ಸ್ಪಿರಿಟ್ ತುಂಬಿದ ಟ್ಯಾಂಕರ್ ಹಾಗೂ ಡಾಂಬರ್ ಟ್ಯಾಂಕರ್ ನಡುವೆ ಮುಖಾಮುಖಿ ಅಪಘಾತ ಉಂಟಾಗಿ ಸ್ಪಿರಿಟ್ ಟ್ಯಾಂಕರ್ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಮದಳ್ಳಿ ಟೋಲ್ ನಾಕಾ ಬಳಿ ಸಂಬಂಧಿಸಿದೆ.
ಬ್ರೇಕ್ ಫೇಲ್ ಆಗಿ ಡೀಸೆಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ವಿಜಯಪುರ ನಗರ ಹೊರವಲಯದ ರಂಭಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ನಡೆದಿದೆ. ಕಲಬುರಗಿಯಿಂದ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣಕ್ಕೆ ಹೊರಟಿದ್ದ ವೇಳೆ ಟ್ಯಾಂಕರ್ ಪಲ್ಟಿಯಾಗಿ ಟ್ಯಾಂಕರ್ನಿಂದ ಡೀಸೆಲ್ ಸೋರಿಕೆಯಾಗಿದೆ. ಇನ್ನು ಸೋರಿಕೆಯಾದ ಡೀಸೈಲ್ ಅನ್ನು ಬಾಟಲಿಗಳನ್ನು ಹಿಡಿದುಕೊಂಡು ಸಾರ್ವಜನಿಕರು ತುಂಬಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.