Urban Credit Society: ಸೊಸೈಟಿಯವರ ಈ ನಡಾವಳಿಕೆಯಿಂದ ತಮಗೆ ಮೋಸವಾಗಿದೆ ಮತ್ತು ಅವರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರಿಬ್ಬರು ದಿ:02/11/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಧಾರವಾಡ ಕಮಲಾಪುರ ನಿವಾಸಿ ಅನ್ನಪೂರ್ಣಾ ಹುಲ್ಲಮನಿ ಎಂಬುವವರು ಎದುರುದಾರ ಧಾರವಾಡ ವಿಕಾಸ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್, ಸೊಸೈಟಿಯಲ್ಲಿ ದಿ:17/02/2020 ರಂದು ರೂ.1,50,000/- ಮತ್ತು ದಿ:07/05/2021 ರಂದು ರೂ.1,00,000/-ಗಳನ್ನು ಒಂದು ವರ್ಷದ ಅವಧಿಗೆ ಮುದ್ದತ್ತು ಠೇವಣಿ ಇಟ್ಟಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.