ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಿಲ್ಲದ ಮಳೆಯ ಅಬ್ಬರ
ತರೀಕೆರೆ ಪಟ್ಟಣದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತ
ಬಿಟ್ಟು ಬಿಡದೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ
ರಾ. ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡ್ಡಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದ ಮಳೆ ಆರ್ಭಟ
ಜಿಲ್ಲೆಯಲ್ಲಿ ಮಳೆಗೆ ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ಸ್ಥಗಿತ
ಚಿಕ್ಕಮಗಳೂರು, ಕೊಪ್ಪ, ಕಡೂರು, ಕಳಸಾಪುರ, ಪಂಚನಹಳ್ಳಿ,
ಬೀರೂರು, ಶಿವನಿ, ಮೂಡಿಗೆರೆ ಸೇರಿ ಹಲವೆಡೆ ಭಾರಿ ಮಳೆ
ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಜನ ತತ್ತರ!
ಮಿಡ್ ನೈಟ್ ಸುರಿದ ಮಳೆಗೆ ಮನೆಯಿಡೀ ಜಲಮಯ!
ಮನೆಗೆ ನುಗ್ಗಿದ ನೀರು, ನೀರು ಹೊರ ಹಾಕಲು ಪರದಾಟ
ಬೆಂಗಳೂರಿನ ಚಾಮರಾಜಪೇಟೆ ಗುಡ್ಡದಹಳ್ಳಿಯಲ್ಲಿ ಘಟನೆ
ಸಣ್ಣ ಮಳೆ ಬಂದರೂ ಎದುರಾಗುವ ಪವರ್ ಕಟ್ ಸಮಸ್ಯೆಯಿಂದ ಬೇಸತ್ತಿರುವ ಸಾರ್ವಜನಿಕರು ಕರೆಂಟ್ ಇಲ್ದೆ ಆಕ್ರೋಶಗೊಂಡು ಕಾರವಾರ ರೋಡ್ ಬಂದ್ (Karwar Road Bandh) ಮಾಡಿ ವಿದ್ಯುತ್ ಸರಬರಾಜು ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Rain Effect: ಕಾಫಿನಾಡಾದ ಮಲೆನಾಡು ಭಾಗದಲ್ಲಿ ನಿರಂತರವಾಗಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯಿತಿದ್ದು, ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ ಆಗುತ್ತಿದೆ. ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಬಾಳೂರಿನಲ್ಲಿ ಭಾರೀ ಮಳೆ ಆಗಿ, ಒಂದೆಡೆ ಕಾಫಿ ಬೆಳೆ ಕೊಚ್ಚಿ ಹೋಗ್ತಿದೆ. ಮತ್ತೊಂದೆಡೆ ಭಾರೀ ಮಳೆ-ಗಾಳಿಗೆ ಕಾಫಿ ಬೆಳೆ ನೆಲಕ್ಕೆ ಬೀಳಲು ಪ್ರಾರಂಭವಾಗಿದೆ.
ತಮಿಳುನಾಡಿನಲ್ಲಿ ಧಾರಾಕಾರ ಮಳೆ.. ಜನಜೀವನ ಅಸ್ತವ್ಯಸ್ತ
ತಮಿಳುನಾಡಿನ ಉತ್ತರ ಭಾಗದಲ್ಲಿ ರಾತ್ರಿಯಿಡೀ ಸುರಿದ ಮಳೆ
ಭಾರೀ ಮಳೆಗೆ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ
ಮುಖ್ಯ ರಸ್ತೆಯಲ್ಲಿ ನಿಂತ ನೀರು.. ವಾಹನ ಸವಾರರು ಪರದಾಟ
ಚೆನ್ನೈ,ಕಾಂಚೀಪುರಂ,ವಿಲ್ಲುಪುರಂ ಭಾಗಗಳಲ್ಲಿ ವರುಣಾರ್ಭಟ
Tamil Nadu School Holiday: ವಾಯುಭಾರ ಕುಸಿತದಿಂದ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದಾಗಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ರಾಯಚೂರು, ಬೀದರ್, ಕೊಪ್ಪಳ, ಕಲಬುರಗಿ ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಾಮರಾಜನಗರರದಲ್ಲೂ ಸಾಧಾರಣ ಮಳೆ
ಶಿವಮೊಗ್ಗ, ಹಾಸನ, ಚಿತ್ರದುರ್ಗ, ವಿಜಯನಗರ, ಬಳ್ಳಾರಿ ಬಳ್ಳಾರಿಯಲ್ಲಿ ಮಳೆ ಪ್ರಮಾಣ ಕಡಿಮೆ
ವಾಯುವ್ಯ ದಿಕ್ಕಿನಿಂದ ಗಾಳಿ ಬೀಸುತ್ತಿರೋ ಹಿನ್ನೆಲೆ ತಾಪಮಾನ ಹೆಚ್ಚಳ. ಜೂನ್ ನಿಂದ ಇಲ್ಲಿವರೆಗೆ ವಾಡಿಕೆಯಂತೆ 666 ಮಿ.ಮಿ ಮಳೆಯಾಗಬೇಕಿತ್ತು. ಸದ್ಯ ಇಲ್ಲಿಯ ತನಕ 499 ಮಿ.ಮಿ ಅಷ್ಟೇ ಮಳೆಯಾಗಿದೆ.
ಆಗಸ್ಟ್ 9, 2019. ಮಲೆನಾಡಿಗರ ಪಾಲಿನ ಬ್ಲಾಕ್ ಡೇ
ಮಲೆನಾಡಿನಲ್ಲಿ ಒಂದೇ ರಾತ್ರಿ ಸುರಿದ 22 ಇಂಚು ಮಳೆ
ಗ್ರಾಮವೇ ಕೊಚ್ಚಿ ಹೋಗಿ, ಗುಡ್ಡಗಳು ಕಳಚಿದ್ದವು
ಉಟ್ಟ ಬಟ್ಟೆಯಲ್ಲಿ ಓಡಿ ಜೀವ ಉಳಿಸಿಕೊಂಡಿದ್ದ ಜನ
ಬೀದರ್ನ ಕಮಲನಗರ ತಾ. ಬಸನಾಳ ಗ್ರಾಮಸ್ಥರ ಅಳಲು ತಡವಾಗಿ ಬಿತ್ತನೆ ಮಾಡಿದ ಬೆಳೆಗಳು ಮಳೆಗೆ ನೀರು ಪಾಲು ಎರಡೆರಡು ಬಾರಿ ಬಿತ್ತನೆ ಮಾಡಿದ್ರೂ ವರುಣನ ಅವಕೃಪೆ ಸೋಯಾ, ತೋಗರಿ, ಉದ್ದು, ಹೆಸರು ಬೆಳೆಗಳು ಮಣ್ಣುಪಾಲು ಹಲವು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿದ್ರೂ ಸಿಗದ ಪರಿಹಾರ ಅನ್ನದಾತರ ನೆರವಿಗೆ ಸರ್ಕಾರ ಧಾವಿಸುವಂತೆ ಗ್ರಾಮಸ್ಥರ ಆಗ್ರಹ
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ನಿನ್ನೆ ರಾತ್ರಿ ಗೌರಮ್ಮ ಮನೆಯೊಳಗೆ ಅಡುಗೆ ಮಾಡುತ್ತಾ ಕುಳಿತಿದ್ದರು. ಈ ವೇಳೆ ಏಕಾಏಕಿ ಗೋಡೆ ಕುಸಿದು ವೃದ್ದೆಯ ಮೇಲೆ ಬಿದ್ದಿದ್ದು ಗೌರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತಿ ನಟರಾಜ್ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮರಗಿಡಿ ಗ್ರಾಮದಲ್ಲಿ ಐದು ಬಡ ಕುಟುಂಬಗಳು ವಾಸಿಸುತ್ತಿದ್ದು, ಶಾಶ್ವತ ನೆಲೆಯಿಲ್ಲದೆ ತಾತ್ಕಾಲಿಕವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಎಲ್ಲರೂ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಾಗಿದ್ದು, ಮನೆಗಳಿಗೆ ಇದುವರೆಗೂ ಹಕ್ಕುಪತ್ರ ಕೂಡ ನೀಡಿಲ್ಲ.
ಅಂಗನವಾಡಿ, ಪ್ರೈಮರಿ, ಹೈಸ್ಕೂಲ್, ಪಿಯು ಕಾಲೇಜಿಗೆ ರಜೆ
ತಗ್ಗು ಪ್ರದೇಶ, ನದಿ, ಸಮುದ್ರಕ್ಕೆ ಮಕ್ಕಳು ಹೋಗದಂತೆ ಎಚ್ಚರಿಕೆ
ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಸೂಚನೆ
ಜಿಲ್ಲಾ-ತಾಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಲು ಸೂಚನೆ
ಹಾಗೂ ವಿಪತ್ತು ನಿರ್ವಹಣೆಯನ್ನ ಚಾಚೂತಪ್ಪದೆ ಪಾಲಿಸಲು ಆದೇಶ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.