ಅತಿವೃಷ್ಟಿಯ ಹೊಡೆತಕ್ಕೆ ಸಿಲುಕಿದ ರೈತಾಪಿ ವರ್ಗಕ್ಕೆ ಈಗ ಮತ್ತೆ ಗಾಯದ ಮೇಲೆ ಬರೆ ಬಿದ್ದಿದೆ. ಸಾಲಸೋಲ ಮಾಡಿ ರೈತರು ಬೆಳೆ ಬೆಳೆದಿದ್ದು, ಅತಿಯಾದ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಯಾದಗಿರಿ ರೈತರ ಸ್ಥಿತಿ.
ಅಥಣಿ ತಾಲೂಕಿನಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ಯಲ್ಲಮ್ಮವಾಡಿ ಕೆರೆ ತುಂಬಿ ದೇವಸ್ಥಾನ ಮುಂಭಾಗದ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ದೇವಸ್ಥಾನ ಸುತ್ತಲೂ ನೀರು ಆವರಿಸಿದೆ. ನವರಾತ್ರಿ ಹಬ್ಬದ ಪ್ರಯುಕ್ತ ದಿನನಿತ್ಯ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. ಸದ್ಯ ದೇವಸ್ಥಾನ ಜಲ ದಿಗ್ಬಂಧನಗೊಂಡ ಹಿನ್ನೆಲೆ ಭಕ್ತರು ಹಳ್ಳ ದಾಟಿಕೊಂಡು ದೇವರ ದರ್ಶನವನ್ನು ಪಡೆಯುತ್ತಿದ್ದಾರೆ.
ಧಾರವಾಡ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದೆ. ಕುಂದಗೋಳ ತಾಲೂಕು ವರುಣನ ಆರ್ಭಟಕ್ಕೆ ನಲುಗಿದೆ. ಕುಂದಗೋಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಳೆಯಾಗ್ತಿದ್ದು ಮನೆಗಳಿಗೆ ನೀರು ನುಗ್ಗಿದೆ.. ರಸ್ತೆಗಳು ಕೆರೆಯಂತಾಗಿವೆ..
ರಾತ್ರಿ ಇಡೀ ಸುರಿದ ಮಳೆಗೆ ಬೆಂಗಳೂರಿನ ಜನ ತತ್ತರಿಸುವಂತಾಗಿದೆ. ಯುಮಲೂರಿನಲ್ಲಿ ಮಳೆಯಿಂದ ಜನರ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆ ಮೇಲೆ ನಿಂತಿರುವ ನೀರು ಇನ್ನೂ ಕಡಿಮೆಯಾಗಿಲ್ಲ. ಯಮಲೂರು ಬಳಿ ಮಳೆಯಿಂದ ಜಲಪ್ರಳಯ ಸೃಷ್ಟಿಯಾಗಿದೆ. ಅಪಾರ್ಟ್ಮೆಂಟ್ ನಿವಾಸಿಗಳು ಟ್ರ್ಯಾಕ್ಟರ್ನಲ್ಲಿ ತೆರಳ್ತಿದ್ದಾರೆ.
ಬೆಂಗಳೂರು ಜಲ ಮಂಡಳಿ, ಬಿಬಿಎಂಪಿ ಕೆಲವೆಡೆ ಬಿಡಿಎ ಹಾಗೂ ಬೆಸ್ಕಾಂಗಳ ಮಧ್ಯೆ ಸಮನ್ವಯದ ಅವಶ್ಯಕತೆ ಇದೆ. ಬೇಜವಾಬ್ದಾರಿಯಿಂದ ನಾಲ್ಕು ಸಂಸ್ಥೆಗಳು ನಡೆದುಕೊಳ್ಳಬಾರದು. ಬೆಂಗಳೂರು ಜಲ ಮಂಡಳಿ ಒಳಚರಂಡಿ ಘಟಕಗಳನ್ನು ಸುಸ್ಥಿತಿಯಲ್ಲಿ ಇರುವಂತೆ ಮಾಡಬೇಕು. ಇದಕ್ಕೆ ಕಾಲಮಿತಿ ಹಾಕಿಕೊಳ್ಳಬೇಕು.
ಮಳೆಗೆ ಶಾಲೆ ಹಾಗೂ ಮನೆಗಳು ಜಲಾವೃತ. ಮನೆಯಲ್ಲಿದ್ದ ದವಸ ಧಾನ್ಯಗಳು ನೀರಿನಲ್ಲಿ ಮುಳುಗಡೆ. ರಾಯಚೂರು ಜಿಲ್ಲೆಯಲ್ಲಿ ಸುರಿದ ಮಳೆಗೆ ಅಪಾರ ಹಾನಿ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕಕ್ಕಲದೊಡ್ಡಿ ಗ್ರಾಮದಲ್ಲಿ ಘಟನೆ. ಗ್ರಾಮದ ಬಹುತೇಕ ಮನೆಗಳಿಗೆ ನುಗ್ಗಿದ ನೀರು.
ರಾಮನಗರ ಜಿಲ್ಲೆಯಲ್ಲಿ ಮತ್ತೆ ವರುಣನ ಅಬ್ಬರ. ಜಿಲ್ಲೆಯ ಹಲವೆಡೆ ಜೋರು ಮಳೆ. ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ. ಕೆರೆ ಕಟ್ಟೆ ಕೋಡಿ ಬಿದ್ದು ರಸ್ತೆ, ಮನೆ, ಜಮೀನುಗಳಿಗೆ ನುಗ್ಗಿದ ನೀರು. ಕಳೆದೆರಡು ದಿನಗಳ ಮಳೆಯ ಅಬ್ಬರಕ್ಕೆ ಜನ ಹೈರಾಣು.
ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಬಿಟ್ಟು ಬಿಡದೆ ಮಳೆ ಅಬ್ಬರಿಸುತ್ತಿದೆ. ಪರಿಣಾಮ ರಾಜ್ಯದ ವೇದಗಂಗಾ-ದೂದ್ ಗಂಗಾ ನದಿಗೆ ನೀರಿನ ಒಳಹರಿವು ಹೆಚ್ಚಳವಾಗಿದಚೆ. ಚಿಕ್ಕೋಡಿಯ ಎಂಟು ಸೇತುವೆಗಳು ಸಂಪೂರ್ಣ ಜಲಾವೃತವಾಗಿವೆ. ನದಿಗಳಿಂದ ಕೃಷಿ ಜಮೀನುಗಳಿಗೆ ನೀರು ನುಗ್ಗುತ್ತಿದ್ದು, ಅಪಾರ ಹಾನಿ ಸಂಭವಿಸಿದೆ. ಗ್ರಾಮಸ್ಥರು ಕೂಡ ಪರದಾಡುವಂತಾಗಿದೆ.
Priyank Kharge : ಭಾರೀ ಮಳೆಯಿಂದಾಗಿ ಕಲ್ಯಾಣ ಕರ್ನಾಟಕದಲ್ಲಿ ರೈತರು ಬೆಳೆದ ಬೆಳೆಗಳು ನಾಶವಾಗಿದ್ದು, ಜನರು ಮೂಲಭೂತ ಸೌಕರ್ಯಗಳಿಲ್ಲದೇ ಹೈರಾಣರಾಗಿದ್ದಾರೆ. ಆದರೂ ಕಲ್ಯಾಣ ಕರ್ನಾಟಕದ ಬಿಜೆಪಿ ಶಾಸಕರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ರಸ್ತೆಗೆ ಅಡ್ಡಲಾಗಿ ಗುಡ್ಡ ಕುಸಿದು ಶಾಸಕ ಬೋಪಯ್ಯ ಒಂದೂವರೆ ಗಂಟೆಗಳ ಕಾಲ ರಸ್ತೆಯಲ್ಲೇ ಸಿಲುಕಿದ್ದ ಘಟನೆ ನಡೆದಿದೆ. ಕೊಡಗಿನ ಭಾಗಮಂಡಲ ಸಮೀಪದ ಕರಿಕೆ ವ್ಯಾಪ್ತಿಯಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಗುಡ್ಡ ಕುಸಿದಿದೆ. ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿ ಹಿಂದಿರುಗುತ್ತಿದ್ದಾಗ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.. ಅರಣ್ಯ ಇಲಾಖೆ ಸಿಬ್ಬಂದಿ 1 ಗಂಟೆ ಬಳಿಕ ಮರ ತೆರವು ಮಾಡಿದ್ದಾರೆ.
ಮಳೆಯ ಹೊಡೆತಕ್ಕೆ ಸಿಲುಕಿದ ಕರುನಾಡಿನ ಸೇತುವೆಗಳು ಜಲಾವೃತವಾಗಿದೆ.. ಸಂಚಾರ ಅಸ್ತವ್ಯಸ್ತವಾಗಿದೆ.. ನಿರಂತರ ಮಳೆಯಿಂದ ಜನರು ಹೈರಾಣರಾಗಿದ್ದಾರೆ.. ಈ ಕುರಿತದ ಒಂದು ಸಂಪೂರ್ಣ ವರದಿ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.