ಬೆಳಗಾವಿಯಲ್ಲಿ ಸಾರಿಗೆ ನೌಕರರನ್ನು ಕತ್ತಲೆಗೆ ದೂಡಿದ ಸರ್ಕಾರ. ಪ್ರತಿಭಟನೆ ಸ್ಥಳದಲ್ಲಿ ಅಧಿಕಾರಿಗಳಿಂದ ವಿದ್ಯುತ್ ಸಂಪರ್ಕ ಕಟ್. ವಿವಿಧ ಬೇಡಿಕೆ ಈಡೇರಿಕೆಗಾಗಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಧರಣಿ. ಬೆಳಗಾವಿ ಬಸ್ತವಾಡ ಗ್ರಾಮದ ಹೊರವಲಯದಲ್ಲಿ ಪ್ರತಿಭಟನೆ.
ಅಸೆಂಬ್ಲಿ ಹಾಲ್ ನಲ್ಲಿ ಸಾವರ್ಕರ್ ಫೋಟೋ ಹಾಕಿದ್ದನ್ನು ಖಂಡಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸುವರ್ಣಸೌಧದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸುವರ್ಣಸೌಧದ ವಿಐಪಿ ಗೇಟ್ ನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಯುತ್ತಿದೆ.
ಮಾರುಕಟ್ಟೆಯಲ್ಲಿ ತೆಂಗಿನಕಾಯಿ, ಕೊಬ್ಬರಿ ಬೆಲೆ ಕುಸಿತ. ಇಂದು ಅರಸೀಕೆರೆ ಪಟ್ಟಣ ಬಂದ್ಗೆ ಕೊಬ್ಬರಿ ಬೆಳೆಗಾರರ ಕರೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ನೇತೃತ್ವದಲ್ಲಿ ಪ್ರತಿಭಟನೆ. ನಿನ್ನೆ ಅರಸೀಕೆರೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ.
ನಾವ್ ಯಾರಿಗೂ ಏನು ಅಂದಿಲ್ಲ. ಆದ್ರೂ ನನ್ನ ಫೋಟೋ ಸುಟ್ರಿ. ಕೊಪ್ಪಳ, ಬಿಜಾಪುರ, ಬೆಂಗಳೂರಲ್ಲಿ ನನ್ನ ಫೋಟೋ ಸುಟ್ರಿ. ಗಂಡಸ್ಥನ ಇದ್ರೆ ಜಗದೀಶ್ ಶೆಟ್ಟರ್ ಮನೆ ಮುಂದೆ ಸುಡಿ ಎಂದು ಬಣಜಿಗ ಸಮುದಾಯ ಪ್ರತಿಭಟನೆಗೆ ಯತ್ನಾಳ್ ಕೆಂಡಾಮಂಡಲ.
ನಗರದ ಅಂಬೇಡ್ಕರ್ ವೃತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ.. ಕನ್ನಡ ಪರ ಹೋರಾಟಗಾರರು ಹಾಗೂ ಪ್ರಗತಿ ಪರ ಸಂಘಟನೆಗಳು ಸಾಥ್ .
ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು.
ಸರಿ ಸುಮಾರು ೬ ಕಿಲೋಮೀಟರ್ ರಸ್ತೆ ಅಭಿವೃದ್ಧಿ ಸ್ಥಳಿಯರು ಆಗ್ರಹ...ಸ್ಥಳಿಯರಿಗೆ ಕಾಂಗ್ರೆಸ್ ಮುಖಂಡರು ಬೆಂಬಲ... ಸರ್ಕಾರಕ್ಕೆ ಸ್ಥಳಿಯ ಶಾಸಕರಿಗೆ ಒಳ್ಳೆ ಬುದ್ದಿ ಕೊಟ್ಟು ರಸ್ತೆ ಅಭಿವೃದ್ಧಿ ದೇವರಲ್ಲಿ ಪ್ರಾರ್ಥನೆ...
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಣದಿವಾಡಿ ಗ್ರಾಮದ ರುದ್ರ ಭೂಮಿಗೆ ಗ್ರಾಮದ ಯಕ್ಸಂಬಿ ಕುಟುಂಬಸ್ಥರು ಸ್ಮಶಾನ ಭೂಮಿಯ ದಾರಿಯನ್ನು ಬಂದ್ ಮಾಡಿದ್ದಾರೆ. ಇದರಿಂದಾಗಿ ಸ್ಮಶಾನಕ್ಕೆ ಹೋಗಲು ತೊಂದರೆ ಆಗುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಚಿಕ್ಕೋಡಿ-ಯಕ್ಸಂಬಾ ರಸ್ತೆ ಮಧ್ಯದಲ್ಲಿ ಶವ ಇಟ್ಟು ಬಜನಾ ಪದಗಳನ್ನು ಹಾಡುತ್ತಾ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಬಾಗಲಕೋಟೆಯಲ್ಲಿ ರೈತರ ಹೋರಾಟ ಮುಂದುವರಿದೆ. 3ನೇ ದಿನವೂ ಮುಧೋಳ ಬಂದ್ ಮಾಡಿ ಪ್ರತಿಭಟನೆಗೆ ರೈತರು ಮುಂದಾಗಿದ್ದಾರೆ. ಇಂದು ಮುಧೋಳ ತಹಶೀಲ್ದಾರ್ ಕಚೇರಿ ಮುತ್ತಿಗೆಗೆ ಸಿದ್ಧತೆ ನಡೆಸಲಾಗಿದೆ.
ಮತಾಂತರ ಅಲ್ಲ ಮನಸಾಂತರ: ಹೀಗೇ ನೂರಾರು ಜನರು ಏಕಾಏಕಿ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬೇಕೇ ಬೇಕು ನ್ಯಾಯ ಬೇಕು.. ಬಂಧನ ಮಾಡಿ.. ಮಾಡಿ ಬಂಧನ ಮಾಡಿ ಅಂತಾ ತಡರಾತ್ರಿ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿ ಧಾರವಾಡ ಸೇರಿದಂತೆ ಎಲ್ಲೆಲ್ಲೂ ಮತಾಂತರ ಆರೋಪ ಕೇಳಿ ಬರುತ್ತಿದೆ. ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರು ಕೂಡ ಅದು ಸರಿಯಾಗಿ ಪಾಲನೆಯಾಗದೆ ಮತಾಂತರ ನಡೆಯುತ್ತಲೆ ಇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.