New Financial year Rules Change: ಇಂದಿನಿಂದ ಎಂದರೆ 01 ಏಪ್ರಿಲ್ 2024ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ. ಅದರ ಮೊದಲ ದಿನದಲ್ಲಿ ಗ್ಯಾಸ್ ಬೆಲೆಯಲ್ಲಿ ದೊಡ್ಡ ಪರಿಹಾರ ಕಂಡುಬಂದಿದೆ. 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಯನ್ನು ಕಡಿಮೆ ಮಾಡಲಾಗಿದ್ದು, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಷ್ಟೇ ಅಲ್ಲದೆ, ಇನ್ನೂ ಕೆಲವು ಪ್ರಮುಖ ನಿಯಮಗಳು ಕೂಡ ಬದಲಾಗಲಿವೆ.
New Financial Year Changes: ಫಾಸ್ಟ್ಟ್ಯಾಗ್ ಗ್ರಾಹಕರಿಗೆ KYC ಅಪ್ಡೇಟ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31 ಆಗಿರುತ್ತದೆ. ಈ ದಿನಾಂಕದೊಳಗೆ ನೀವು KYCಯನ್ನು ಅಪ್ಡೇಟ್ ಮಾಡದಿದ್ದರೆ ಅದು ಏಪ್ರಿಲ್ 1ರಿಂದ ಕ್ಲೋಸ್ ಆಗಲಿದೆ.
ಪ್ಯಾನ್ ಕಾರ್ಡ್ ಅನ್ನು ಆಧಾರ್ಗೆ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಮಾರ್ಚ್ 31 ರೊಳಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ಗೆ ಲಿಂಕ್ ಮಾಡಿದಿದ್ದಲ್ಲಿ ಅದು ನಿಷ್ಕ್ರಿಯಗೊಳ್ಳಲಿದೆ.
ಏಪ್ರಿಲ್ 1 ರಿಂದ ದೇಶದಲ್ಲಿ ಹೊಸ ಹಣಕಾಸು ವರ್ಷ (New Financial Year) ಪ್ರಾರಂಭವಾಗಿದೆ. ಇಂದಿನಿಂದ ಅನೇಕ ನಿಯಮಗಳು ಬದಲಾಗುತ್ತವೆ. ಇವು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.