ಕೆಪಿ ಶರ್ಮಾ ಒಲಿ ನೇತೃತ್ವದ ನೇಪಾಳ ಸರ್ಕಾರವು ಭಾರತೀಯ ಭೂಪ್ರದೇಶಗಳನ್ನು ನೇಪಾಳಿ ಎಂದು ತೋರಿಸುವ ಹೊಸ ನೇಪಾಳಿ ನಕ್ಷೆಯನ್ನು ವಿಶ್ವಸಂಸ್ಥೆಗೆ ಕಳುಹಿಸಲು ಯೋಜಿಸುತ್ತಿದ್ದರೂ, ನ್ಯೂಯಾರ್ಕ್ ಮೂಲದ ಅಂತರ್ ಸರ್ಕಾರಿ ಸಂಸ್ಥೆ ಅದನ್ನು ತನ್ನ ಅಧಿಕೃತ ವ್ಯವಹಾರಗಳಲ್ಲಿ ಬಳಸುವುದಿಲ್ಲ. ಯುಎನ್ ವೆಬ್ಸೈಟ್ ನೇಪಾಳಿ ಪ್ರದೇಶಗಳೆಂದು ಹೇಳಿಕೊಳ್ಳುವ ಪ್ರದೇಶಗಳನ್ನು ತೋರಿಸುವುದಿಲ್ಲ.
COVID-19 ಸಾಂಕ್ರಾಮಿಕ ರೋಗದ ಆರ್ಥಿಕ ಕುಸಿತದಿಂದಾಗಿ ತೀವ್ರ ಆಹಾರ ಅಭದ್ರತೆಯನ್ನು ಎದುರಿಸುತ್ತಿರುವ ಜನರ ಸಂಖ್ಯೆ ಈ ವರ್ಷ ಸುಮಾರು 265 ದಶಲಕ್ಷಕ್ಕೆ ತಲುಪಬಹುದು ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (WFP) ಮಂಗಳವಾರ ತಿಳಿಸಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಶಾಶ್ವತ ಸದಸ್ಯರಾಗಿ ಭಾರತ ಮತ್ತು ಬ್ರೆಜಿಲ್ ಪ್ರವೇಶಿಸುವುದಕ್ಕೆ ಚೀನಾ ಅಡ್ಡಿಯಾಗಿದೆ ಎನ್ನಲಾಗಿದೆ, ಎಲ್ಲಾ ಪಕ್ಷಗಳು ಈ ವಿಷಯದಲ್ಲಿ ಪ್ರಮುಖ ವ್ಯತ್ಯಾಸಗಳನ್ನು ಹೊಂದಿವೆ ಮತ್ತು ಬದಲಿಗೆ ಪ್ಯಾಕೇಜ್ ಪರಿಹಾರವನ್ನು ಚೀನಾ ಪ್ರತಿಪಾದಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಭಯೋತ್ಪಾದಕ ಮಸೂದ್ ಅಜರ್ ಅವರನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈಗ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ. ಈ ಹಿಂದೆ ನಾಲ್ಕು ಬಾರಿ ಅವರನ್ನು ಈ ಪಟ್ಟಿಗೆ ಸೇರಿಸುವಲ್ಲಿನ ಭಾರತದ ಯತ್ನಕ್ಕೆ ಚೀನಾ ಅಡ್ಡಿಯುಂಟು ಮಾಡಿತ್ತು. ಈಗ ಅದು ಭದ್ರತಾ ಮಂಡಳಿಯಲ್ಲಿ ತನ್ನ ನಿರ್ಬಂಧಗಳನ್ನು ಕೈ ಬಿಟ್ಟ ಹಿನ್ನಲೆಯಲ್ಲಿ ವಿಶ್ವಸಂಸ್ಥೆ ಮಸೂದ್ ಅಜರ್ ರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ.
ವಿಶ್ವಸಂಸ್ಥೆ ಭಾರತಕ್ಕೆ ದೀಪಾವಳಿ ಪ್ರಯುಕ್ತ ವಿಶೇಷ ಗಿಫ್ಟ್ ನ್ನು ನೀಡಿದೆ.ವಿಶ್ವಸಂಸ್ಥೆಯ ಪೋಸ್ಟಲ್ ಸಿಸ್ಟಮ್ ಹಬ್ಬದ ಪ್ರಯುಕ್ತ ದೀಪಾವಳಿಯ ಹಬ್ಬವನ್ನು ಬಿಂಬಿಸುವ ಎರಡು ಸ್ಟಾಂಪ್ ಗಳನ್ನು ಬಿಡುಗಡೆ ಮಾಡಿ ದುಷ್ಟ ಶಕ್ತಿಗಳ ಮೇಲೆ ಒಳ್ಳೆಯತನದ ಗೆಲುವು ಹಬ್ಬವನ್ನು ಹೇಳಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.