Budget Session 2022 Updates: ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ (Ramnath Kovind) ಅವರ ಭಾಷಣದ (President Address) ಮೂಲಕ ಈ ವರ್ಷದ ಮೊದಲ ಬಜೆಟ್ ಅಧಿವೇಶನ ಆರಂಭಗೊಂಡಿದೆ.
ಕೇಂದ್ರ ಸರ್ಕಾರ ಫೆ.1ರಂದು ಮಂಡಿಸಲಿರುವ ಬಜೆಟ್ನಲ್ಲಿ ಸಾಮಾಜಿಕ ಪಿಂಚಣಿಯನ್ನು ಮೂರು ಸಾವಿರಕ್ಕೆ ಏರಿಸಿ ಇತರೆ ಸೌಲಭ್ಯಗಳನ್ನು ಒದಗಿಸುವ ನಿರೀಕ್ಷೆ ಈ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಹಲವು ಸಂಘಟನೆಗಳು ತಿಳಿಸಿವೆ. ಪ್ರಸ್ತುತ ದೇಶದಲ್ಲಿ ಹಿರಿಯ ನಾಗರಿಕರ ಜನಸಂಖ್ಯೆ 14 ಕೋಟಿ ಇದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ‘ವರ್ಕ್ ಫ್ರಮ್ ಹೋಮ್’ ಮಾಡುವವರಿಗೆ ದೊಡ್ಡ ರಿಲೀಫ್ ಸಿಗುವ ನಿರೀಕ್ಷೆ ಇದೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರ ಬಜೆಟ್ನಲ್ಲಿ ವೇತನದಾರರಿಗೆ ಸರ್ಕಾರದಿಂದ ಯಾವುದೇ ವಿಶೇಷ ಪರಿಹಾರ ಸಿಕ್ಕಿರಲಿಲ್ಲ.
2014ರಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಭಾಷಣಕ್ಕೆ 2 ಗಂಟೆ 10 ನಿಮಿಷ ತೆಗೆದುಕೊಂಡಿದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2019ರ ಬಜೆಟ್ ಭಾಷಣವನ್ನು 2 ಗಂಟೆ 5 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು.
2022 ರ ಬಜೆಟ್ ನಲ್ಲಿ ಎಲ್ಲಾ ಕ್ಷೇತ್ರಗಳು ಹಲವಾರು ನಿರೀಕ್ಷೆಗಳನ್ನು ಹೊಂದಿದೆ, ಅದು ಕೃಷಿ, ಆರೋಗ್ಯ ಮತ್ತು ರಿಯಲ್ ಎಸ್ಟೇಟ್ ಅಥವಾ ಉದ್ಯಮಿಗಳು ಮತ್ತು ಸಂಬಳ ವೃತ್ತಿಪರರಂತಹ ವ್ಯಕ್ತಿಗಳು ಕೂಡ ಇದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.