ಎಸ್ಬಿಐನ ಅಧಿಕೃತ ವೆಬ್ಸೈಟ್ ಪ್ರಕಾರ, ಡೋರ್ ಸ್ಟೆಪ್ ಬ್ಯಾಂಕಿಂಗ್ ಸೌಲಭ್ಯಕ್ಕಾಗಿ, ಮೊದಲು ಹೋಂ ಬ್ರಾಂಚ್ ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದು ಕೆಲವೇ ಕ್ಷಣಗಳಲ್ಲಿ ಮುಗಿದು ಹೋಗುವ ಪ್ರಕ್ರಿಯೆ. ಇದನ್ನು ಒಮ್ಮೆ ಮಾಡಿದರೆ ಸಾಕು.
SBI Door Step Banking - ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐ (Stata Bank Of India) ದಲ್ಲಿ ಒಂದು ವೇಳೆ ನೀವೂ ಕೂಡ ಖಾತೆಯನ್ನು ಹೊಂದಿದ್ದರೆ, ಇದೀಗ ನೀವು ಮನೆಯಲ್ಲಿ ಕುಳಿತುಕೊಂಡು ಬ್ಯಾಂಕಿನಿಂದ ಹಣವನ್ನು ಹಿಂಪಡೆಯುವ ಮತ್ತು ಜಮಾ ಮಾಡುವ ಸೌಲಭ್ಯವನ್ನು ಪಡೆಯಲಿರುವಿರಿ. ಇದಲ್ಲದೆ, ಬ್ಯಾಂಕ್ ನಿಮಗೆ ಮನೆಯಿಂದಲೇ ನಿರ್ವಹಿಸಬಹುದಾದ ಹಲವು ಸೌಲಭ್ಯಗಳನ್ನು ಒದಗಿಸಲಿದೆ.
ಡೋರ್ ಸ್ಟೆಪ್ ಬ್ಯಾಂಕಿಂಗ್ ಮೂಲಕ ಈ ಹತ್ತು ಸೇವೆಗಳಿಗೆ ನೀವು ಬ್ಯಾಂಕ್ ಕರ್ಮಚಾರಿಗಳನ್ನು ನೀವಿದ್ದಲ್ಲಿಗೆ ಕರೆಸಿಕೊಳ್ಳಬಹುದು. ಹಣ ಹಾಕುವುದು ಅಥವಾ ಹಣ ತೆಗೆಯುವ ಕೆಲಸಕ್ಕೆ ಬ್ಯಾಂಕ್ ಕರ್ಮಚಾರಿಯನ್ನು ಕರೆಸಿಕೊಳ್ಳಬಹುದು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.