೇಕಾದರೆ ದಂಡ ತೆರಬೇಕಾಗುತ್ತದೆ.
ದೇಶದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಎಸ್ಬಿಐ ತನ್ನ ನಿಯಮಗಳನ್ನು ಬಿಗಿಗೊಳಿಸಿದೆ. ಹೊಸ ನಿಯಮಗಳ ಪ್ರಕಾರ, ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಖಾತೆಗೆ ಲಿಂಕ್ ಮಾಡದಿದ್ದರೆ, ನೀವು ಅಂತರರಾಷ್ಟ್ರೀಯ ವಹಿವಾಟಿನಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಖಾತೆಯನ್ನು ನೀವು ಇನ್ನೂ ಪ್ಯಾನ್ ಕಾರ್ಡ್ಗೆ ಲಿಂಕ್ ಮಾಡದಿದ್ದರೆ, ವಿಳಂಬ ಮಾಡಬೇಡಿ. ನೀವು ಈ ಕೆಲಸವನ್ನು ಆಫ್ಲೈನ್ ಮತ್ತು ಆನ್ಲೈನ್ನಲ್ಲಿ ನಿರ್ವಹಿಸಬಹುದು.
ಆದಾಯ ತೆರಿಗೆಯನ್ನು ಜಮಾ ಮಾಡುವಾಗ, ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವಾಗ, ಬ್ಯಾಂಕ್ ಖಾತೆ ತೆರೆಯುವಾಗ, ಡಿಮ್ಯಾಟ್ ಖಾತೆ ತೆರೆಯುವಾಗ ಮತ್ತು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಅಗತ್ಯವಿದೆ.
ಸಾಮಾನ್ಯವಾಗಿ ಆಧಾರ್ ಕಾರ್ಡ್ ಅನ್ನು ಗುರುತಿನ ಮತ್ತು ವಾಸಸ್ಥಳದ ಪುರಾವೆಯಾಗಿ ಬಳಸಲಾಗುತ್ತದೆ. ಜೊತೆಗೆ, ಆದಾಯ ತೆರಿಗೆ ಪ್ರಾಧಿಕಾರವು ಪ್ಯಾನ್ ಕಾರ್ಡ್ನೊಂದಿಗೆ ಎಲ್ಲಾ ಹಣಕಾಸು ವಹಿವಾಟುಗಳನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ನೀವು ಇನ್ನೂ ಪ್ಯಾನ್ ಕಾರ್ಡ್ ಮಾಡಿಸದಿದ್ದರೆ ಸರ್ಕಾರವು ಅದನ್ನು ನಿಮಿಷಗಳಲ್ಲಿ ಮಾಡುವ ಸೌಲಭ್ಯವನ್ನು ಪ್ರಾರಂಭಿಸಿದೆ. ಇದಕ್ಕಾಗಿ ನೀವು ಆದಾಯ ತೆರಿಗೆ ವೆಬ್ಸೈಟ್ಗೆ ಹೋಗಬೇಕಾಗುತ್ತದೆ.
ಜನರು ತಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡ ನಂತರ ಸಾಕಷ್ಟು ಸಂಕಷ್ಟ ಎದುರಿಸುತ್ತಾರೆ. ಹಾಗಾದರೆ ಬನ್ನಿ ಪ್ಯಾನ್ ಕಾರ್ಡ್ ಪುನಃ ಪಡೆಯಲು ಮತ್ತೆ ಏನು ಮಾಡಬೇಕು ಮತ್ತು ಎಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಎಂದು ತಿಳಿಯೋಣ.
ಇನ್ಮುಂದೆ ನೀವು ನಿಮ್ಮ ಪ್ಯಾನ್ ಕಾರ್ಡ್ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಮನೆಯಿಂದ ಹೊರಗೆ ಹೋಗಬೇಕಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪ್ಯಾನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ನಿಮ್ಮ ಮನೆ ಕೆಲಸ ಅಥವಾ ಬ್ಯಾಂಕಿಂಗ್ ಕೆಲಸ ಅಥವಾ ಹಣಕಾಸಿಗೆ ಸಂಬಂಧಿಸಿದ ಇನ್ನಾವುದೇ ಕೆಲಸ ಮಾಡಬೇಕಾದಲ್ಲಿ ಪ್ಯಾನ್ ಕಾರ್ಡ್ ಅವಶ್ಯಕ ದಾಖಲೆಯಾಗಿದೆ.
ಹಣಕಾಸಿನ ವಹಿವಾಟು ಮತ್ತು ತೆರಿಗೆ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಆದರೆ ಕೆಲವೊಮ್ಮೆ ಜನರ ಪ್ಯಾನ್ ಕಾರ್ಡ್ನ ವಿವರಗಳನ್ನು ತಪ್ಪಾಗಿ ಮುದ್ರಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.