ನಿತ್ಯವೂ ಪ್ರತ್ಯಕ್ಷ ಆಗ್ತಿವೆ ನೆಲದೊಳಗಿದ್ದ ವಿಷಕಾರಿ ಸರ್ಪಗಳು ಮಳೆ ಹೆಚ್ಚಾಗ್ತಿರೋ ಕಾರಣ ತಂಪು ವಾತವರಣ ಹುಡುಕಿಕೊಂಡು ಮನೆಗಳಿಗೆ ಪ್ರವೇಶ ಬಿಬಿಎಂಪಿಗೆ ದಾಖಲಾಗ್ತಿವೆ ಸರ್ಪಗಳ ಕಾಟದ ಕಂಪ್ಲೇಂಟ್ ಪ್ರತಿ ನಿತ್ಯ ಬಿಬಿಎಂಪಿ ಕಂಟ್ರೋಲ್ ರೂಂ ಗೆ ಐವತ್ತಕ್ಕೂ ಹೆಚ್ಚು ಕರೆಗಳು ಮನೆಯೊಳಗೆ, ಕಾಂಪೌಂಡ್ ಒಳಗೆ ಸರ್ಪಗಳ ಕಾಟ ಎಂದು ದೂರು ದಾಖಲು
ಅಂದೊಂದಿತ್ತು ಕಾಲ ಜನ ನಾಯಿ ಬೆಕ್ಕು ಸಾಕಿ ಫೋಟೋ ಹೊಡೆದು ಸ್ಟೇಟಸ್ ಹಾಕ್ತಾ ಇದ್ರು. ಈಗ ಹೆಬ್ಬಾವಿನ ಜೊತೆ ಮುದ್ದು ಮಾಡ್ತಾ ಪ್ರೀತಿಯಿಂದ ಅದನ್ನ ಸಾಕಲು ಶುರು ಮಾಡಿದ್ದಾರಂತೆ, ಜಾಸ್ತಿ ಈಗ ಈ ಪೈಥಾನ್ ಗೆ ಬೇಡಿಕೆಯಂತೆ.. ಅಷ್ಟಕ್ಕೂ ಇದು ನಾವು ಹೇಳ್ತಾ ಇಲ್ಲ, ಈ ಬಗ್ಗೆ ಅನಿಮಲ್ ಶಾಪ್ ಓನರ್ ಸೈಯ್ಯದ್ ಏನ್ ಹೇಳಿದ್ದಾರೆ ಗೊತ್ತಾ...
ನಿನ್ನೆ ಮಧ್ಯ ರಾತ್ರಿ ಪಶ್ಚಿಮ ಬಂಗಾಳದ ಇಬ್ಬರು ಯುವತಿಯರು ಹಾಗೂ ಓರ್ವ ಯುವಕ ಕುಡಿದು ಕಾರಲ್ಲಿ ಹೋಗುತ್ತಿದ್ದರು. ಆಡುಗೋಡಿ ಪಾಸ್ ಪೋರ್ಟ್ ಆಫೀಸ್ ರಸ್ತೆಯ ಬಳಿ ಬರ್ತಿದ್ದಂತೆ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂದಿನ ಎರಡು ಸೀಟ್ ಗಳ ಏರ್ ಬ್ಯಾಗ್ ಓಪನ್ ಆಗಿದೆ. ಮುಂದೆ ಕುಂತಿದ್ದ ಯುವತಿ, ಯುವಕನಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪಿ ಶಿವಾಜಿನಗರದ ರಸೆಲ್ ಮಾರ್ಕೆಟ್ ಹಿಂಭಾಗದಲ್ಲಿರುವ ಆಜಾಂ ಮಸೀದಿ ಬಳಿ ಬದು ಚಂದಾ ಪಡೆದಿದ್ದ. ಬಳಿಕ ರಾತ್ರಿ ಮಸೀದಿಯಲ್ಲಿ ತಂಗಲು ಅವಕಾಶ ಕೇಳಿದ್ದ. ಇದಕ್ಕೆ ಮಸೀದಿ ಸಿಬ್ಬಂದಿ ಇಲ್ಲಿ ತಂಗಲು ಅವಕಾಶವಿಲ್ಲ ಎಂದಿದ್ದರು.
ಸಿಲಿಕಾನ್ ಸಿಟಿಯ ಕೆರೆಗಳು ಕಲುಷಿತಗೋಳ್ಳುತ್ತಿವೆ. ಹೀಗಾಗಿ, ಒಂದೆಡೆ ನೀರನ್ನು ಮುಟ್ಟುವುದಕ್ಕೆ ಸಹ ಜನರು ಹಿಂದೇಟು ಹಾಕುತ್ತಾರೆ. ಆದರೆ ನಗರದಲ್ಲಿ ಇರುವ 196 ಕೆರೆಗಳಲ್ಲಿ ಒಂದು ವರ್ಷದಲ್ಲಿ ಒಟ್ಟು 9126 ಟನ್ ಮೀನು ಉತ್ಪಾದನೆ ಮಾಡಲಾಗಿದೆ.
Basavaraja Bommai: ನಗರದಲ್ಲಿ ಸುರಿದ ಕೆಲವೇ ಗಂಟೆಗಳ ಮಳೆಗೆ ಯುವತಿಯ ಸಾವಾಗಿರುವುದು ಬಹಳ ನೋವಿನ ಸಂಗತಿಯಾಗಿದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದರೂ ಬಿಬಿಎಂಪಿಯವರು ಈ ವರ್ಷ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಸ್ಪಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಇಂದು ದಿಢೀರನೆ ಸುರಿದ ಮಳೆಗೆ ನೀರಿನಲ್ಲಿ ಕಾರೊಂದು ಮುಳುಗಿದ ಘಟನೆ ಕೆ ಆರ್ ಸರ್ಕಲ್ ಅಂಡರ್ ಪಾಸ್ ಬಳಿ ನಡೆದಿದೆ. ಕಬ್ಬನ್ ಪಾರ್ಕ್ ನೋಡಲೆಂದು ಬಂದಿದ್ದ ಆರು ಜನರ ಕುಟುಂಬವೊಂದು ಮಳೆಗೆ ಸಿಲುಕಿದೆ.
ಉದ್ಯಾನ ನಗರಿ ಎಂದೇ ಖ್ಯಾತಿ ಪಡೆದಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಪಿಂಕ್ ಕಲರ್ ನ ಆರ್ಭಟ ಜೋರಾಗಿದೆ. ಪಾರ್ಕ್ ಗಳಲ್ಲಿ ಹೆಜ್ಜೆ ಹೆಜ್ಜೆಗೂ ಪಿಂಕ್ ಕಲರ್ ಕಣ್ಮನ ಸೆಳೆಯುತ್ತಿದೆ. ಕೆಳಗೆ ನೋಡಿದರು ಪಿಂಕ್ ಕಲರ್.. ಆಕಾಶದತ್ತ ನೋಡಿದ್ರೂ ಪಿಂಕ್ ಕಲರ್ ಹೀಗೆ ಗಾರ್ಡನ್ ಸಿಟಿಯಲ್ಲಿ ಎಲ್ಲಿ ನೋಡಿದರೂ ಪಿಂಕ್ ಮೋನಿಯಾ ಮನೆಮಾಡಿದೆ.
ಸಿಲಿಕಾನ್ ಸಿಟಿ ಪೊಲೀಸರನ್ನೂ ಬಿಡದ ಸೈಬರ್ ವಂಚಕರು..!. ಕಾನ್ಸ್ಟೇಬಲ್ಗೆ 73 ಸಾವಿರ ರೂ. ವಂಚಿಸಿದ ಖದೀಮರು. ಅಕೌಂಟ್ ಬ್ಲಾಕ್ ಆಗಿದೆ ಎಂದು ಹೇಳಿ ಪೊಲೀಸಪ್ಪನಿಗೆ ವಂಚನೆ. SBI ಕಸ್ಟಮರ್ ಕೇರ್ ಎಂದು ಹೇಳಿ ಕರೆ ಮಾಡಿದ್ದ ವಂಚಕರು.
ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಮೋಡಕವಿದ ವಾತಾವರಣ, ತುಂತುರು ಮಳೆ, ವಿಪರೀತ ಚಳಿಯ ವಾತಾವರಣ ಇದೆ. ಇದರಿಂದ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಇದರ ಮಧ್ಯೆ ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಚಳಿ, ಗಾಳಿ, ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತದ ಎಫೆಕ್ಟ್. ಚಂಡಮಾರುತದಿಂದ ಎಲ್ಲೆಡೆ ಹವಾಮಾನ ವೈಪರೀತ್ಯ. ಬೆಂಗಳೂರಿನಲ್ಲಿ ಮುಂದುವರೆದ ಜಿಟಿಜಿಟಿ ಮಳೆ, ಚಳಿ. ಜಿಟಿಜಿಟಿ ಮಳೆ, ಚಳಿಗೆ ಸಿಲಿಕಾನ್ ಸಿಟಿ ಜನರ ಪರದಾಟ.
ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಪೆಷಲ್ ಕಮೀಷನರ್ ಆದೇಶದಂತೆ ನಗರದಲ್ಲಿ ದಿನದ ಸಮಯದಲ್ಲಿ ಹೆವಿ ವೆಹಿಕಲ್ ಮೂಮೆಂಟ್ ಸ್ಟಾಪ್ ಆದ ಮೇಲೆ ಸವಾರರು ರಸ್ತೆಯಲ್ಲಿ ಟ್ರಾಫಿಕ್ ಜಂಜಾಟವಿಲ್ಲದೆ ಓಡಾಡುತ್ತಿದ್ದಾರೆ.
ಇತ್ತೀಚೆಗೆ ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ಅವರು ಸದರಿ ಜಾಗ ಸೇರಿದಂತೆ ಇನ್ನಿತರೆ ಒತ್ತುವರಿ ಮತ್ತು ಬಿಡಿಎ ಜಾಗವನ್ನು ಕಬ್ಜ ಮಾಡಿಕೊಂಡಿರುವ ಪ್ರದೇಶಗಳಿಗೆ ಭೇಟಿ ನೀಡಿ, ಕೂಡಲೇ ಇಂತಹ ಜಾಗಗಳನ್ನು ಮರುವಶಕ್ಕೆ ಪಡೆದುಕೊಳ್ಳಬೇಕೆಂದು ಬಿಡಿಎ ಅಧಿಕಾರಿಗಳು ಮತ್ತು ಎಂಜಿನಿಯರ್ ಗಳಿಗೆ ಸೂಚನೆ ನೀಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.