ಠೇವಣಿ ಹಣ ಹಿಂದಿರುಗಿಸದ ಅರ್ಬನ್‍ ಕ್ರೆಡಿಟ್ ಸೊಸೈಟಿಗೆ ದಂಡ ವಿಧಿಸಿ, ಪರಿಹಾರ ನೀಡಲು ಆದೇಶ

 ಧಾರವಾಡ ಕಮಲಾಪುರ ನಿವಾಸಿ ಅನ್ನಪೂರ್ಣಾ ಹುಲ್ಲಮನಿ ಎಂಬುವವರು ಎದುರುದಾರ ಧಾರವಾಡ ವಿಕಾಸ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್, ಸೊಸೈಟಿಯಲ್ಲಿ ದಿ:17/02/2020 ರಂದು ರೂ.1,50,000/- ಮತ್ತು ದಿ:07/05/2021 ರಂದು ರೂ.1,00,000/-ಗಳನ್ನು ಒಂದು ವರ್ಷದ ಅವಧಿಗೆ ಮುದ್ದತ್ತು ಠೇವಣಿ ಇಟ್ಟಿದ್ದರು.

Written by - Manjunath N | Last Updated : Feb 8, 2024, 04:45 PM IST
  • ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:04/10/2023 ರಂದು ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ಫಿರ್ಯಾದಿ ಸಲ್ಲಿಸಿದ್ದರು
  • ಖರ್ಚುವೆಚ್ಚ ಅಂತಾ ರೂ.10,000/-ಗಳನ್ನು ಕೊಡುವಂತೆ ಎದುರುದಾರ ಸೊಸೈಟಿಯವರಿಗೆ ಆಯೋಗ ಆದೇಶಿಸಿದೆ
 ಠೇವಣಿ ಹಣ ಹಿಂದಿರುಗಿಸದ ಅರ್ಬನ್‍ ಕ್ರೆಡಿಟ್ ಸೊಸೈಟಿಗೆ ದಂಡ ವಿಧಿಸಿ, ಪರಿಹಾರ ನೀಡಲು ಆದೇಶ title=

ಧಾರವಾಡ : ಧಾರವಾಡ ಕಮಲಾಪುರ ನಿವಾಸಿ ಅನ್ನಪೂರ್ಣಾ ಹುಲ್ಲಮನಿ ಎಂಬುವವರು ಎದುರುದಾರ ಧಾರವಾಡ ವಿಕಾಸ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್, ಸೊಸೈಟಿಯಲ್ಲಿ ದಿ:17/02/2020 ರಂದು ರೂ.1,50,000/- ಮತ್ತು ದಿ:07/05/2021 ರಂದು ರೂ.1,00,000/-ಗಳನ್ನು ಒಂದು ವರ್ಷದ ಅವಧಿಗೆ ಮುದ್ದತ್ತು ಠೇವಣಿ ಇಟ್ಟಿದ್ದರು.

ಠೇವಣಿ ಅವಧಿ ಮುಗಿದ ಮೇಲೆ 2 ಠೇವಣಿಗಳ ಹಣಕೊಡುವಂತೆ ದೂರುದಾರರು ಹಲವು ಬಾರಿ ಎದುರುದಾರ ಸೊಸೈಟಿಯವರಿಗೆ ವಿನಂತಿಸಿದರೂ ಅವರು ಠೇವಣಿ ಹಣ ಅಥವಾ ಬಡ್ಡಿಯನ್ನು ವಾಪಸ್ಸುಕೊಟ್ಟಿರಲಿಲ್ಲ. ಅಂತಹ ಎದುರುದಾರ ಸೊಸೈಟಿಯವರ ನಡಾವಳಿಕೆಯಿಂದ ತನಗೆ ಮೋಸವಾಗಿದೆ ಮತ್ತು ಅವರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:04/10/2023 ರಂದು ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ಫಿರ್ಯಾದಿ ಸಲ್ಲಿಸಿದ್ದರು.

ಇದನ್ನೂ ಓದಿ: “ನಾನು ಬಿಗ್ ಬಾಸ್’ಗೆ ಹೋಗೋಕೆ ಕಾರಣ ಅವರು”- ಕಡೆಗೂ ‘ಆ’ ವ್ಯಕ್ತಿ ಯಾರೆಂದು ಸತ್ಯ ಬಾಯ್ಬಿಟ್ಟ ಸಂಗೀತ

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ಠೇವಣಿ ಅವಧಿ ಮುಗಿದ ಮೇಲೆ ಕರಾರಿನಂತೆ ಬಡ್ಡಿ ಸಮೇತ ಠೇವಣಿದಾರರಿಗೆ ಹಣ ಹಿಂದಿರುಗಿಸುವುದು ಸೊಸೈಟಿಯ ಕರ್ತವ್ಯವಾಗಿದೆ. ಆದರೆ ಠೇವಣಿ ಅವದಿ ಮುಗಿದ ಸುಮಾರು 2-3 ವರ್ಷ ಕಳೆದರೂ ದೂರುದಾರರಿಗೆ ಠೇವಣಿ ಹಣ ಅಥವಾ ಅದರ ಮೇಲಿನ ಬಡ್ಡಿ ಹಿಂದಿರುಗಿಸದೇ ಇರುವ ಎದುರುದಾರ ಸೊಸೈಟಿಯವರ ನಡಾವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಯಾ ಪಟು ್ಟತೀರ್ಪು ನೀಡಿದೆ. ದೂರುದಾರರಿಗೆ ಅವರ ಠೇವಣಿ ಹಣಒಟ್ಟು ರೂ.2,50,000/- ಮತ್ತು ಅದರ ಮೇಲೆ ಶೇ13.5% ರಂತೆ ಠೇವಣಿ ಇಟ್ಟ ದಿನಾಂಕದಿಂದ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ಎದುರುದಾರ ಸೊಸೈಟಿಗೆ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ ರೂ.25,000/- ಪರಿಹಾರ ಮತ್ತು ಅವರ ಪ್ರಕರಣ ಖರ್ಚುವೆಚ್ಚ ಅಂತಾ ರೂ.10,000/-ಗಳನ್ನು ಕೊಡುವಂತೆ ಎದುರುದಾರ ಸೊಸೈಟಿಯವರಿಗೆ ಆಯೋಗ ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News